ಟಾಪ್ 10 ಸುದ್ದಿ
ವಿದೇಶಕ್ಕೆ ಹಾರಲು ರೆಡಿಯಾದ ಗಾಳಿಪಟ 2

ಯೋಗರಾಜ್ ಭಟ್ ನಿರ್ದೇಶನದ “ಗಾಳಿಪಟ-2′ ಚಿತ್ರ ಚಿತ್ರೀಕರಣಕ್ಕೆ ಅಣಿಯಾಗಿದೆ. ಅದು ವಿದೇಶದಲ್ಲಿ. ಹೌದು, “ಗಾಳಿಪಟ-2′ ಚಿತ್ರದ ಪ್ರಮುಖ ದೃಶ್ಯಗಳ ಚಿತ್ರೀಕರಣಕ್ಕಾಗಿ ಚಿತ್ರತಂಡ ವಿದೇಶಕ್ಕೆ ಹೋಗುವುದಾಗಿ ಆರಂಭದಲ್ಲೇ ಹೇಳಿತ್ತು. ಆದರೆ, ಕೊರೊನಾ ಕಾರಣದಿಂದ ಚಿತ್ರತಂಡದ ಪ್ಲ್ರಾನ್ ವರ್ಕ್ ಆಗಲಿಲ್ಲ. ಹಾಗಾಗಿ, ಅನಿವಾರ್ಯವಾಗಿ ವಿದೇಶದಲ್ಲಿ ಮಾಡಬೇಕೆಂದುಕೊಂಡಿದ್ದ ಚಿತ್ರೀಕರಣವನ್ನು ಉತ್ತರ ಭಾರತದ ಲೊಕೇಶನ್‌ವೊಂದರಲ್ಲಿ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಆದರೆ, ಈಗ ನಿರ್ಧಾರ ಬದಲಾಗಿದೆ.
ಮತ್ತೆ ಚಿತ್ರತಂಡ ವಿದೇಶವನ್ನೇ ಆಯ್ಕೆಯಾಗಿದೆ. ಯುರೋಪ್ ನತ್ತ ಚಿತ್ರತಂಡ ಪ್ರಯಾಣ ಬೆಳೆಸಲಿದೆ. ಫೆಬ್ರವರಿಯಲ್ಲಿ ಇಡೀ “ಗಾಳಿಪಟ-2′ ತಂಡ ವಿದೇಶ ಪ್ರವಾಸ ಮಾಡಲಿದ್ದು, ಈಗಾಗಲೇ ಅನುಮತಿ ಕೂಡಾ ದೊರಕಿದೆ ಎನ್ನಲಾಗಿದೆ.
ಶರಣ್ ಗುರು ಶಿಷ್ಯರು ಚಿತ್ರಕ್ಕೆ ಇಂದು ಮುಹೂರ್ತ
ಇನ್ನು ಈ ಚಿತ್ರದಲ್ಲಿ ಗಣೇಶ್, ದಿಗಂತ್, ಪವನ್ ಕುಮಾರ್ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಯೋಗರಾಜ್‌ಭಟ್ ನಿರ್ದೇಶನದ “ಗಾಳಿಪಟ ‘ ಅದ್ಭುತ ಯಶಸ್ವಿ ಕಂಡ ಸಿನಿಮಾ. ಈಗ ಮತ್ತದೇ ಹೆಸರಲ್ಲಿ ಸಿನಿಮಾ ಮೂಡಿಬರುತ್ತಿದೆ. ಬಹುತೇಕ ಚಿತ್ರೀಕರಣವನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಸ್ವಲ್ಪ ಮಾತಿನ ಭಾಗ ಹಾಡು ಹಾಡಿನ ಚಿತ್ರೀಕರಣ ಮುಗಿಸಿದರೆ ಚಿತ್ರ ಮುಗಿಯಲಿದೆ.
ರಮೇಶ್ ರೆಡ್ಡಿ ಈ ಚಿತ್ರದ ನಿರ್ಮಾಪಕರು. ಈಗಾಗಲೇ ರಮೇಶ್ ರೆಡ್ಡಿ ತಮ್ಮ ನಿರ್ಮಾಣ “ಸೂರಜ್ ಪ್ರೊಡಕ್ಷನ್ಸ್’ನಡಿ “ಉಪ್ಪು ಹುಳಿ ಖಾರ’, “ಪಡ್ಡೆಹುಲಿ’, “100′ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಅವರ ನಿರ್ಮಾಣದ “100′ ಸಿನಿಮಾ ಬಿಡುಗಡೆಯ ಹಂತಕ್ಕೆ ಬಂದಿದೆ. ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಸಿನಿಮಾಗಳನ್ನು ಮಾಡಬೇಕು ಎಂಬ ಉದ್ದೇಶದಿಂದ ರಮೇಶ್ ರೆಡ್ಡಿಯವರು ನಿರ್ಮಾಪಕರಾಗಿ ಬಂದಿದ್ದಾರೆ. ಈಗಾಗಲೇ ತಮ್ಮ ಬ್ಯಾನರ್‌ನಲ್ಲಿ ರಮೇಶ್ ರೆಡ್ಡಿಯವರು ಹಿಂದಿ ಸಿನಿಮಾವನನ್ನೂ ನಿರ್ಮಾಣ ಮಾಡಿದ್ದಾರೆ. ಆ ಚಿತ್ರ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.
related stories
-
ಸಿನೆಪ್ಲೆಕ್ಸ್ - ಚಿತ್ರ ವಿಮರ್ಶೆ ನಿಗೂಢ ಕಾಡಿನಲ್ಲೊಂದು ಭಯಾನಕ ಹುಡುಕಾಟ 'ಸ್ಕೇರಿ ಫಾರೆಸ್ಟ್'
-
ಮುಖಪುಟ ಮೊದಲು ಸಾಮಾಜಿಕ ನಂತರ ಐತಿಹಾಸಿಕ
-
ಹೋಮ್ ಧರ್ಮಸ್ಥಳ ಮಂಜುನಾಥ ಸ್ವಾಮಿ ಅನುಗ್ರಹದಿಂದ ʼದಿನ ಭವಿಷ್ಯ' ಹಾಗೂ ರಾಶಿ ಫಲ