Dailyhunt

4 ಗಗನಯಾನಿಗಳನ್ನು ಹೊತ್ತ ಸ್ಪೇಸ್‌ಎಕ್ಸ್ ಕ್ಯಾಪ್ಸೂಲ್ ಧರೆಗೆ

ವಾಶಿಂಗ್ಟನ್, ಮೇ 2: ಅಂತರ್‌ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ನಾಲ್ವರು ಗಗನಯಾತ್ರಿಗಳನ್ನು ಹೊತ್ತ ಸ್ಪೇಸ್‌ಎಕ್ಸ್ ಕಂಪೆನಿಯ ಕ್ರೂ ಡ್ರ್ಯಾಗನ್ ಕ್ಯಾಪ್ಸೂಲ್ ರವಿವಾರ ಮುಂಜಾನೆ ಅಮೆರಿಕದ ಫ್ಲೋರಿಡ ರಾಜ್ಯದ ಕರಾವಳಿಗೆ ಹೊಂದಿಕೊಂಡ ಸಮುದ್ರದಲ್ಲಿ ಜಲಸ್ಪರ್ಶ ಮಾಡಿದೆ.

ಬಾಹ್ಯಾಕಾಶ ನಿಲ್ದಾಣದಲ್ಲಿ ಸುಮಾರು 6 ತಿಂಗಳು ಕಳೆದ ಬಳಿಕ ಗಗನಯಾತ್ರಿಗಳು ಭೂಮಿಗೆ ಯಶಸ್ವಿಯಾಗಿ ಮರಳಿದ್ದಾರೆ ಎಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ತಿಳಿಸಿದೆ.

ಅಂತರ್‌ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಆರೂವರೆ ಗಂಟೆಗಳ ಪ್ರಯಾಣದ ಬಳಿಕ ಸ್ಥಳೀಯ ಸಮಯ ರವಿವಾರ ಮುಂಜಾನೆ 2:56ಕ್ಕೆ (ಭಾರತೀಯ ಕಾಲಮಾನ ರವಿವಾರ ಮಧ್ಯಾಹ್ನ 12: 26)ಕ್ಕೆ ಫ್ಲೋರಿಡ ರಾಜ್ಯದ ಪನಾಮ ಸಿಟಿ ನಗರಕ್ಕೆ ಹೊಂದಿಕೊಂಡ ಮೆಕ್ಸಿಕೊ ಕೊಲ್ಲಿಯ ನೀರಿನ ಮೇಲೆ ಇಳಿಯಿತು.

Dailyhunt
Disclaimer: This content has not been generated, created or edited by Dailyhunt. Publisher: Varthabharathi