Monday, 02 Jul, 7.19 am Uk Suddi

ಹೋಂ
ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ.

✍ಶೃತಿ ಶಂಕರ ಗುಡಸ.

೧೨ನೇ ಶತಮಾನದ ನಂತರ ವಚನ ಸಾಹಿತ್ಯಕ್ಕೆ ಪುನರ್ ಚೈತನ್ಯವನ್ನು ತಂದು ಕೊಟ್ಟು ಕೀತಿ೯ ಹಳಕಟ್ಟಿ ಅಜ್ಜನವರಿಗೆ ಸುಲ್ಲುತ್ತದೆ..
ಬಸವಾದಿ ಶರಣರ ವಚನ ಸಾಹಿತ್ಯವನ್ನು ಬೆಳೆಕಿಗೆ ತಂದರು. ಒಂದು ವಿಶ್ವವಿದ್ಯಾಲಯ ಸಾಧಿಸಿದಷ್ಟು ಕೆಲಸವನ್ನು ಏಕಾಂಗಿ ವೀರಾಗಿ ಸಾಧಿಸಿದರು ಅವರು ಒಂದು ವ್ಯಕ್ತಿಯಾಗಿರದೆ ಒಂದು ಶಕ್ತಿಯಾಗಿ ಬದುಕಿದರು.

ಅಂತಹ ಹಳಕಟ್ಟಿ ಅಜ್ಜವರನ್ನು ನೆನೆದು ಬರೆದಿರೋ ಸಾಲುಗಳು ಇವು..

ಡಾ/ ಫಕಿರಪ್ಪ ಗುರುಬಸಪ್ಪ ಹಳಕಟ್ಟಿಯವರು ೨-೭-೧೮೮೦ ಧಾರವಾಡದಲ್ಲಿ ಜನಿಸಿದ್ದರು.ತಾಯಿ ದಾನಮ್ಮ ತಂದೆ ಗುರುಬಸಪ್ಪವರು ಶಾಲಾ ಶಿಕ್ಷಕಾಗಿದ್ದರು ಇವರ ಪೊವ೯ಜರು ಬೆಳಗಾವಿಯಲ್ಲಿ ಜಿಲ್ಲೆ ಸವದತ್ತಿ ತಾಲೊಕಿನ ಹಳಕಟ್ಟಿಯಿಂದ ಬಂದವರು ಅಂತೆಯೇ ಅವರ ಮೆನೆತನದ ಹೆಸರು ಹಳ್ಳಕಟ್ಟಿ ಎಂದಾಗಿದೆ..

ಫ.ಗು.ಹಳಕಟ್ಟಿಯವರ ತಂದೆ ಗುರುಬಸಪ್ಪ ಅವರು ಬಹಳ ದೊಡ್ಡ ಸಾಹಿತಿಗಳು ಹಾಗು ವಿದ್ವಾಂಸರಾಗಿದ್ದರು ಅವರು ಕನ್ನಡ ಸಂಸಕೃತಿ ಸಾಹಿತ್ಯಗಳಲ್ಲಿ ಪಳಗಿದವರಾಗಿದ್ದರು.ಆದ ಕಾರಣ ಧಾರವಾಡ ಡೆಪ್ಯುಟಿ ಎಜುಕೇಶನ ಇನ್ಸಪೆಕ್ಟರ ಆಫೀಸಿನಲ್ಲಿ ಸೀನಿಯರ್ ಕರನೀಕರೆಂದು: ವಗಾ೯ಯಿಸಲ್ಪಟ್ಟರು.

ಅವರು ಕನ್ನಡದಲ್ಲಿ ಇಡೀ ಇಂಗ್ಲೆಂಡ್ ದೇಶದ ಇತಿಹಾಸವನ್ನು ಸಂಗ್ರಹಿಸಿ ಗ್ರಂಥ ರೊಪದಲ್ಲಿ ಪ್ರಕಟಿಸಿದ್ದರು.. ಮತ್ತು ಈಗಿನ ಪಂಚಾಯತ ರಾಜ್ಯ ವ್ಯವಸ್ಥೆಯನ್ನು ಆಗಿನ ಕಾಲದಲ್ಲಿ ಮೊಟ್ಟಮೊದಲು ಜಾರಿಗೆ ತಂದ ಕೀತಿ೯ ಗುರುಬಸಪ್ಪನವರಿಗೆ ಸಲ್ಲುತ್ತದೆ..

