Dailyhunt Logo
  • Light mode
    Follow system
    Dark mode
    • Play Story
    • App Story
ಅ.24: ರಾಜ್ಯಮಟ್ಟದ ಮೊಬೈಲ್ ರಿಟೇಲರ್ಸ್ ಸಮಾವೇಶ

ಅ.24: ರಾಜ್ಯಮಟ್ಟದ ಮೊಬೈಲ್ ರಿಟೇಲರ್ಸ್ ಸಮಾವೇಶ

ಉಡುಪಿ, ಅ.23: ಉಡುಪಿ ಮೊಬೈಲ್ ರಿಟೇಲರ್ಸ್ ಅಸೋಸಿಯೇಷನ್ (ಉಮ್ರಾ) ಆಶ್ರಯದಲ್ಲಿ ಆಲ್‌ಇಂಡಿಯಾ ಮೊಬೈಲ್ ರಿಟೇಲರ್ಸ್ ಅಸೋಸಿಯೇಷನ್‌ನ (ಎಮ್ರಾ) ರಾಜ್ಯಮಟ್ಟದ ರಿಟೇಲರ್ಸ್ ಸಮಾವೇಶ ಹಾಗೂ 12 ವಾರ್ಷಿಕೋತ್ಸವ ಅ.24ರ ಶ ನಿವಾರ ಅಜ್ಜರಕಾಡಿನ ಪುರಭವನದಲ್ಲಿ ನಡೆಯಲಿದೆ.

ಉಮ್ರಾದ ಅಧ್ಯಕ್ಷ ವಿವೇಕ್ ಜಿ.ಸುವರ್ಣ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಗ್ರಾಹಕರಿಗೆ ಸೇವೆ, ವ್ಯಾಪಾರಿಗಳಿಗೆ ರಕ್ಷೆ, ವ್ಯವಹಾರಕ್ಕೆ ಪ್ರಾಮಾಣಿಕತೆ ಎಂಬ ಧ್ಯೇಯ ವಾಕ್ಯದೊಂದಿಗೆ ಅಸೋಸಿಯೇಷನ್ ಕಾರ್ಯ ನಿರ್ವಹಿಸುತಿದ್ದು, ಮೊಬೈಲ್ ರಿಟೇಲರ್‌ಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಸೂಕ್ತ ವೇದಿಕೆ ಕಲ್ಪಿಸಿ ಅವರ ಧ್ವನಿಯಾಗಿ ಕೆಲಸ ಮಾಡುತ್ತಿದೆ ಎಂದರು.

ನಾಳೆ ಬೆಳಗ್ಗೆ 10ಕ್ಕೆ ಮೆಗಾ ಮೊಬೈಲ್ ಎಕ್ಸ್‌ಪೋವನ್ನು ಕಾಣಿಯೂರು ಮಠದ ಶ್ರೀವಿಶ್ವವಲ್ಲಭ ತೀರ್ಥ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ. 11:00ಗಂಟೆಗೆ ಮಾಜಿ ಪೊಲೀಸ್ ಅದಿಕಾರಿ ಕೆ.ಅಣ್ಣಾಮಲೈ ಅವರೊಂದಿಗೆ 'ನಾಳಿನ ಉದ್ಯಮಿಗಳ ನಿರ್ಮಾಣ, ಇಂದಿನ ಸ್ಥಳೀಯ ವ್ಯಾಪಾರಗಳ ಸಂರಕ್ಷಣೆ' ಎಂಬ ವಿಷಯದ ಕುರಿತು ವಿಶೇಷ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಸಂಜೆ ಉಮ್ರಾದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ. ಇದನ್ನು ಉದ್ಯಮಿ ಜಿ.ಶಂಕರ್ ಉದ್ಘಾಟಿಸಲಿದ್ದು, ಸಚಿವ ಯು.ಟಿ.ಖಾದರ್ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸುಹಾಸ ಕಿಣಿ, ಸಂದೇಶ ಬಲ್ಲಾಳ್, ಇಮ್ರಾನ್ ಹಾಗೂ ಸುದರ್ಶನ್ ಉಪಸ್ಥಿತರಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Varthabharathi