Dailyhunt Logo
  • Light mode
    Follow system
    Dark mode
    • Play Story
    • App Story
ವಿದ್ಯುತ್‌ ಖಾಸಗೀಕರಣ ವಿರುದ್ಧ 20 ಲಕ್ಷಕ್ಕೂ ಹೆಚ್ಚು ಅರ್ಜಿ!

ವಿದ್ಯುತ್‌ ಖಾಸಗೀಕರಣ ವಿರುದ್ಧ 20 ಲಕ್ಷಕ್ಕೂ ಹೆಚ್ಚು ಅರ್ಜಿ!

ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್‌ ಖಾಸಗೀಕರಣ ವಿರೋಧಿಸಿ ಕರ್ನಾಟಕ ರಾಜ್ಯ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ)ಕ್ಕೆ ಒಂದು ಲಾರಿ ತುಂಬುವಷ್ಟು ಆಕ್ಷೇಪಣೆಗಳು ಬಂದಿವೆ. ಈ ಪ್ರಮಾಣದ ಆಕ್ಷೇಪಣೆಗಳು ಬಂದಿರುವುದು ಇಂಧನ ಇಲಾಖೆ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆಯಾಗಿದೆ!

ಟಾಟಾ ಪವರ್‌ ಕಂಪೆನಿ ಲಿಮಿಟೆಡ್‌ (ಟಿಪಿಸಿ ಎಲ್‌) ರಾಜ್ಯದ ಪ್ರಮುಖ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ವಿದ್ಯುತ್‌ ವಿತರಣೆಗೆ ಅನುಮತಿ ಕೋರಿ ಕೆಇಆರ್‌ಸಿಗೆ ಅರ್ಜಿ ಸಲ್ಲಿಸಿತ್ತು. ಇದಕ್ಕೆ ಆಯೋಗ ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನಿಸಿತ್ತು. ಇದಕ್ಕೆ ರೈತರು, ಸಂಘ-ಸಂಸ್ಥೆಗಳಿಂದ ಆಕ್ಷೇಪಣೆಗಳ ಸುರಿಮಳೆಯಾಗಿದೆ. ಇದನ್ನು ಲೆಕ್ಕಹಾಕುವಷ್ಟ ರಲ್ಲಿ ಒಂದೆಡೆ ಕೆಇಆರ್‌ಸಿಯೇ ಸುಸ್ತಾಗಿದೆ. ಮತ್ತೂಂದೆಡೆ ಈ ಮಟ್ಟಿಗಿನ ವಿರೋಧವನ್ನು ನೋಡಿ ಅರ್ಜಿ ಹಾಕಿದ ಕಂಪೆನಿಯೇ ಖುದ್ದು ಆಯೋಗದ ಕೋರ್ಟ್‌ ಮುಂದೆ ಹಾಜರಾಗಿ, ಅರ್ಜಿ ಹಿಂಪಡೆದಿದೆ.

"ವಿದ್ಯುತ್‌ ಖಾಸಗೀಕರಣಕ್ಕೆ ಅವಕಾಶ ನೀಡ ಬಾರದೆಂದು ಮೂಟೆಗಟ್ಟಲೆ ಆಕ್ಷೇಪಣೆಗಳು ಬಂದಿವೆ.

ಎಷ್ಟು ಎಂಬುದರ ನಿಖರ ಲೆಕ್ಕವೇ ಸಿಗುತ್ತಿಲ್ಲ. ಆದರೆ ಇದುವರೆಗೆ ನಾವು ಲೆಕ್ಕಹಾಕಿರುವಂತೆ ಸುಮಾರು 25 ಲಕ್ಷ ಆಕ್ಷೇಪಣೆಗಳು ಬಂದಿವೆ. ಎಲ್ಲವನ್ನೂ ತೂಗಿದರೆ, ಒಂದು ಲಾರಿಯಷ್ಟು ಆಗುತ್ತವೆ. ಇದಲ್ಲದೆ, ಇ-ಮೇಲ್‌ ಮತ್ತಿತರ ಮೂಲಗಳಿಂದಲೂ ಬಂದುಬಿದ್ದಿವೆ. ನಾವು ಕಂಡಂತೆ ಇದು ಸಾರ್ವಕಾಲಿಕ ದಾಖಲೆ' ಎಂದು ಕೆಇಆರ್‌ಸಿ ಹಿರಿಯ ಅಧಿಕಾರಿಯೊಬ್ಬರು "ಉದಯವಾಣಿ'ಗೆ ತಿಳಿಸಿದರು.

