Dailyhunt Logo
  • Light mode
    Follow system
    Dark mode
    • Play Story
    • App Story
ಯುಎಸ್‌ ಓಪನ್‌: ಮುಖೋವಾ-ಮೆನ್ಸಿಕ್‌ಗೆ ಮಿಶ್ರ ಡಬಲ್ಸ್‌  ಕಿರೀಟ

ಯುಎಸ್‌ ಓಪನ್‌: ಮುಖೋವಾ-ಮೆನ್ಸಿಕ್‌ಗೆ ಮಿಶ್ರ ಡಬಲ್ಸ್‌  ಕಿರೀಟ

ನ್ಯೂಯಾರ್ಕ್‌: ಜೆಕ್‌ ಗಣರಾಜ್ಯದ ಕ್ಯಾರೋಲಿನಾ ಮುಖೋವಾ - ಜೇಕಬ್‌ ಮೆನ್ಸಿಕ್‌ ಜೋಡಿ ಯುಎಸ್‌ ಓಪನ್‌ ಟೆನಿಸ್‌ ಟೂರ್ನಿಯ ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ರೋಚಕ ಫೈನಲ್‌ ಪಂದ್ಯದಲ್ಲಿ ಜೆಕ್‌ ಜೋಡಿಯು ಬೆಲಿಂಡಾ ಬೆನ್ಸಿಕ್‌ ಮತ್ತು ಫ್ಲಾವಿಯೋ ಕೊಬೊಲ್ಲಿ ವಿರುದ್ಧ 6-3, 1-6 (10-6) ಸೆಟ್‌ಗಳಿಂದ ಭರ್ಜರಿ ಜಯ ಸಾಧಿಸಿತು.

ಮೆನ್ಸಿಕ್‌ ಅವರ ಅಪ್ರತಿಮ ಏಸ್‌ ಸರ್ವ್‌ ನೆರವಿನಿಂದ ಗೆದ್ದ ಈ ಜೋಡಿಯು 1 ದಶಲಕ್ಷ ಡಾಲರ್‌ ಬಹುಮಾನ ಹಣವನ್ನು ತನ್ನದಾಗಿಸಿಕೊಂಡಿತು.

ಇದಕ್ಕೂ ಮುನ್ನ ನಡೆದ ಸೆಮಿಫೈನಲ್‌ನಲ್ಲಿ ಮುಖೋವಾ-ಮೆನ್ಸಿಕ್‌ ಜೋಡಿ ಮಿರಾ ಆಯಂಡ್ರೀವಾ ಮತ್ತು ಆಯಂಡ್ರೇ ರುಬ್ಲೆವ್‌ ವಿರುದ್ಧ 2 ಮ್ಯಾಚ್‌ ಪಾಯಿಂಟ್‌ಗಳನ್ನು ರಕ್ಷಿಸಿಕೊಂಡು 5-4 (6), 3-5 (11-9) ಅಂತರದಲ್ಲಿ ಜಯ ಸಾಧಿಸಿ ಫೈನಲ್‌ ತಲುಪಿತ್ತು.

ಮತ್ತೂಂದು ಸೆಮಿಫೈನಲ್‌ನಲ್ಲಿ ಬೆನ್ಸಿಕ್‌ ಮತ್ತು ಕೊಬೊಲ್ಲಿ ಜೋಡಿಯು ಟೆನಿಸ್‌ ಲೋಕದ ತಾರಾ ದಂಪತಿಗಳಾದ ಎಲಿನಾ ಸ್ವಿಟೋಲಿನಾ ಮತ್ತು ಗೇಲ್‌ ಮೊನ್‌ಫಿಲ್ಸ್‌ ಅವರ ಸವಾಲನ್ನು 4-5 (7), 4-1 (10-5) ರಿಂದ ಕೊನೆಗೊಳಿಸಿತ್ತು.

Dailyhunt
Disclaimer: This content has not been generated, created or edited by Dailyhunt. Publisher: Udayavani