Friday, 23 Apr, 11.19 am ಉದಯವಾಣಿ

ಟಾಪ್ 10 ಸುದ್ದಿ
ವಿದೇಶದಲ್ಲಿ ಚಿತ್ರೀಕರಣಗೊಂಡ ಮೊದಲ ಕನ್ನಡ ಚಿತ್ರ ಅಣ್ಣಾವ್ರದ್ದಾಗಿತ್ತು

ವರನಟ ಡಾ. ರಾಜಕುಮಾರ್‌ ಅವರ ಸಿನಿಮಾಗಳು ತೆರೆಮುಂದೆ ಮತ್ತು ತೆರೆಹಿಂದೆ ಹತ್ತು ಹಲವು ಪ್ರಥಮಗಳಿವೆ ಕಾರಣವಾಗಿರುವ ಉದಾಹರಣೆಗಳು ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಸಾಕಷ್ಟು ಸಿಗುತ್ತವೆ. ಅಂಥದ್ದೊಂದು ದಾಖಲೆಯ ಉದಾಹರಣೆ ಅವರ “ಆಪರೇಷನ್‌ ಡೈಮಂಡ್‌ ರಾಕೇಟ್‌’ ಸಿನಿಮಾ.

ಈಗೆಲ್ಲ ಕನ್ನಡ ಸಿನಿಮಾಗಳ ಹಾಡುಗಳು ಮತ್ತು ದೃಶ್ಯಗಳನ್ನು ವಿದೇಶಗಳಲ್ಲಿ ಚಿತ್ರೀಕರಿಸುವುದು ಸರ್ವೇ ಸಾಮಾನ್ಯ. ಆದರೆ ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ವಿದೇಶದಲ್ಲಿ ಚಿತ್ರೀಕರಿಸಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಅಣ್ಣಾವ್ರ “ಆಪರೇಷನ್‌ ಡೈಮಂಡ್‌ ರಾಕೇಟ್‌’ ಸಿನಿಮಾ.

ಜನ್ 'ಧನು' ಖಾತೆ: ಬ್ಯಾಡ್‌ ಬಾಯ್‌ ಇಮೇಜ್‌ ತಂದ ಸೌಭಾಗ್ಯ

ಅಲ್ಲಿಯವರೆಗೆ ಸ್ಟುಡಿಯೋಗಳಲ್ಲಿ ಒಳಾಂಗಣ ಚಿತ್ರೀಕರಣ ಚಿತ್ರೀಕರಣ, ದೇಶದ ಒಳಗೆ ವಿವಿಧ ರಾಜ್ಯಗಳಲ್ಲಿ ಹೊರಾಂಗಣ ಚಿತ್ರೀಕರಣ ನಡೆಯುತ್ತಿತ್ತು. ಕನ್ನಡ ಸಿನಿಮಾವೊಂದನ್ನು ಬೇರೆ ದೇಶಕ್ಕೆ ಹೋಗಿ ಚಿತ್ರೀಕರಿಸುವ ಸಾಹಸವನ್ನು ಯಾರೂ ಮಾಡಿರಲಿಲ್ಲ. ಇಂಥದ್ದೊಂದು ಹೊಸ ಸಾಹಸ ಮಾಡಿ ದಾಖಲೆ ಬರೆದಿದ್ದು. “ಆಪರೇಷನ್‌ ಡೈಮೆಂಡ್‌ ರಾಕೇಟ್‌’ ಸಿನಿಮಾ.

ಆಗಿನ ಕಾಲದಲ್ಲೇ ಸುಮಾರು 38 ಲಕ್ಷ ರೂ. ಖರ್ಚು ಮಾಡಿ, ಈ ಸಿನಿಮಾವನ್ನು ನೇಪಾಳದಲ್ಲಿ ಚಿತ್ರೀಕರಣ ಮಾಡಲಾಗಿತ್ತು. ನೇಪಾಳ ಮತ್ತು ಚೀನಾದ ಗಡಿ ಭಾಗದವರೆಗೂ ಹಲವು ಸುಂದರ ತಾಣಗಳಲ್ಲಿ ಈ ಸಿನಿಮಾದ ಚಿತ್ರೀಕರಣನಡೆಸಲಾಗಿತ್ತು.

ಇದರ ನಂತರ ನಟ, ನಿರ್ದೇಶಕ ಕಂ ನಿರ್ಮಾಪಕ ದ್ವಾರಕೀಶ್‌ “ಸಿಂಗಾಪುರದಲ್ಲಿ ರಾಜಾಕುಳ್ಳ’ ಚಿತ್ರವನ್ನು ವಿದೇಶದಲ್ಲಿ ಚಿತ್ರೀಕರಿಸಿದರು. ಅದಾದ ನಂತರ ಒಂದೊಂದಾಗಿ ಸಿನಿಮಾಗಳು ವಿದೇಶಗಳಲ್ಲಿ ಚಿತ್ರೀಕರಣವಾಗಲು ಪ್ರಾರಂಭವಾಯಿತು. ಹೀಗೆ ಕನ್ನಡ ಚಿತ್ರರಂಗದಲ್ಲಿ ವಿದೇಶಿ ಚಿತ್ರೀಕರಣದ ಟ್ರೆಂಡ್‌ ಹುಟ್ಟುಹಾಕಿದ್ದು ಅಣ್ಣಾವ್ರ ಸಿನಿಮಾ ಅನ್ನೋದು ಗಮನಿಸಬೇಕಾದ ಅಂಶ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Udayavani
Top