ಈ ಎಲ್ಲ ಆಕ್ಷೇಪಣೆಗಳನ್ನು ವಿಂಗಡಿಸಿ, ಸ್ಕಾ éನ್‌ ಮಾಡಿ ಅರ್ಜಿ ಹಾಕಿರುವ ಟಾಟಾ ಕಂಪೆನಿಗೆ ಕಳುಹಿಸಬೇಕಿತ್ತು. ಇದಕ್ಕೆ ಪ್ರತಿಯಾಗಿ ಕಂಪೆನಿಯು ಆಯಾ ವೈಯಕ್ತಿಕ ಸಂಸ್ಥೆ ಅಥವಾ ವ್ಯಕ್ತಿಗೆ ಲಿಖೀತ ಪ್ರತಿಕ್ರಿಯೆ ನೀಡಬೇಕಾಗುತ್ತದೆ. ಅನಂತರವಷ್ಟೇ ವಿಚಾರಣೆ ನಡೆಯಬೇಕು. ಈ ಎಲ್ಲ ಪ್ರಕ್ರಿಯೆಗೆ ತಿಂಗಳುಗಟ್ಟಲೆ ಸಮಯ ಹಿಡಿಯುತ್ತಿತ್ತು. ಬಹುಶಃ ಇಷ್ಟೊಂದು ವಿರೋಧವನ್ನು ನೋಡಿಯೇ ಕಂಪೆನಿ ಹಿಂದೆ ಸರಿದಿರುವ ಸಾಧ್ಯತೆ ಇದೆ' ಎಂದು ಹೇಳಲಾಗುತ್ತಿದೆ.

2000ರಲ್ಲಿ ದಾಖಲೆ ವಿರೋಧ ವ್ಯಕ್ತವಾಗಿತ್ತು

ಈ ಹಿಂದೆ ವಿದ್ಯುತ್‌ ದರ ಹೆಚ್ಚಳವನ್ನು ವಿರೋಧಿಸಿ 1999-2000ದಲ್ಲಿ ಸುಮಾರು 10 ಸಾವಿರ ಆಕ್ಷೇಪಣೆಗಳು ಬಂದಿದ್ದವು. ಅದೇ ಈವರೆಗಿನ ದಾಖಲೆ ಎಂದು ಹೇಳಬಹುದು.

ವಿದ್ಯುತ್‌ ವಿತರಣೆಗೆ ಟಾಟಾ ಬೈಬೈ !

ಬೆಂಗಳೂರು: ವಿದ್ಯುತ್‌ ವಿತರಣೆಗೆ ಅನು ಮತಿ ಕೋರಿ ಕೆಇಆರ್‌ಸಿಗೆ ಅರ್ಜಿ ಸಲ್ಲಿಸಿದ್ದ ಟಾಟಾ ಪವರ್‌ ಕಂಪೆನಿ ಲಿ. ದಿಢೀರ್‌ ಹಿಂದೆ ಸರಿದಿದೆ. ವಿದ್ಯುತ್‌ ಖಾಸಗೀಕರಣದ ವಿರುದ್ಧ ವ್ಯಕ್ತವಾದ ತೀವ್ರ ವಿರೋಧವೇ ಇದಕ್ಕೆ ಕಾರಣ ಎನ್ನ ಲಾಗಿದೆ. ಇದರೊಂದಿಗೆ ರಾಜ್ಯದಲ್ಲಿ ವಿದ್ಯುತ್‌ ಖಾಸಗೀಕರಣಕ್ಕೆ ತಾತ್ಕಾಲಿಕ ತಡೆ ಬಿದ್ದಿದೆ.

ಶುಕ್ರವಾರ ಕಂಪೆನಿಯ ಪರ ವಕೀಲರು ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ)ದ ಕೋರ್ಟ್‌ಗೆ ಹಾಜರಾಗಿ, ವಿದ್ಯುತ್‌ ವಿತರಣೆ ಪರವಾನಿಗೆಗೆ ಸಂಬಂಧಿಸಿ ತಾವು ಸಲ್ಲಿಸಿರುವ ಅರ್ಜಿ ವಾಪಸ್‌ ಪಡೆಯುವು ದಾಗಿ ಹೇಳಿದರು. ಅದಕ್ಕೆ ಆಯೋಗ ಒಪ್ಪಿಗೆ ಸೂಚಿಸಿ, ಪ್ರಕರಣ ಇತ್ಯರ್ಥಗೊಳಿಸಿದೆ. ಅರ್ಜಿ ಹಿಂಪಡೆಯಲು ನಿರ್ದಿಷ್ಟ ಕಾರಣಗಳನ್ನು ಕಂಪೆನಿ ತಿಳಿಸಿಲ್ಲ. ಇದರ ಬೆನ್ನಲ್ಲೇ ವಿದ್ಯುತ್‌ ನೌಕರರ ಸಂಘಗಳು, ಇದು ತಮ¬¾ ಹೋರಾಟಕ್ಕೆ ಸಂದ ಜಯ ಎಂದು ವಿಶ್ಲೇಷಿಸಿವೆ.

Dailyhunt
Disclaimer: This content has not been generated, created or edited by Dailyhunt. Publisher: Udayavani