Dailyhunt
200ನೇ IPL ಪಂದ್ಯವನ್ನಾಡಿದ 11ನೇ ಆಟಗಾರ ಅಜಿಂಕ್ಯ ರಹಾನೆ

200ನೇ IPL ಪಂದ್ಯವನ್ನಾಡಿದ 11ನೇ ಆಟಗಾರ ಅಜಿಂಕ್ಯ ರಹಾನೆ

ಕೋಲ್ಕತಾ: ಕೆಕೆಆರ್ ತಂಡದ ನಾಯಕ ಅಜಿಂಕ್ಯ ರಹಾನೆ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಈಡನ್ ಗಾರ್ಡನ್ಸ್ ನಲ್ಲಿ ಗುರುವಾರ ತನ್ನ 200ನೇ ಐಪಿಎಲ್ ಪಂದ್ಯವನ್ನಾಡಿದ್ದಾರೆ. ಪಂದ್ಯಾವಳಿಯ ಇತಿಹಾಸದಲ್ಲಿ 200 ಪಂದ್ಯಗಳನ್ನಾಡಿದ 11ನೇ ಆಟಗಾರ ಎನಿಸಿಕೊಂಡರು.

ಸಿಎಸ್ಕೆ ತಂಡದ ಎಂ.ಎಸ್. ಧೋನಿ ಐಪಿಎಲ್ ನಲ್ಲಿ ಅತ್ಯಂತ ಹೆಚ್ಚು ಪಂದ್ಯಗಳನ್ನು(278)ಆಡಿದ್ದಾರೆ.

ಆ ನಂತರ ರೋಹಿತ್ ಶರ್ಮಾ(273 ಪಂದ್ಯಗಳು) ಹಾಗೂ ವಿರಾಟ್ ಕೊಹ್ಲಿ(269 ಪಂದ್ಯಗಳು)ಅವರಿದ್ದಾರೆ.

ರಹಾನೆ ಐಪಿಎಲ್ ನಲ್ಲಿ 30.72ರ ಸರಾಸರಿಯಲ್ಲಿ ಆರು ವಿವಿಧ ತಂಡಗಳಾದ-ಕೆಕೆಆರ್, ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್, ರೈಸಿಂಗ್ ಪುಣೆ ಸೂಪರ್ಜಯಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ಪರವಾಗಿ ಒಟ್ಟು 5,099 ರನ್ ಗಳಿಸಿದ್ದಾರೆ.

►ಐಪಿಎಲ್ ನಲ್ಲಿ 200, ಅದಕ್ಕಿಂತ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರರು:

ಎಂ.ಎಸ್.ಧೋನಿ-278 ಪಂದ್ಯಗಳು

ರೋಹಿತ್ ಶರ್ಮಾ-273 ಪಂದ್ಯಗಳು

ವಿರಾಟ್ ಕೊಹ್ಲಿ-268 ಪಂದ್ಯಗಳು

ದಿನೇಶ್ ಕಾರ್ತಿಕ್-257 ಪಂದ್ಯಗಳು

ರವೀಂದ್ರ ಜಡೇಜ-255 ಪಂದ್ಯಗಳು

ಶಿಖರ್ ಧವನ್-222 ಪಂದ್ಯಗಳು

ಆರ್.ಅಶ್ವಿನ್-221 ಪಂದ್ಯಗಳು

ಸುರೇಶ್ ರೈನಾ-205 ಪಂದ್ಯಗಳು

ರಾಬಿನ್ ಉತ್ತಪ್ಪ-205 ಪಂದ್ಯಗಳು

ಅಂಬಟಿ ರಾಯುಡು-204 ಪಂದ್ಯಗಳು

ಅಜಿಂಕ್ಯ ರಹಾನೆ-200 ಪಂದ್ಯಗಳು

Dailyhunt
Disclaimer: This content has not been generated, created or edited by Dailyhunt. Publisher: Varthabharathi