ಫಕೀಪ್ಪನವರು ಮೂರುವಷ೯ದ ಮಗು ಇದ್ದಾಗಲೇ ಅವರ ಪ್ರೀತಿಯ ತಾಯಿ ದಾನಮ್ಮ ಶಿವನ ಪಾದ ಸೇರಿದ್ದರು.. ಆಗ ಗುರುಬಸಪ್ಪನವರು ಇನ್ನೊಂದು ಮದುವೆ ಆದರೆ ಆ ಮಗುವಿಗೆ ಮಲತಾಯಿ ಆಗುವಳು ಎಂದು ತಿಳಿದು ಅವರು ಮದುವೆ ಆಗದೆ ಆ ಮಗುವಿನ ಆರೈಕೆ ತಾವೇ ಮಾಡಿದ್ದರು ಗಂಡು ಮಗು ಹುಟ್ಟಿದಾಗ ಸಂತೋಷ ಪಡುವುದು ಅಷ್ಟೇ ತಂದೆಯ ಕೆಲಸವಲ್ಲ, ಹೇಗಾದರು ಮಗುವಿನ ಲಾಲನೆ ಪಾಲನೆ ಪೋಷಣೆ ಮಾಡಿ. ದೈಹಿಕ, ಮಾನಸಿಕ, ಭೌತಿಕ, ಹಾಗೊ ಧಮ೯ವಂತರಾಗಿ ಬೆಳೆಸುವ ಛಲವನ್ನು ತೊಡುತ್ತಾರೆ ಮತ್ತು ಹಾಗೆ ಬೆಳೆಸುತ್ತಾರೆ..

ಇವರಿಗೆ ಸಹಾಯಕ್ಕಾಗಿ ಅವರ ತಾಯಿ ಅಂದರೆ ಹಳಕಟ್ಟಿ ಅವರ ಅಜ್ಜಿ ಬಸಮ್ಮರ ಆಶ್ರಯದಲ್ಲಿ ಅವರ ಬೆಳವಣಿಗೆ ಆಗುತ್ತದೆ.

ಫ.ಗು.ಹ.. ಮ್ಯಾಟ್ರಿಕ ಪರೀಕ್ಷೆ ೧೮೯೬ ರಲ್ಲಿ ಬಿ.ಎ. ಪದವಿಯನ್ನು ೧೯೦೨ರಲ್ಲಿ, ಎಲ್ ಎಲ್.ಬಿ.ಪದವಿಯನ್ನು ೧೯೦೪ರಲ್ಲಿ ಮುಗಿಸುತ್ತಾರೆ ವಕೀಲವೃತ್ತಿಯನ್ನು ಆರಂಭಿಸುತ್ತಾರೆ.
೧೮೯೭ರಲ್ಲಿ ಬನಹಟ್ಟಿಯ ಚಕ್ಕೋಡಿ ತಮ್ಮಣ್ಣಪ್ಪನವರು ಮಗಳು ಭಾಗೀರಥಿಯೊಡನೆ ಇವರ ವಿವಾಹವಾಗುತ್ತದೆ..

