ಬೆಂಗಳೂರು: ವೃದ್ಧೆಯರ ಸರ ಅಪಹರಣ ಮಾಡುತ್ತಿದ್ದ ಆಟೋ ಚಾಲಕನೊಬ್ಬನನ್ನು ಬಂಧಿಸಲಾಗಿದೆ.ಜೆ.ಪಿ.ನಗರದ 7 ನೇ ಹಂತದ ನಿವಾಸಿ ಸಂತೋಷ (32) ಬಂಧಿತ ಆಟೋ ಚಾಲಕ. 2.5 ಲಕ್ಷ ರೂ. ಮೌಲ್ಯದ ಚಿನ್ನದ ಸರ, ಮೊಬೈಲ್, ಆಟೋ ಜಪ್ತಿ ಮಾಡಲಾಗಿದೆ.
ಆರೋಪಿ ಆಟೋದಲ್ಲಿ ಸಂಚರಿಸುತ್ತಾ ವೃದ್ಧೆಯರು ಕಂಡ ಕೂಡಲೇ ವಿಳಾಸ ಕೇಳುವ ನೆಪದಲ್ಲಿ ಅವರ ಕತ್ತಿನಲ್ಲಿರುವ ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದ.
ತನ್ನ ಆಟೋದ ನೋಂದಣಿ ಸಂಖ್ಯೆ ತಿಳಿಯದಂತೆ ಅದರ ಫಲಕಕ್ಕೆ ಕಾಗದ ಅಂಟಿಸುತ್ತಿದ್ದ. ಕಳೆದ ಆ.29ರಂದು ಬೆಳಗ್ಗೆ ಲಿಂಗಧೀರನಹಳ್ಳಿಯ ಮನೆ ಮುಂದೆ ವೃದ್ಧೆಯೊಬ್ಬರು ನಿಂತಿದ್ದಾಗ ವಿಳಾಸ ಕೇಳುವ ನೆಪದಲ್ಲಿ ಅವರ ಕೊರಳಲ್ಲಿದ್ದ ಸರ ಕಿತ್ತುಕೊಂಡು ಪರಾರಿಯಾಗಿದ್ದ.

