Dailyhunt Logo
  • Light mode
    Follow system
    Dark mode
    • Play Story
    • App Story
ವಿಕೆ ಫರ್ನಿಚರ್ & ಎಲೆಕ್ಟ್ರಾನಿಕ್ಸ್‌ನಲ್ಲಿ ಫ್ರೀಡಂ ಡೇ & ನೈಟ್ ಸೇಲ್-2026 ವಿಶೇಷ ಮಾರಾಟ ಮೇಳ

ವಿಕೆ ಫರ್ನಿಚರ್ & ಎಲೆಕ್ಟ್ರಾನಿಕ್ಸ್‌ನಲ್ಲಿ ಫ್ರೀಡಂ ಡೇ & ನೈಟ್ ಸೇಲ್-2026 ವಿಶೇಷ ಮಾರಾಟ ಮೇಳ

ಮಂಗಳೂರು: ಸ್ವಾತಂತ್ರ್ಯೋತ್ಸವದ ಅಂಗವಾಗಿ ವಿಕೆ ಫರ್ನಿಚರ್ ಮತ್ತು ಎಲೆಕ್ಟ್ರಾನಿಕ್ಸ್ ವತಿಯಿಂದ ಆಗಸ್ಟ್ 14, 15 ಹಾಗೂ 16ರಂದು ಮೂರು ದಿನಗಳ ವಿಶೇಷ 'ಫ್ರೀಡಂ ಡೇ & ನೈಟ್ ಸೇಲ್-2026' ಆಯೋಜಿಸಲಾಗಿದೆ. ಬೆಳಿಗ್ಗೆ 9.30ರಿಂದ ಮಧ್ಯರಾತ್ರಿ 12ರವರೆಗೆ ನಡೆಯಲಿರುವ ಈ ಮಾರಾಟ ಮೇಳದಲ್ಲಿ ಫರ್ನಿಚರ್ ಹಾಗೂ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳಿಗೆ ವಿಶೇಷ ಕೊಡುಗೆಗಳನ್ನು ನೀಡಲಾಗಿದೆ.

'ಇಂಡಿಪೆಂಡೆನ್ಸ್ ಡೇ ಪ್ರೈಸ್ ಚಾಲೆಂಜ್' ಹೆಸರಿನಲ್ಲಿ ನಡೆಯಲಿರುವ ಮೇಳದಲ್ಲಿ 'ಆಯ್ಕೆ ಫರ್ನಿಚರ್' ಮತ್ತು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಡಿಸ್ಕೌಂಟ್ ದರ ಖರೀದಿಗೆ ಆಕರ್ಷಕ ಕ್ಯಾಶ್‌ಬ್ಯಾಕ್ ಕೊಡುಗೆ ಲಭ್ಯವಿದೆ. ಆಯ್ದ ಫರ್ನಿಚರ್ ಮತ್ತು ಸೆಲೆಕ್ಟ್ ಮಾಡಿದ ಬ್ರಾಂಡೆಡ್ ರೆಫ್ರಿಜರೇಟರ್ ಖರೀದಿಗೆ ಗರಿಷ್ಠ ₹25,000ರವರೆಗೆ ಅಥವಾ ಶೇ.20ರ ತನಕ ಕ್ಯಾಶ್‌ಬ್ಯಾಕ್, ಟಿವಿ ಖರೀದಿಗೆ ಗರಿಷ್ಠ ₹15,000ರವರೆಗೆ ಶೇ.7.5 ತನಕ ಕ್ಯಾಶ್‌ಬ್ಯಾಕ್ ಹಾಗೂ ವಾಷಿಂಗ್ ಮೆಷಿನ್ (ಫ್ರಂಟ್) + ಫ್ರಿಜ್ ಖರೀದಿಗೆ ಗರಿಷ್ಠ ₹9,000ರವರೆಗೆ ಅಥವಾ ಶೇ.20 ತನಕ ಕ್ಯಾಶ್‌ಬ್ಯಾಕ್ ಅನುಮೋದಿತ ಬ್ಯಾಂಕಿಂಗ್ ಪಾಲುದಾರರ ಕ್ರೆಡಿಟ್ ಕಾರ್ಡ್‌ಗಳ ಮೂಲಕ ನೀಡಲಾಗುತ್ತದೆ.