ಧಾರವಾಡಲ್ಲಿ ಪ್ಲೇಗ್ ಬೇನೆ ಹಾವಳಿ ಹೆಚ್ಚಾಗಿರುವದರಿಂದ ಫಕೀರಪ್ಪನ್ನವರು ಕೆಲವು ವಷ೯ ಬನಹಟ್ಟಿಯಲ್ಲಿ ವಾಸವಾಗಿದ್ದರು ಆ ವೇಳೆಯಲ್ಲಿ ಅವರ ಜೀವನ ದೊಡ್ಡ ತಿರುವನ್ನು ಪಡೆಯಿತು..
೧೯೦೩ ರಲ್ಲಿ ಶಿವಲಿಂಗಪ್ಪ ಪಂಚಾಳ ಅವರ ಮನೆಗೆ ಹೋಗಿರುತ್ತಾರೆ ಅಲ್ಲಿ ಅವರಿಗೆ "ಷಟಸ್ಥಳ ತಿಲಕ" ಮತ್ತು ವಚನ ತಾಡೋಲೆಗಳನ್ನು ನೋಡಿ ಬಹಳ ಆಕ೯ಷಕಾಗಿತ್ತಾರೆ..
ಅವರ ಮಾವನಾದ 'ತಮ್ಮಣ್ಣ ಚಿಕ್ಕೋಡಿ' ಯವರು ತಾಡೋಲೆ ಮಹತ್ವ ಬಗ್ಗೆ ತಿಳಿಸುತ್ತಾರೆ.

ಅವರು ರಬಕವಿ,ಬನ್ಮಟ್ಟಿ,ಗೋಠೆ ಅನೇಕ ಊರುಗಳನ್ನು ಸುತ್ತಾಡಿ ತಾಡೋಲೆ ಗ್ರಂಥಗಳನ್ನು ಸಂಗ್ರಹಿಸುತ್ತಾರೆ.
ವೀರಭದ್ರಪ್ಪನವರ ಪರಿಚಯದಿಂದ ಗೋಠೆ ಗ್ರಾಮಕ್ಕೆ ಹೋದಾಗ ಅಲ್ಲಿ ಫಕೀರಪ್ಪನ್ನವರಿಗೆ ಅತ್ಯಮೂಲ್ಯ ಗ್ರಂಥಭಾಷ್ಯಾ ರತ್ನಮಾಲೆ ನೋಡಲು ಸಿಕ್ಕವು ಅವು ಅವರ ಬದುಕಿನ ದಿಕ್ಕನೆ ಬದಲಿಸಿದ್ದವು ಬಸವಾದಿ ಶರಣರ ವಚನ ಸಾಹಿತ್ಯ ಸಂಶೋಧನೆಗೆ ಮನಸ್ಸು ಹಾತೂರೆತು..

ಹಳಕಟ್ಟಿಯವರು ಜೀವನೋಪಾಯಕ್ಕಾಗಿ ವಕೀಲ ವೃತಿಯನ್ನು ಕೈಗೊಂಡರು ಬಿಜಾಪುರದಲ್ಲಿ ನೆಲೆಸಿದ್ದರು ಇವರ ನ್ಯಾಯ ನಿಷ್ಠುರತೆ ಪ್ರಾಮಾಣಿಕತೆಗೆ ಮೆಚ್ಚಿ ಸರಕಾರವು ಇವರನ್ನು ೧೯೨೫ರಲ್ಲಿ ಪ್ರಾಸಿಕ್ಯೊಟರ್ ಹಾಗು ಸರಕಾರಿ ವಕೀಲ ಕೆಲಸ ಮಾಡುತ್ತಲೇ ಹಳಕಟ್ಡಿಯವರು ಸಮಾಜಮುಖಿ ಕೆಲಸ ಮಾಡಿದ್ದರು..

ರೈತ ಸೇವಾಸಂಘ ಹಣಕಾಸು ಸಂಸ್ಥೆ, ಸಿದ್ದೇಶ್ವರ ಬ್ಯಾಂಕ, ಬಿ.ಎಲ್.ಡಿ.ಇ ಶಿಕ್ಷಣ ಸಂಸ್ಥೆ ಮೊದಲಾಗಿ ಹಲವಾರು ಸಂಸ್ಥೆಗಳನ್ನು ಕಟ್ಟಿದ್ದರು.

ಬಿಜಾಪುರದಲ್ಲಿ ಕನ್ನಡ ಶಾಖೆಗಳನ್ನು ತೆರೆದು ಕನ್ನಡ ವಾತಾವರಣ ನಿಮಿ೯ಸಿದ್ದರು.

