ಯಾದಗಿರಿ: ಮಳೆ ಕೊರತೆಯಿಂದ ಬಿತ್ತಿದ ಹತ್ತಿ ಬೆಳೆ ಒಣಗಿರುವುದನ್ನು ಕಂಡು ಮನನೊಂದ ರೈತನೊಬ್ಬ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಶಹಾಪುರ ತಾಲೂಕಿನ ಚಟ್ನಳ್ಳಿ ಗ್ರಾಮದಲ್ಲಿ ಮಂಗಳವಾರ (ಜು.07) ನಡೆದಿದೆ.
ಮಲ್ಲಿಕಾರ್ಜುನ (38) ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದು, ಇವರು 8 ಎಕರೆ ಭೂಮಿ ಬಾಡಿಗೆಗೆ ಪಡೆದು ವ್ಯವಸಾಯ ಮಾಡುತ್ತಿದ್ದರು.
ಎರಡು ಸಲ ಹತ್ತಿ ಬೀಜ ಬಿತ್ತಿದ್ದರೂ ಸಕಾಲಕ್ಕೆ ಮಳೆ ಬಾರದ ಕಾರಣ ಹೊಲದಲ್ಲಿ ಬೆಳೆ ಒಣಗುತ್ತಿರುವ ಕಂಡು ಬೇಸತ್ತು ಹೊಲದಲ್ಲೇ ಕ್ರೀಮಿನಾಶಕ ಸೇವಿಸಿದ್ದಾರೆ.
ವಿಷಯ ತಿಳಿದ ಕುಟುಂಸ್ಥರು ಕೂಡಲೇ ಯಾದಗಿರಿ ಯಿಮ್ಸ್ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೂ ಗುಣಮುಖವಾಗದ ಮಲ್ಲಿಕಾರ್ಜುನ ಮಂಗಳವಾರ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ.
ಮಲ್ಲಿಕಾರ್ಜುನ ಸಾವಿನಿಂದಾಗಿ ಕುಟುಂಬಸ್ಥರು ರೋದನೆ ಮುಗಿಲು ಮುಟ್ಟಿದೆ.

