ಬೆಂಗಳೂರು: ವಿವಿಧ ಇಲಾಖೆಗಳಿಗೆ 11 ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಎಸ್. ಕಾತ್ಯಾಯನಿ ದೇವಿ- ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆ ಮುಖ್ಯ ಆಡಳಿತಾಧಿಕಾರಿ (ಪ್ರಭಾರ: ಸಂಜೀವಿನಿ-ಕೆಎಸ್‌ಆರ್‌ಎಲ್‌ಪಿಎಸ್), ವೈ.ಬಿ.
ಶಾಂತರಾಜು- ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ ಕಾರ್ಯಕಾರಿ ನಿರ್ದೇಶಕ (ಪ್ರಭಾರ: ಸುವರ್ಣ ಆರೋಗ್ಯ ಟ್ರಸ್ಟ್ ನಿರ್ದೇಶಕ), ಎನ್. ಸುಶೀಲಮ್ಮ- ಗ್ಯಾಸ್ಟ್ರೋ ಎಂಟಾಲಜಿ, ಸೈನಸ್ ಆಂಡ್ ಆರ್ಗನ್ ಟ್ರಾನ್ಸ್‌ಪ್ಲಾಂಟ್ ಸಂಸ್ಥೆ ಮುಖ್ಯ ಆಡಳಿತಾಧಿಕಾರಿ, ರವಿ. ಎಂ. ತಿರ್ಲಾಪುರ- ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ ಎಂಡಿ, ಡಾ.
ಬಿ. ಉದಯಕುಮಾರ ಶೆಟ್ಟಿ- ವಿಬಿ-ಜಿ ರಾಮ್ ಜಿ ಮುಖ್ಯ ಕಾರ್ಯಾಚರಣಾಧಿಕಾರಿ, ಡಾ. ಎಸ್. ನಾಗರಾಜು- ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಮುಖ್ಯ ಆಡಳಿತಾಧಿಕಾರಿ, ಜಿ. ವಿಶ್ವನಾಥ್- ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ಮುಖ್ಯ ಆಡಳಿತಾಧಿಕಾರಿ, ಅರುಳ್ ಕುಮಾರ್- ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಎಂಡಿ, ಕುಸುಮ ಕುಮಾರಿ- ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ ಕುಲಸಚಿವೆ(ಆಡಳಿತ), ಡಾ. ಕವಿತಾ ಯೋಗಪ್ಪನವರ್- ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಸಿಒಒ, ಅಭಿಜಿನ್ ಬಿ.- ಆರ್ಥಿಕ ಇಲಾಖೆ ಉಪಕಾರ್ಯದರ್ಶಿ (ಆಡಳಿತ ಮತ್ತು ಸಮನ್ವಯ) ಇಲಾಖೆಗೆ ವರ್ಗಾವಣೆ ಮಾಡಿದೆ.