ಇವರ ಸಾಮಾಜಿಕ ಮತ್ತು ಸಾಹಿತ್ಯಿಕ ಸೇವೆಯನ್ನು ನೋಡಿ ಸರಕಾರ "ರಾವ್ ಸಾಹೇಬ" ಮತ್ತು "ರಾವಬಹದ್ದೊರ" ಎಂಬ ಬಿರುದ್ದನ್ನು ನೀಡಿ ಗೌರವಿಸುತ್ತು..

ಇವರು ವಚನ ಸಾಹಿತ್ಯ ಪುನರುಜ್ಜೀವನಕ್ಕೆ ತಮ್ಮ ಜೀವನ ಮುಡಿಪಿಟ್ಟರು..
ಪ್ರಭುಲಿಂಗ ಲೀಲೆ ಎಂಬ ಷಟ್ಪದಿ ಗ್ರಂಥ ಹಾಗೂ ಗುಬ್ಬಿ ಮಲ್ಲಣ್ಣವರು ಸಂಗ್ರಹಿಸಿದ 'ಘನ ಭಾಷಾ ರತ್ನ ಮಾಲೆ', 'ಷಟಸ್ಥಳ ತಿಲಕ', ಇವು ಅವರ ಮೇಲೆ ಬಹಳ ಆಕ೯ಷಿತವಾದವು ಈ ತಾಡೋಲೆಗಳನ್ನು ಸಂಗ್ರಹಿಸಿ ವಚನಗಳನ್ನು ಪ್ರಕಟಿಸಲು ಅವರ ವಕೀಲ ವೃತ್ತಿ ಅಡ್ಡಿಯಾದ ಕಾರಣ ಅದನ್ನೆ ಬಿಡುತ್ತಾರೆ.

ಅವರು ನೊರಾರು ಶಿವ-ಶರಣೆಯರ ವಚನಗಳನ್ನು ಹುಡುಕಿ ಅವುಗಳನೆಲ್ಲಾ ಸಂಗ್ರಹಿಸಿ ಮೊಟ್ಟ ಮೊದಲು "ಶೂನ್ಯ ಸಂಪಾದನೆ ಮತ್ತು ವಚನಶಾಸ್ತ್ರ ಸಾರ" ಎಂಬ ಗ್ರಂಥವನ್ನು ಪ್ರಕಟಿಸುತ್ತಾರೆ.

ಇದನ್ನು ಮುದ್ರಣಕ್ಕಾಗಿ ೧೯೨೩ ರಲ್ಲಿ ಮಂಗಳೊರು ಬ್ಯಾಸೆಲ್ ಕ್ರಿಶ್ಚಿಯನ್ ಮಿಶನರಿ ಪ್ರೆಸ್ ಗೆ ಕಳುಸಿದ್ದರು ಇದರ ಮುದ್ರಣಕ್ಕಾಗಿ ರೊ ೫೦೦ ಮುಂಗಡದೊಂದಿಗೆ ಕಳಿಸಿದ್ದರು.

ಆದರೆ ಮುದ್ರಾಲಯದ ಮುಖ್ಯಸ್ಥರು ಈ ಗ್ರಂಥ ವನ್ನು ಓದಿ ಇದರ ಮಹತ್ವವನ್ನು ಅರಿತು ವಚನಗಳ ಪ್ರಕಟಕಣೆಯಿಂದ. ತಮ್ಮ ಮಿಶನರಿ ಉದ್ದೇಶಕ್ಕೆ ಭಂಗವಾದಿತೆಂದು ಹಸ್ತಪ್ರತಿ ಮತ್ತು ಕಳಸಿದ್ದ ಹಣವನ್ನು ವಾಪಸು ಕಳಿಸಿದ್ದರು..

