Dailyhunt Logo
  • Light mode
    Follow system
    Dark mode
    • Play Story
    • App Story
Vijayapura: ಬೈಕ್ ಗೆ ಲಾರಿ ಢಿಕ್ಕಿ... ಇಬ್ಬರು ಯುವಕರು ಸ್ಥಳದಲ್ಲೇ ಸಾವು

Vijayapura: ಬೈಕ್ ಗೆ ಲಾರಿ ಢಿಕ್ಕಿ... ಇಬ್ಬರು ಯುವಕರು ಸ್ಥಳದಲ್ಲೇ ಸಾವು

ವಿಜಯಪುರ: ಬೈಕ್ ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರ ಹೊರಭಾಗದ ವಿಜಯಪುರ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯ ಭೂತನಾಳ ಕ್ರಾಸ್‌ ಬಳಿ ಮಂಗಳವಾರ (ಜು.7) ಸಂಜೆ ನಡೆದಿದೆ.

ಹೆದ್ದಾರಿಯಲ್ಲಿ ವಿಜಯಪುರದಿಂದ ಸೊಲ್ಲಾಪುರದತ್ತ ಹೋಗುತ್ತಿದ್ದ ರಾಜಸ್ಥಾನ ಮೂಲದ ಲಾರಿಯು ಎದುರಿನಿಂದ ಬಂದ ಬೈಕ್ ಗೆ ಮುಖಾಮುಖಿ ಢಿಕ್ಕಿ ಹೊಡೆದಿದೆ.

ಪರಿಣಾಮ ಆದರ್ಶನಗರದ ನಿವಾಸಿ ಭೂಷಣ ಧನಸಿಂಗ್‌ ನಾಯಕ(24) ಮತ್ತು ಗಗನ್‌ ಪರಮೇಶ್‌( 19) ಸಾವಿಗೀಡಾಗಿದ್ದಾರೆ. ಮತ್ತೊಬ್ಬ ಬಿಲಾಲ್‌ ಲಾಲ್‌ಸಾಬ್‌(19) ತೀವ್ರವಾಗಿ ಗಾಯಗೊಂಡಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಬಳಿಕ ಆರೋಪಿ ಚಾಲಕ ಸ್ಥಳದಲ್ಲೇ ಲಾರಿ‌ ಬಿಟ್ಟು ಪರಾರಿಯಾಗಿದ್ದಾನೆ. ಸ್ಥಳಕ್ಕೆ ಸಂಚಾರಿ‌ ಪೊಲೀಸರು ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Udayavani