ಕೊಲಂಬೊ: ಮುಂಬರುವ ವನಿತಾ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗಾಗಿ ಶ್ರೀಲಂಕಾ ತಂಡವನ್ನು ಪ್ರಕಟಿಸಲಾಗಿದ್ದು, ಅನುಭವಿ ಆಲ್‌ರೌಂಡರ್ ಚಾಮರಿ ಅತ್ತಪಟ್ಟು ಅವರೇ ನಾಯಕಿಯಾಗಿ ಮುಂದುವರಿದಿದ್ದಾರೆ. ಹರ್ಷಿತಾ ಸಮರವಿಕ್ರಮ ಅವರಿಗೆ ಉಪನಾಯಕಿಯ ಜವಾಬ್ದಾರಿ ನೀಡಲಾಗಿದೆ.
ಇತ್ತೀಚಿನ ಟಿ20 ವಿಶ್ವಕಪ್‌ನಲ್ಲಿ ನಾಕೌಟ್ ತಲುಪಲು ವಿಫಲವಾದ ನಿರಾಸೆಯಲ್ಲಿದ್ದ 36 ವರ್ಷದ ಅತ್ತಪಟ್ಟು, ಆ.
28 ರಿಂದ ಆರಂಭವಾಗಲಿರುವ ಏಷ್ಯಾ ಕಪ್‌ನಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.
ತಂಡದಲ್ಲಿ ಯುವ ಆಟಗಾರ್ತಿಯರಿಗೆ ಹೆಚ್ಚಿನ ಮನ್ನಣೆ ನೀಡಲಾಗಿದ್ದು, ದೇವ್ಮಿ ವಿಹಂಗಾ ಮೊದಲ ಬಾರಿಗೆ ಸ್ಥಾನ ಪಡೆದಿದ್ದಾರೆ. ಯುವ ಆಟಗಾರ್ತಿಯರಾದ ಮಿಥಾಲಿ ಅಯೋಧ್ಯಾ, ಚೇತನಾ ವಿಮುಕ್ತಿ ಮತ್ತು ಇತ್ತೀಚೆಗೆ ಪಾಕಿಸ್ಥಾನ ವಿರುದ್ಧ ಮಿಂಚಿದ್ದ 17 ವರ್ಷದ ಸಂಜನಾ ಕಾವಿಂದಿ ತಂಡದಲ್ಲಿದ್ದಾರೆ. ಕೌಶಿನಿ ನುತ್ಯಂಗನಾ ಏಕೈಕ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿದ್ದಾರೆ.