ನಂತರ ಹಳಕಟ್ಟಿಯವರು ಬೆಳಗಾವಿಯ ಚೌಗಲೆಯವರ ಮಹಾವೀರ ಪ್ರೆಸ್ ನಲ್ಲಿ ಮುದ್ರಿಸಿ ಪ್ರಕಟಿಸಿದ್ದರು..
ಈ ಗ್ರಂಥಗಳನ್ನು ಓದಿ ಕನ್ನಡ ಪಂಡಿತರು ಸಾಹಿತಿಗಳು ಆದ
ಆರ್ ಎನ್ ನರಸಿಂಹಾಚಾರ್ಯರು, ಬೆನಗಲ್ ರಾಮರಾಮ, ಕೆ.ಪಿ. ಪುಟ್ಟಣ್ಣಾಶಟ್ಟರು, ಶ್ರೀನಿವಾಸಮೂತಿ೯, ಬಿ.ಎಂ.ಶ್ರೀ, ಉತ್ತಂಗಿ ಚೆನ್ನಬಸಪ್ಪ.ಮುಂತಾದರವರು
ಹಳಕಟ್ಟಿ ತಂದೆಯವರು ವಚನಗಳನ್ನು ಸಂಗ್ರಹಿಸಿ ಗ್ರಂಥ ರೊಪದಲ್ಲಿ ಪ್ರಕಟ ಮಾಡಿದ್ದಕ್ಕಾಗಿ ಅವರಿಗೆ "ವಚನ ಪಿತಾಮಹ" ಎಂದು ಹೆಸರಾದರು.

ಬಿ ಎಂ ಶ್ರೀ ಇವರನ್ನು ಸಕಲ ಕನ್ನಡಿಗರ ಹೃದಯಗಳಲಗಲ್ಲಿ "ವಚನ ಗುಮ್ಮಟ" ಗಳನ್ನು ನಿಮಿ೯ಸಿದ ಮಹಾಶಿಲ್ಪಿ, ಶ್ರೇಷ್ಠ ಶರಣ ಫಕೀರಪ್ಪ ಎಂದು ಕರೆದರು.

ವಚನ ಸಾಹಿತ್ಯ ಸಂಶೋಧನೆಗಾಗಿ ಹಳಕಟ್ಟಿ ಅಜ್ಜನವರು ಪಟ್ಟ ಕಷ್ಟ ಅಷ್ಟೀಸ್ಟ ಅಲ್ಲಾ ಅವರು ಮಾಡಿದ ಸಾಧನೆಯ ಶಿಖರವನ್ನು ದಾಟಿದೆ..

ವಚನ ಸಾಹಿತ್ಯ ಪ್ರಸಾಕ್ಕಾಗಿ.

*೧೯೭೫ರಲ್ಲಿ 'ಹಿತಚಿಂತಕ' ಮುದ್ರಾಲಯ ಸ್ಥಾಪನೆ ಮಾಡಿದ್ದರು.
*೧೯೫೬ ರಲ್ಲಿ ' ಶಿವಾನುಭ ತೈಮಾಸಿಕ ಪತ್ರಿಕೆ' ಪ್ರಾರಂಭ
* ೧೯೨೮ ರಲ್ಲಿ 'ನವಕನಾ೯ಟಕ' ವಾರ ಪತ್ರಿಕೆ ಪ್ರಾರಂಭಿಸಿದ್ದರು.
ಇದರ ಜೊತೆಗೆ ಅನೇಕ ಜನ ಶಿವ-ಶರಣ-ಶರಣೆಯರ ಕುರಿತು ಬರೆದ ಶೂನ್ಯ ಸಂಪಾದನೆಗಳು ೨೫ ವಷ೯ಗಳಲ್ಲಿ ಸುಮಾರು ೯೦೦೦ ಪುಟಗಳಲ್ಲಿ ೭೫ ಗ್ರಂಥಗಳನ್ನು ಪ್ರಕಟಿಸಿದ್ದರು.

ಇವರ ಸೇಹ್ನಿತರಾದ ಬಬಲೇಶ್ವರದ ಸಂಗಪ್ಪ ಮಿಜಿ೯, ಚೊಳಚ ಗುಡ್ಡದ ಚಂದ್ರಶೇಖರಯ್ಯಾ ಮಠ ಅವರು ಇವರ ಕೆಲಸಕ್ಕೆ ಹೆಗಲಿಗೆ ಹೆಗಲು ಕೊಟ್ಟು ನಿಂತು ತನು ಮನ ಧನದಿಂದ ಸಹಾಯ ಮಾಡಿದ್ದವರು.