'ಫ್ರೀಡಂ ಡೇ & ನೈಟ್ ಸೇಲ್'ನಲ್ಲಿ ಆಧುನಿಕ ಸೋಫಾ ಸೆಟ್‌ಗಳು: ಕುಷನ್ ಮತ್ತು ಮರದ ಎಲ್ ಕಾರ್ನರ್ ಸೋಫಾ, 3+2+1, 3+2 ಸೋಫಾ, 6 ಮತ್ತು 4 ಸೀಟಿನ ಡೈನಿಂಗ್ ಟೇಬಲ್‌ಗಳು, 2 ಡೋರ್, 3 ಡೋರ್, 4 ಡೋರ್ ವಾರ್ಡ್ರೋಬ್‌ಗಳು, ಸ್ಲೈಡಿಂಗ್ ಮೆಟಲ್ ವಾರ್ಡ್ರೋಬ್, ಬೆಡ್‌ರೂಮ್ ಸೆಟ್‌ಗಳು, ಟಿವಿ ಯೂನಿಟ್‌ಗಳು, ಬುಕ್ ಶೆಲ್ಫ್, ಕ್ರೋಕರಿ ಯೂನಿಟ್, ಡ್ರೆಸ್ಸಿಂಗ್ ಟೇಬಲ್, ದಿವಾನ್, ರಾಕಿಂಗ್ ಚೇರ್, ಸೆಂಟರ್ ಟೇಬಲ್ ಸೇರಿದಂತೆ ವಿವಿಧ ಫರ್ನಿಚರ್‌ಗಳ ಮೇಲೆ ಆಕರ್ಷಕ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಇದರ ಜೊತೆಗೆ 32 ಇಂಚಿನಿಂದ 100 ಇಂಚಿನವರೆಗೆ ಟಿವಿ, ವಾಷಿಂಗ್ ಮೆಷಿನ್, ಫ್ರಿಜ್, ಏರ್ ಕಂಡಿಷನರ್, ಇನ್ವರ್ಟರ್, ಗ್ಯಾಸ್ ಸ್ಟವ್, ಚಿಮಣಿ ಸೇರಿದಂತೆ ವಿವಿಧ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮೇಲೂ ವಿಶೇಷ ಆಫರ್‌ಗಳು ಲಭ್ಯವಿವೆ.

ವಿವಿಧ ವಿನ್ಯಾಸಗಳ ಸಮಕಾಲೀನ ಹಾಗೂ ಸಾಂಪ್ರದಾಯಿಕ ಪೀಠೋಪಕರಣಗಳು, ಆಧುನಿಕ ಬೆಡ್‌ರೂಮ್ ಸೆಟ್‌ಗಳು, ವಾರ್ಡ್ರೋಬ್‌ಗಳು, ಬೆಡ್‌ಗಳು, ಡೈನಿಂಗ್ ಸೆಟ್‌ಗಳು, ಲಿವಿಂಗ್ ರೂಮ್ ಫರ್ನಿಚರ್, ಸೋಫಾ ಸೆಟ್‌ಗಳು, ಸ್ಟಡಿ ಟೇಬಲ್, ಮಾಡ್ಯುಲರ್ ಕಿಚನ್ ಹಾಗೂ ಶ್ರೇಷ್ಠ ಗುಣಮಟ್ಟದ ಕಚೇರಿ ಪೀಠೋಪಕರಣ ವಿಶೇಷ ದರದಲ್ಲಿ ಇಲ್ಲಿ ಲಭ್ಯವಿದೆ.

