ಉದಯವಾಣಿ

1.3M Followers

ವಿದ್ಯಾರ್ಥಿಗಳಲ್ಲಿ ಕೊರೊನಾ; ಶಾಲೆಗಳಿಗೆ 5 ದಿನ ರಜೆ

23 Jan 2022.12:55 PM

ಕುಷ್ಟಗಿ: ತಾಲೂಕಿನ ಮೂರು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕೊರೊನಾ ದೃಢವಾಗಿರುವ ಹಿನ್ನೆಲೆಯಲ್ಲಿ ಸದರಿ ಶಾಲೆಗಳಿಗೆ 5 ದಿನಗಳ ರಜೆ ಘೋಷಿಸಲಾಗಿದೆ. ಕುಷ್ಟಗಿ ಪಟ್ಟಣದ ಬಾಲಕರ ಪೌಢಶಾಲೆಯಲ್ಲಿ 8, ಹನುಮಸಾಗರ ಬಾಲಕಿಯರ ಪೌಢಶಾಲೆಯಲ್ಲಿ 6, ಚಳಗೇರಾ ಪ್ರಾಥಮಿಕ ಶಾಲೆಯಲ್ಲಿ 8 ವಿದ್ಯಾರ್ಥಿಗಳಿಗೆ ಕೊರೊನಾ ವಕ್ಕರಿಸಿದೆ.

ಈ ವಿದ್ಯಾರ್ಥಿಗಳಿಗೆ ಮಾತ್ರೆ ನೀಡಿ, ಹೋಮ್‌ ಐಸೋಲೇಷನ್‌ಗೆ ಸಲಹೆ ನೀಡಲಾಗಿದ್ದು, ತಾಲೂಕಿನಲ್ಲಿ ಈ ಮೂರೂ ಶಾಲೆಗಳಿಗೆ ಡಿಡಿಪಿಐ ಆದೇಶದ ಮೇರೆಗೆ 5 ದಿನಗಳ ರಜೆ ಘೋಷಿಸಲಾಗಿದೆ. ತಾಲೂಕಿನಲ್ಲಿ ಕೊರೊನಾ ವೈರಸ್‌ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಶನಿವಾರ 83 ಪ್ರಕರಣಗಳು ದೃಢವಾಗಿವೆ ಎಂದು ತಾಲೂಕು ವೈದ್ಯಾಧಿಕಾರಿ ಡಾ| ಆನಂದ ಗೋಟೂರು ತಿಳಿಸಿದ್ದಾರೆ.

ರಜೆ ಬಳಿಕ ಶಿಕ್ಷಕರು ಕೋವಿಡ್‌ ಟೆಸ್ಟ್‌ ಮಾಡಿಸಿಕೊಂಡು ನೆಗೆಟಿವ್‌ ವರದಿಯೊಂದಿಗೆ ಶಾಲೆಗೆ ಹಾಜರಾಗಲು ಸೂಚಿಸಲಾಗಿದೆ. ಈ ಮೂರೂ ಶಾಲೆಗಳಿಗೆ ಸ್ಯಾನಿಟೈಸರ್‌ ಸಿಂಪಡಿಸಲು ಕ್ರಮ ಕೈಗೊಳ್ಳಲಾಗಿದೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Udayavani

#Hashtags