ಹಡೆ೯ಕರ ಮಂಜಪ್ಪನವರು, ಬಂಥನಾಳ ಶಿವಯೋಗಿಗಳು ಇವರು ಕೈ ಕೊಂಡ ಕಾಯ೯ಕ್ಕೆ ಸ್ಪಂದಿಸಿ ಪ್ರೋತ್ಸಾಹಿಸಿದರು.

ಹಳಕಟ್ಟಿಯವರು ಬಸವಣ್ಣನವರ ವಚನಗಳನ್ನು ಇಂಗ್ಲಿಷ್ ನಲ್ಲಿ ಭಾಷಾಂತರಿಸಿ "ಇಂಡಿಯನ್ ಆಯಂಟಿಕ್ವರಿ" ಯಲ್ಲಿ ಪ್ರಕಟಿಸಿದ್ದರು. ವಚನಗಳನ್ನು ಮೊಟ್ಟಮೊದಲು ಇಂಗ್ಲಿಷ್ ಭಾಷೆಗೆ ತಜು೯ಮೆ ಗೊಳಸಿದ ಶ್ರೇಯಸ್ಸು ಅಜ್ಜನವರಿಗೆ ಸಿಕ್ಕುತ್ತದೆ..

ಕನ್ನಡ ಸಾಹಿತ್ಯ ಪರಿಷತ್ತು ೧೯೨೬ ರಲ್ಲಿ ಬಳ್ಳಾರಿಯಲ್ಲಿ ನಡೆದ ೧೨ ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆರಿಸಿತು. ೧೯೯೨೮ ರಲ್ಲಿ ಧಾರವಾಡದಲ್ಲಿ ನಡೆದ ಕನಾ೯ಟಕ ಏಕೀಕರಣ ಸಭೆಗೆ ಇವರು ಅಧ್ಯಕ್ಷರಾಗಿದ್ದರು. ೧೯೯೩ ರಲ್ಲಿ ಧಾರವಾಡದಲ್ಲಿ ನಡೆದ ಅಖಿಲ ಭಾರತ ಸಮ್ಮೇಳನದಲ್ಲಿ ಅಧ್ಯಕ್ಷರಾದರು ಬೆಳಗಾವಿಯಲ್ಲಿ ಲಿಂಗರಾಜ ಕಾಲೇಜ ಸ್ಥಾಪನೆಗೆ ಧಾರವಾಡದಲ್ಲಿ ವಿಶ್ವ ವಿದ್ಯಾಲಯ ಬಾಗಲಕೋಟೆ ಬಸವೇಶ್ವರ ಕಾಲೇಜ ಸ್ಥಾಪನೆಗೆ ವಿಶೇಷ ಪ್ರಯತ್ನ ಮಾಡಿದರು.

ಕನಾ೯ಟಕ ವಿಶ್ವ ವಿದ್ಯಾಲಯ ಇವರಿಗೆ ೧೯೫೬ ರಲ್ಲಿ "ಡಾಕ್ಟರೇಟ್ ಪದವಿ" ನೀಡಿ ಗೌರವಿಸಿತು..

ಹಳ್ಳಕಟ್ಟಿಯವರು ಜೀವನದುದ್ದಕ್ಕೂ ಕಹಿಯನ್ನೇ ಉಂಡೆಯ.ಪ್ರತಿಕೆಗಳನ್ನು ನಡೆಸಲು ಎಂಟೆದೆಯ ಬಂಟತನವೂ ಬೇಕು.