ವಿಕೆ. ಫರ್ನಿಚರ್ ಸ್ವತಃ ಪ್ರಮುಖ ಸೋಫಾ, ವುಡನ್, ಮೆಟಲ್, ಪಾರ್ಟಿಕಲ್ ಬೋರ್ಡ್ ಫರ್ನಿಚರ್ ತಯಾರಿಕಾ ಸಂಸ್ಥೆಯಾಗಿದ್ದು, ತನ್ನದೇ ಬ್ರಾಂಡ್‌ನ ಗುಣಮಟ್ಟದ ಫರ್ನಿಚರ್‌ಗಳನ್ನು ತಯಾರಿಸಿ ಗ್ರಾಹಕರಿಗೆ ಒದಗಿಸುತ್ತಿದೆ. ಇದರೊಂದಿಗೆ ಸ್ಪೇಸ್‌ವುಡ್ ಫರ್ನಿಚರ್ ಲಭ್ಯವಿದ್ದು, ಡ್ಯುರೊಫ್ಲೆಕ್ಸ್ ಬ್ರಾಂಡ್‌ನ ಮ್ಯಾಟ್ರೆಸ್‌ಗಳು ಸಹ ಮಾರಾಟ ಮಾಡಲಾಗುತ್ತಿದೆ.

ಫರ್ನಿಚರ್, ಎಲೆಕ್ಟ್ರಾನಿಕ್ಸ್, ಇಂಟೀರಿಯರ್, ಫರ್ನಿಶಿಂಗ್, ಹೋಮ್ ಅಪ್ಲೈಯನ್ಸಸ್, ಮೊಬೈಲ್‌ಗಳು, ಲ್ಯಾಪ್‌ಟಾಪ್‌ಗಳು, ಕಿಚನ್‌ವೇರ್, ಕ್ರಾಕರಿ ಹಾಗೂ ಗೃಹಾಲಂಕಾರ ಸಾಮಗ್ರಿಗಳ ವ್ಯಾಪಕ ಶ್ರೇಣಿ ಇಲ್ಲಿ ಲಭ್ಯವಿದ್ದು, ಮನೆ, ಕಚೇರಿ, ಶಾಲೆ, ಕಾಲೇಜು, ಮಸೀದಿ, ಚರ್ಚ್ ಹಾಗೂ ದೇವಸ್ಥಾನಗಳಿಗೆ ಅಗತ್ಯವಿರುವ ವಿವಿಧ ಸಾಮಗ್ರಿಗಳನ್ನು ಒಂದೇ ಸೂರಿನಡಿ ಆಯ್ಕೆ ಮಾಡಿ ಖರೀದಿಸಲು ಗ್ರಾಹಕರಿಗೆ ವಿಪುಲ ಅವಕಾಶವಿದೆ.

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಎಲೆಕ್ಟ್ರಾನಿಕ್ಸ್ ಕಂಪನಿಗಳಾದ ಸ್ಯಾಮ್‌ಸಂಗ್, ಎಲ್‌ಜಿ, ಪ್ಯಾನಸೋನಿಕ್, ಸೋನಿ, ಹೈಯರ್, ವರ್ಲ್‌ಪೂಲ್, ಬಾಷ್, ಐಎಫ್‌ಬಿ, ಗೋದ್ರೇಜ್, ಓ-ಜನರಲ್, ಲಾಯ್ಡ್, ಹ್ಯಾವೆಲ್ಸ್, ಡೈಕಿನ್, ವಿಗಾರ್ಡ್ ಮುಂತಾದ ಪ್ರಮುಖ ಬ್ರ್ಯಾಂಡ್‌ಗಳ ಗೃಹೋಪಯೋಗಿ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳಾದ ಟಿವಿ, ರೆಫ್ರಿಜರೇಟರ್, ಎಸಿ, ವಾಷಿಂಗ್ ಮೆಷಿನ್, ವಾಟರ್ ಹೀಟರ್, ವಾಟರ್ ಪ್ಯೂರಿಫೈಯರ್, ಚಿಮಣಿ, ಹಾಬ್ಸ್, ಏರ್ ಕೂಲರ್, ಫ್ಯಾನ್‌ಗಳು, ಗ್ರೈಂಡರ್, ಮಿಕ್ಸರ್, ಮೈಕ್ರೋವೇವ್ ಓವನ್, ಇಸ್ತ್ರಿ ಪೆಟ್ಟಿಗೆ ಸೇರಿದಂತೆ ವಿವಿಧ ಗೃಹೋಪಯೋಗಿ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು ಹಾಗೂ ಕ್ಯಾಮರಿ ಮತ್ತು ಅಲಂಕಾರಿಕ ಗೃಹೋಪಯೋಗಿ ಸಾಮಗ್ರಿಗಳು ಲಭ್ಯವಿವೆ. ಇದರೊಂದಿಗೆ ಸ್ಯಾಮ್‌ಸಂಗ್, ನೋಕಿಯಾ, ವಿವೋ, ಡೆಲ್, ಲೆನೊವೋ ಮುಂತಾದ ಪ್ರಮುಖ ಬ್ರ್ಯಾಂಡ್‌ಗಳ ಮೊಬೈಲ್‌ಗಳು, ಲ್ಯಾಪ್‌ಟಾಪ್‌ಗಳು, ಕಂಪ್ಯೂಟರ್ ಇತರ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನೂ 'ಫ್ರೀಡಂ ಡೇ & ನೈಟ್ ಸೇಲ್'ನಲ್ಲಿ ಖರೀದಿಸಬಹುದಾಗಿದೆ.

