Dailyhunt Logo
  • Light mode
    Follow system
    Dark mode
    • Play Story
    • App Story
ಯುವತಿ ಸ್ನಾನದ ವಿಡಿಯೋ ಸೆರೆ ಕೇಸ್‌: ವರದಿ ಬರೋವರೆಗೆ ಕಾನೂನು ಪ್ರಕ್ರಿಯೆಗೆ ಹೈಕೋರ್ಟ್‌ ತಡೆ

ಯುವತಿ ಸ್ನಾನದ ವಿಡಿಯೋ ಸೆರೆ ಕೇಸ್‌: ವರದಿ ಬರೋವರೆಗೆ ಕಾನೂನು ಪ್ರಕ್ರಿಯೆಗೆ ಹೈಕೋರ್ಟ್‌ ತಡೆ

ಬೆಂಗಳೂರು: ನೆರೆಮನೆಯ ಯುವತಿ ಸ್ನಾನ ಮಾಡುವಾಗ ರಹಸ್ಯವಾಗಿ ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್‌ ಮಾಡಿದ ಆರೋಪದಡಿ ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ ಎಲ್‌) ವರದಿ ಬರುವವರೆಗೆ ಆರೋಪಿ ವಿರುದ್ಧದ ಕಾನೂನು ಪ್ರಕ್ರಿಯೆಗಳಿಗೆ ತಡೆ ನೀಡಿರುವ ಹೈಕೋರ್ಟ್‌, ಮೊಬೈಲ್‌ನಲ್ಲಿ ಒಂದೇ ಒಂದು ಫೋಟೋ ಅಥವಾ ಒಂದು ಕ್ಷಣದ ವಿಡಿಯೋ ಇರುವುದು ವರದಿಯಿಂದ ತಿಳಿದು ಬಂದರೂ, ಅರ್ಜಿ ವಜಾ ಗೊಳಿಸುವುದಾಗಿ ಆರೋಪಿಗೆ ಎಚ್ಚರಿಸಿದೆ.

ತನ್ನ ವಿರುದ್ಧ ಬೆಂಗಳೂರಿನ ವಿವೇಕನಗರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದು ಕೋರಿ ಪಶ್ಚಿಮ ಬಂಗಾಳ ಮೂಲದ ಚಿತ್ತರಂಜನ್‌ ಶರ್ಮಾ ಸಲ್ಲಿಸಿರುವ ಅರ್ಜಿಯನ್ನು ನ್ಯಾ. ಎಂ.ನಾಗಪ್ರಸನ್ನ ಅವರ ಏಕಸದಸ್ಯ ನ್ಯಾಯಪೀಠ ಮಧ್ಯಂತರ ಆದೇಶ ಮಾಡಿದೆ. ಮೊಬೈಲ್‌ನಲ್ಲಿ ಒಂದೇ ಒಂದು ಫೋಟೋ, ವಿಡಿಯೋ ಇರುವುದು ವರದಿಯಲ್ಲಿ ಕಂಡುಬಂದರೂ, ವಾದಕ್ಕೂ ಅವಕಾಶ ನೀಡದೆ ಅರ್ಜಿ ವಜಾ ಗೊಳಿಸಲಾಗುವು ದೆಂದು ತಿಳಿಸಿ ವಿಚಾರಣೆಯನ್ನು ಜು.17ಕ್ಕೆ ಮುಂದೂಡಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani