Dailyhunt
110ರೂ. ಮುಖಬೆಲೆಯ ಪುಸ್ತಕ 10ರೂ.ಗೆ ಮಾರಾಟ!

110ರೂ. ಮುಖಬೆಲೆಯ ಪುಸ್ತಕ 10ರೂ.ಗೆ ಮಾರಾಟ!

ಣಿಪಾಲ, ಎ.4: ಕರ್ನಾಟಕ ಸರಕಾರದ ಗ್ರಂಥಾಲಯ ಇಲಾಖೆಯು ಸಗಟು ಖರೀದಿಯ ಅಡಿಯಲ್ಲಿ ಆಯ್ಕೆಯಾದ ಪುಸ್ತಕಗಳನ್ನು ಇವತ್ತಿಗೂ ಖರೀದಿಸದ ಕಾರಣದಿಂದ ನೊಂದ ಲೇಖಕ, ಹಿರಿಯ ಪತ್ರಕರ್ತ ತಿಲಕನಾಥ ಮಂಜೇಶ್ವರ ಎ.2ರಿಂದ ಮಣಿಪಾಲದ ಬಸ್ ನಿಲ್ದಾಣದ ಬಳಿ ಸಂತೆಯಲ್ಲಿ ಕುಳಿತು ತಮ್ಮ 110ರೂ.

ಮುಖಬೆಲೆಯ ಪುಸ್ತಕವನ್ನು ಕೇವಲ 10ರೂ. ಮಾರಾಟ ಮಾಡುವ ಮೂಲಕ ಸೌಮ್ಯ ಪ್ರತಿಭಟನೆ ನಡೆಸುತ್ತಿದ್ದಾರೆ.

ತರಂಗದ ಹಿರಿಯ ಸಂಪಾದಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾದ ತಿಲಕನಾಥ್, ಈವರೆಗೆ ಬಹಳಷ್ಟು ಕೃತಿ ಗಳನ್ನು ಬರೆದಿದ್ದಾರೆ. ಐದು ವರ್ಷಗಳ ಹಿಂದೆ ಕರ್ನಾಟಕ ಸರಕಾರದ ಗ್ರಂಥಾಲಯ ಇಲಾಖೆ ಸಗಟು ಖರೀದಿಯ ಅಡಿಯಲ್ಲಿ ಇವರ ಪುಸ್ತಕಗಳನ್ನು ಖರೀದಿಗೆ ಆಯ್ಕೆ ಮಾಡಿತ್ತು. ಆದರೆ ಇವತ್ತಿಗೂ ಖರೀದಿಸದೆ ಇರುವ ಕಾರಣ ನೊಂದ ಇವರು ಸೌಮ್ಯ ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಗಮನಿಸಿದ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಅಧ್ಯಕ್ಷರು ಮತ್ತು ಎಲ್ಲ ಸದಸ್ಯರು ಎ.4ರಂದು ಪ್ರತಿಭಟನಾನಿರತ ಹಿರಿಯ ಸಾಹಿತಿ ತಿಲಕನಾಥ ಮಂಜೇಶ್ವರರ ಬಳಿಗೆ ಬಂದು, ಅವರ ಎಲ್ಲ ಕೃತಿಗಳ ಪ್ರತಿಗಳನ್ನು ಖರೀದಿಸಲು ಮುಂದಾದರು. ಆದರೆ ಇದಕ್ಕೆ ತಿಲಕನಾಥ ಮಂಜೇಶ್ವರ ಒಪ್ಪಲಿಲ್ಲ. ನಾನು ಪುಸ್ತಕ ಮಾರುತ್ತಿರುವುದು, ಸರಕಾರದ ನಿರ್ಲಕ್ಷದ ವಿರುದ್ಧ ಪ್ರತಿಭಟ ನಾರ್ಥ ವಾಗಿ. ಹಾಗಾಗಿ ಒಂದು ಪುಸ್ತಕಕ್ಕೆ 10ರೂ.ಗಳಂತೆ ಕೊಟ್ಟು, ಖರೀದಿಸಿ ಎಂದು ತಿಲಕನಾಥ ಮಂಜೇಶ್ವರ ತಿಳಿಸಿದರು.

ಅದರಂತೆ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಪತ್ತಿನ ಗೌರವ ಸಲಹೆಗಾರ ವಿಶ್ವನಾಥ್ ಶೆಣೈ ಎಲ್ಲ ಕೃತಿ ಗಳನ್ನು ಖರೀದಿಸಿ ಪರಿಷತ್ತಿನ ಗ್ರಂಥಾಲಯ ಅಭಿಯಾನಕ್ಕೆ ನೀಡಿದರು. ಆ ಮೂಲಕ ತಿಲಕನಾಥ ಮಂಜೇಶ್ವರ ಅವರ ಪ್ರತಿಭಟನೆಗೆ ಪೂರ್ಣ ವಿರಾಮ ನೀಡಲಾಯಿತು.

'ಉಡುಪಿ ಪ್ರಜ್ಞಾವಂತರ ಜಿಲ್ಲೆ. ನಮ್ಮ ಜಿಲ್ಲೆಯಲ್ಲಿ ಅಥವಾ ಇನ್ನಾವುದೇ ಜಿಲ್ಲೆಯಲ್ಲಿ ಇಂತಹ ಘಟನೆ ಮತ್ತೆ ನಡೆಯ ದಿರಲಿ. ಸರಕಾರವು ಉಡುಪಿಯ ಈ ಸಾಹಿತಿಗಳ ಪ್ರತಿಭಟನೆಯಿಂದಲಾದರೂ ಇನ್ನಾದರೂ ಎಚ್ಚೆತ್ತುಕೊಳ್ಳಲಿ. ಯಾವುದೇ ಬರಹಗಾರರನ್ನು ನಿರ್ಲಕ್ಷಿಸದಿರಲಿ. ಇನ್ನೊಮ್ಮೆ ಯಾವುದೇ ಸಾಹಿತಿಗಳು ಬೀದಿಗೆ ಬಂದು ಪುಸ್ತಕ ಮಾರುವಂತಾಗದಿರಲಿ. ಸರಕಾರ ಮತ್ತು ಸಂಬಂಧಪಟ್ಟ ಇಲಾಖೆಯವರು ಇದರ ಬಗ್ಗೆ ವಿಶೇಷವಾದ ಗಮನವನ್ನು ಹರಿಸಿ ನ್ಯಾಯ ಒದಗಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್.ಪಿ. ಮನವಿ ಮಾಡಿದರು.

Dailyhunt
Disclaimer: This content has not been generated, created or edited by Dailyhunt. Publisher: Varthabharathi