ಬಡತನವೇ ಅವರ ಬಂಡವಾಳವಾಗಿತ್ತು ಆದರೂ ಕನ್ನಡಕ್ಕೊಬ್ಬರೆ ಜಟ್ಟಿ ಹಳಕಟ್ಟಿ ಅಜ್ಜನವರು
ಹಿಡಿದ ಕಾರ್ಯವನ್ನು ಮಾಡಿದ ಸಾಲವನ್ನು ತೀರಿಸಲು ತಮ್ಮ ಸ್ವಂತ ಮನೆಯನ್ನೇ ಮಾರಿದರು.
'ನಡೆದರೆಡಹುವರಲ್ಲದೆ
ಕುಳಿತವರೆಡಹುವರೆ'
ಎಂಬಂತೆ ಕೆಲಸ ಮಾಡುವರಿಗೇ ಆಪತ್ತುಗಳು ಸುತ್ತಿ ಬರುತ್ತವೆ ಹಲವಾರು ಬಾರಿ ಅನಾರೋಗ್ಯದಿಂದ ಬಳಲಿದರು. ಆಘಾತಕ್ಕೆ ಈಡಾದರು.ಹಿರಿಯ ಮಗನನ್ನು ಕಳೆದುಕೊಂಡರು..

ಮಹಾಯುದ್ಧದ ಕಾಲಕ್ಕೆ ಮುದ್ರಣ ಸಾಮಾಗ್ರಿ ಸಿಗದೆ ಕಂಗೆಟ್ಟರು. ಅವರೊಬ್ಬ ಸ್ಥಿತ ಪ್ರಜ್ಞೆ ವ್ಯಕ್ತಿಯಾಗಿದ್ದರು.

ಬಂದ ಎಲ್ಲ ಆಪತ್ತು ವಿಪತ್ತುಗಳನ್ನು ಧೈಯ೯ದಿಂದ ಎದುರಿಸಿದರು.ಎಲೆ ಮರೆಯ ಕಾಯಿಯಂತೆ ಬಾಳಿ ಬದುಕಿ ಸಮಾಜ ಹಿತಕ್ಕಾಗಿ ತಮ್ಮನ್ನು ಸಮಪಿ೯ಸಿಕೊಂಡರು.

ಅವರು ಮಾಡಿದ ಬಹುಮುಖ ಸಾಧನೆಗಳನ್ನು ಮೆಚ್ಚಿ ನಾಡಿನ ಜನತೆ ಅವರಿಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ಅವರನ್ನು ವಚನ ಪಿತಾಮಹ, ವಚನಗುಮ್ಮಟ ,ರಾವಸಾಹೇಬ, ಇಳೆಗಿಳೆದ ಶರಣ ಮುಂತಾದ ಹೆಸರುಗಳಿಂದ ಕರೆದ್ದೀದ್ದಾರೆ..

ಮಾಹಲಿಂಗಪುರದ ಅವರ ಅಭಿಮಾನಿಗಳು ಬಿ.ಎಮ್ ಪಾಟೀಲರ ನೇತೃತ್ವದಲ್ಲಿ "ಹಳಕಟ್ಟಿ ರಾಷ್ಟ್ರೀಯ ಟ್ರಸ್ಟ್ ಸ್ಥಾಪಿಸಿ" ವಿವಿಧ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಅಹ೯ ವ್ಯಕ್ತಿಗಳಿಗನ್ನು ಗುರುತಿಸಿ ಪ್ರತಿ ವಷ೯ "ಹಳಕಟ್ಟಿ" ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ..

ಶರಣ ಹಳಕಟ್ಟಿಯವರು ನುಡಿದ್ದುದೇ ವೇದವಾಯಿತು. ನಡೆದುದೇ ಬಟ್ಟೆಯಾಯಿತು. ಅವರು ಎಂಭತ್ತನಾಲ್ಕು ವರುಷಗಳ ಸಾಥ೯ಕ ಬಾಳು.
ಮುಪ್ಪಿನಿಂದ ಶರೀರವು ಹಣ್ಣಾದಂತೆ ಮನವು ಹಣ್ಣಿನೊಳಗಿನ ತನಿರಸದಂತಾಯಿತು. ಅವರು ನಿದ್ರೆಗೈದುದೇ ಜಪವಾಯಿತು. ಎದ್ದು ಕುಳಿತ್ತೀದ್ದೇ ಶಿವರಾತ್ರಿಯಾಯಿತು. ನಡೆದ ದಾರಿ ಪಾವನವಾಯಿತು. ನುಡಿದಮಾತು ಶಿವತ್ತತ್ವವಾಯಿತು.

