ಯಾದಗಿರಿ: ಬಾಕಿ ಉಳಿದ ಬಿಲ್ (ಹಣ) ಫೈಲ್ ಪಾಸ್ ಮಾಡಿ ಕೊಡಲು ಹಣದ ಬೇಡಿಕೆ ಇಟ್ಟ ದೂರಿನಡಿ ಯಾದಗಿರಿ ಜಿಲ್ಲಾ ಲೋಕಾಯುಕ್ತರ ಬಲೆಗೆ ಜಿಲ್ಲೆಯ ಶಹಾಪುರ ಭೀಮರಾಯನಗುಡಿ ಕೆಬಿಜೆಎನ್‌ಎಲ್ ಕಚೇರಿಯ ಎಇಇ ಮತ್ತು ಜೆಇ ಸಿಲುಕಿದ್ದಾರೆ.
ವಡಗೇರಾ ತಾಲೂಕಿನ ಗದ್ದೆಸೂಗೂರು ಗ್ರಾಮದ ಕಾಸಿಂಸಾಬ್ ಜಲಾಲ್ ಸಾಬ್ ದೂರಿನ ಅನ್ವಯ ಲೋಕಾಯುಕ್ತ ಪಿಎಸ್‌ಐ ಶೋಧ ನಡೆಸಿ ಲಂಚ ಸ್ವೀಕರಿಸಿದ ಪೋನ್ ಪೆ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಭೀಮರಾಯನಗುಡಿ ಕೆಬಿಜೆಎನ್‌ಎಲ್ ಎಇಇ ಮಧಸೂಧನ ಹಾಗೂ ಜೆಇ ಮಂಜುನಾಥ ಫೋನ್ ಪೆ ಮೂಲಕ 35000 ಹಣ ಸ್ವೀಕರಿಸಿದ್ದು, ಬಾಕಿ ಬಿಲ್ ಪಾವತಿಗಾಗಿ ಈ ಇಬ್ಬರು ಅಧಿಕಾರಿಗಳು ಹಣದ ಬೇಡಿಕೆ ಇಟ್ಟು ಲಂಚವನ್ನು ಫೋನ್ ಪೇ ಮೂಲಕ ಸ್ವೀಕಾರ ಮಾಡಿದ್ದಾರೆ ಎಂದು ಕಾಸಿಂಸಾಬ್ ದೂರಿನಲ್ಲಿ ದಾಖಲಿಸಿದ್ದಾರೆ.
ಲೋಕಾಯುಕ್ತ ಡಿವೈಎಸ್ಪಿ ಜೆ.ಹೆಚ್.ಇನಾಮದಾರ್, ಪಿಐ ಸಿದ್ರಾಯ ಬಲರೂಗಿ ಹಾಗೂ ಲೋಕಾಯುಕ್ತ ಸಿಬ್ಬಂದಿಗಳು ಲೋಕಾ ಎಸ್ಪಿ ಮಾರ್ಗದರ್ಶನದಲ್ಲಿ ಕಾರ್ಯಚರಣೆ ನಡೆಸಿದ್ದಾರೆ.