ಗ್ರಾಹಕರ ಅಗತ್ಯ ಮತ್ತು ಅನುಕೂಲಕ್ಕೆ ತಕ್ಕಂತೆ ಕಸ್ಟಮೈಸ್ಡ್ ಫರ್ನಿಚರ್‌ಗಳನ್ನು ತಯಾರಿಸಿಕೊಡುವ ವ್ಯವಸ್ಥೆಯೂ ಇದೆ. ವಿಶಾಲವಾದ ಶೋರೂಮ್‌ಗಳ ಜೊತೆಗೆ ಗ್ರಾಹಕರ ವಾಹನಗಳ ನಿಲುಗಡೆಗೆ ಸಾಕಷ್ಟು ಪಾರ್ಕಿಂಗ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಮಳಿಗೆಗಳು ರವಿವಾರವೂ ತೆರೆದಿರುತ್ತವೆ. ಇದಲ್ಲದೆ, ಬಜಾಜ್ ಫೈನಾನ್ಸ್, ಎಚ್‌ಡಿಎಫ್‌ಸಿ, ಎಚ್‌ಡಿಬಿ ಹಾಗೂ ಐಡಿಎಫ್‌ಸಿ ಫೈನಾನ್ಸ್‌ಗಳ ಮೂಲಕ ಸುಲಭ ಮಾಸಿಕ ಕಂತುಗಳ (EMI) ಸೌಲಭ್ಯದಲ್ಲಿ, ನಗದು ಪಾವತಿಯ ಅಗತ್ಯವಿಲ್ಲದೆ ಅಗತ್ಯ ವಸ್ತುಗಳನ್ನು ಖರೀದಿಸುವ ಅವಕಾಶವೂ ಗ್ರಾಹಕರಿಗೆ ಲಭ್ಯವಿದೆ.

ಮಂಗಳೂರಿನ ಏರ್‌ಪೋರ್ಟ್ ರಸ್ತೆಯ ಯೆಯ್ಯಾಡಿ, ಕಲ್ಪನೆ-ತೊಕ್ಕೊಟ್ಟು, ವಾಮಂಜೂರು ಮತ್ತು ಇತ್ತೀಚೆಗೆ ಉದ್ಘಾಟನೆಗೊಂಡ ಉಡುಪಿಯ ಕಡಿಯಾಳಿ-ಕುಂಜಿಬೆಟ್ಟುಬಿನಲ್ಲಿರುವ ವಿ.ಕೆ. ಫರ್ನಿಚರ್ ಮತ್ತು ಎಲೆಕ್ಟ್ರಾನಿಕ್ಸ್ ಮಳಿಗೆಗಳಿಗೆ ಗ್ರಾಹಕರು ಭೇಟಿ ನೀಡಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ www.vkfurnitureandelectronics.com ಜಾಲತಾಣಕ್ಕೆ ಭೇಟಿ ನೀಡಿ.

Dailyhunt
Disclaimer: This content has not been generated, created or edited by Dailyhunt. Publisher: Udayavani