ಅವರ ಕಾಯ ವಂಚನೆ ಮಾಡಲ್ಲಿಲ್ಲಾ. ತನ್ನದೆನ್ನುವುದೆಲ್ಲವನ್ನು ಸಕಲ ಜೀವಾತ್ಮರಿಗೆ ಲೇಸಿಗಾಗಿ ಈಡಾಡಿದ ಮಹಾಶರಣರವರು..

ಅವರು ಉಪಮಾತೀತರು, ಕಾಲಕಮ೯ರಹಿತರು, ಭವರಹಿತರು, ಇಂತಹ ದೈವೀಗುಣಗಲನ್ನು ಅಳವಡಿಸಿಕೊಂಡ ಶಿವಶರಣರು
ಡಾ.ಫ.ಗು.ಹಳ್ಳಕಟ್ಟಿ ಅವರು ೨೯-೬-೧೯೬೪ ರಂದು ಕರಪೋರದ ಗಿರಿಯ ಉರಿಕಂಡತೆ ಲಿಂಗದಲ್ಲಿ ಐಕ್ಯರಾದರು.
ಲಿಂಗೈಕ್ಯರಾದರು..

ಬಸವತ್ತತ್ವ ಲಿಂಗಾಯತ ಧಮ೯ಕ್ಕೆ ಹಳಕಟ್ಟಿ ಅಜ್ಜನವರ ಕೊಡಗೆ ಅಪಾರ. ಅಜ್ಜನವರು ಸಂಶೋಧನೆ ಮಾಡಿದ್ದ ವಚನ ಸಾಹಿತ್ಯ ಇಂದು ನಮ್ಮಲ್ಲೆರ ಬಾಳಿನ ಬೆಳಕನ್ನಾಗಿಸಿದೆ.

ನಾವೆಲ್ಲ ಹಳಕಟ್ಟಿ ಅಜ್ಜನವರ ಋಣತೀರಿಸಲು ಅಸಾಧ್ಯ ಆದರೆ ಪ್ರತಿನಿತ್ಯ ಒಂದಾದರೂ ವಚನಗಳನ್ನು ಓದಿ ಸಾಧ್ಯವಾದಷ್ಟು ಜೀವನದಲ್ಲಿ ಪಚನ ಮಾಡಿಕೊಳ್ಳುವುದರ ಮೊಲಕ ಅವರಿಗೆ ಗೌರವನ್ನು ಸಲ್ಲಿಸೋಣಾ.

ನಮ್ಮ ಕೈಯಲ್ಲಿ ಸಾಧ್ಯವಾದಷ್ಟು ನಮ್ಮ ಕೊನೆಯ ಉಸಿರಿರೋವರಿಗೊ ಬಸವತ್ತತ್ವವನ್ನು ಶರಣವಚನಗಳನ್ನು ಬಿತ್ತುವಂತ ಶುದ್ದವಾದ ಕಾಯ೯ಮಾಡೋಣ.

"ಸಕಲ ಜೀವಾತ್ಮರಿಗು ಲೇಸಾಗಲಿ"
ಬಸವಾದಿ ಪ್ರಥರಿಗೆ ಜಯವಾಗಲಿ..
ಬಸವಾದಿ ಪ್ರಮಥರನ್ನು ನೆನೆದು ಹಳಕಟ್ಟಿ ಅಜ್ಜನವರನ್ನು ನೆನೆದು
ವಚನ ಪಿತಾಮಹ ಹಳಕಟ್ಟಿ ಅಜ್ಜನವರ ಜಯಂತಿಯೋತ್ಸವದ ಶುಭಾಶಗಳು.
ಎಲ್ಲರಿಗೂ ಶರಣು ಶರಣಾಥಿ೯ಗಳು

✍ಶೃತಿ ಶಂಕರ ಗುಡಸ.
ಲಿಂಗಾಯತ ಸಂಘಟನೆ ಬೆಳಗಾವಿ

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Uk Suddi
Top