Dailyhunt Logo
  • Light mode
    Follow system
    Dark mode
    • Play Story
    • App Story
ವ್ಯಾಪಕ ಅವ್ಯವಹಾರಗಳು...:ರಾಮಮಂದಿರದ 5 ವರ್ಷದ ದೇಣಿಗೆ ಎಸ್‌ಐಟಿ ತನಿಖೆ?

ವ್ಯಾಪಕ ಅವ್ಯವಹಾರಗಳು...:ರಾಮಮಂದಿರದ 5 ವರ್ಷದ ದೇಣಿಗೆ ಎಸ್‌ಐಟಿ ತನಿಖೆ?

ಯೋಧ್ಯೆ: ಅಯೋಧ್ಯೆ ರಾಮಮಂದಿರದಲ್ಲಿ ವ್ಯಾಪಕ ಅವ್ಯವಹಾರಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಕಳೆದ 5 ವರ್ಷಗಳ ವರೆಗಿನ ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಲೆಕ್ಕಪತ್ರವನ್ನು ಮತ್ತೂಮ್ಮೆ ಆಡಿಟ್‌ ಮಾಡಲು ಉತ್ತರ ಪ್ರದೇಶದ ವಿಶೇಷ ತನಿಖಾ ತಂಡ(ಎಸ್‌ಐಟಿ) ತೀರ್ಮಾನಿಸಿದೆ.

ಎಣಿಕೆ ಕೌಂಟರ್‌ನಲ್ಲಿ ಕುಳಿತ ಆರೋಪಿಗಳ ಚಿತ್ರ ಬಹಿರಂಗ
ರಾಮಮಂದಿರ ಸಂಕೀರ್ಣದೊಳಗಿನ ಎಣಿಕೆ ಕೇಂದ್ರದೊಳಗೆ ಆರೋಪಿ ಅವಿನಾಶ್‌ ಶುಕ್ಲಾ ಮತ್ತು ಅನುಕಲ್ಪ್ ಮಿಶ್ರಾ ಇರುವಂತಹ ಮೊದಲ ಫೋಟೋವೊಂದು ಶುಕ್ರವಾರ ಬಹಿರಂಗಗೊಂಡಿದೆ. ಸಿಸಿಟಿವಿ ಕಣ್ಣುತಪ್ಪಿಸಿ ಹುಂಡಿ ಹಣವನ್ನು ಎಗರಿಸುತ್ತಿದ್ದರು. ಆದರೆ ಅನಂತರದಲ್ಲಿ ಈ ವಿಚಾರ ಗೊತ್ತಾದ ಬಳಿಕ, ರಾಜಾರೋಷವಾಗಿ ಸಿಸಿಟಿವಿ ಮುಂದೆಯೇ ಹಣಕ್ಕೆ ಕನ್ನ ಹಾಕುತ್ತಿದ್ದರು ಎನ್ನಲಾಗಿದೆ.

ಉಜ್ಜಯಿನಿಯಿಂದ ಅಯೋಧ್ಯೆಗೆ ದಿಗ್ವಿಜಯ್‌ ಪಾದಯಾತ್ರೆ
ರಾಮಮಂದಿರ ದೇಣಿಗೆ ವಿವಾದಕ್ಕೆ ಸಂಬಂಧಿಸಿದಂತೆ ಉಜ್ಜೆ„ನಿಯಿಂದ ಅಯೋಧ್ಯೆಯವರೆಗೆ ಪಾದಯಾತ್ರೆ ನಡೆಸುವುದಾಗಿ ದಿಗ್ವಿಜಯ್‌ ಸಿಂಗ್‌ ಹೇಳಿದ್ದಾರೆ. ಅಡ್ವಾಣಿ ರಥಯಾತ್ರೆ ವೇಳೆ ಹಣದ ದುರುಪಯೋ ಗವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಬಟ್ಟೆ ಸಾಕ್ಸ್ ಗಳಲ್ಸಿ ಹಣ ತುಂಬಿಸಿ ರವಾನೆ!
ಅಯೋಧ್ಯೆ ರಾಮಮಂದಿರದ ಹುಂಡಿಗೆ ಕನ್ನ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮಂದಿರದಲ್ಲಿನ ಕಳೆದ 45 ದಿನಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಬಂಧಿತ 8 ಮಂದಿಯ ಪೈಕಿ 5 ಮಂದಿ, ಎಣಿಕೆ ಪ್ರಕ್ರಿಯೆ ವೇಳೆ ರಹಸ್ಯವಾಗಿ ಹಣವನ್ನು ಎಗರಿಸುತ್ತಿರುವ ದೃಶ್ಯಗಳೂ ಸೆರೆಯಾಗಿವೆ.

ಮಂದಿರದ ಯಾತ್ರಾರ್ಥಿ ಸೌಲಭ್ಯ ಕೇಂದ್ರದಲ್ಲಿನ ಸಿಸಿಟಿವಿಗಳಲ್ಲಿ ಈ ಅಕ್ರಮ ಸೆರೆಯಾಗಿವೆ. ಬಂಧಿತರು ಕಂತೆ ಕಂತೆ ನೋಟುಗಳನ್ನು ಎಗರಿಸಿ, ಬಟ್ಟೆಗಳು ಹಾಗೂ ಸಾಕ್ಸ್‌ ಗಳಲ್ಲಿ ಅಡಗಿಸಿಡುತ್ತಿರುವುದು ಕಂಡುಬಂದಿದೆ ಎಂದು ಪೊಲೀಸ್‌ ಮೂಲಗಳನ್ನು ಉಲ್ಲೇಖೀಸಿ ದಿ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ. ಬಂಧನದ ವೇಳೆ ಸುಮಾರು 80 ಲಕ್ಷ ರೂ.ಗಳನ್ನು ವಶಕ್ಕೆ ಪಡೆ ಯಲಾಗಿತ್ತು.

45 ದಿನಗಳಿಗಿಂತ ಹಳೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಮಂದಿರದ ಟ್ರಸ್ಟ್‌ ಉಳಿಸಿಕೊಂಡಿಲ್ಲವಾದ್ದರಿಂದ, ಎಷ್ಟು ತಿಂಗಳಿಂದ ಈ ಚಂದಾ ಚೋರಿ ನಡೆಯುತ್ತಿತ್ತು ಎಂಬುದನ್ನು ಊಹಿಸಲು ಸಾಧ್ಯವಾಗುತ್ತಿಲ್ಲ ಎಂದೂ ಪೊಲೀಸರು ತಿಳಿಸಿದ್ದಾರೆ ಎನ್ನಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani