Dailyhunt
ಅಬುಧಾಬಿಯ ಮೇಲೆ ಕ್ಷಿಪಣಿ ದಾಳಿ | ಐವರು ಭಾರತೀಯರು ಸೇರಿ 12 ಮಂದಿಗೆ ಗಾಯ

ಅಬುಧಾಬಿಯ ಮೇಲೆ ಕ್ಷಿಪಣಿ ದಾಳಿ | ಐವರು ಭಾರತೀಯರು ಸೇರಿ 12 ಮಂದಿಗೆ ಗಾಯ

ಬುಧಾಬಿ, ಎ.3: ಶುಕ್ರವಾರ ಅಬುಧಾಬಿಯ ಮೇಲೆ ಇರಾನ್ ಪ್ರಯೋಗಿಸಿದ ಕ್ಷಿಪಣಿಯನ್ನು ವಾಯು ರಕ್ಷಣಾ ವ್ಯವಸ್ಥೆ ನಿರ್ಬಂಧಿಸಿದ ಬಳಿಕ, ಅದರ ಅವಶೇಷಗಳು ಅಜ್ಬಾನ್ ಪ್ರದೇಶದಲ್ಲಿ ಬಿದ್ದು ಐವರು ಭಾರತೀಯರು ಮತ್ತು 7 ನೇಪಾಳಿ ಪ್ರಜೆಗಳು ಗಾಯಗೊಂಡಿರುವುದಾಗಿ ವರದಿಯಾಗಿದೆ.

ಇದಕ್ಕೂ ಮುನ್ನ ಮತ್ತೊಂದು ಕ್ಷಿಪಣಿಯ ಅವಶೇಷದಿಂದ ಹಬ್ಷಾನ್ ಗ್ಯಾಸ್ ಸೌಲಭ್ಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದರ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ ಎಂದು ಅಬುಧಾಬಿಯ ಅಧಿಕಾರಿಗಳು ತಿಳಿಸಿದ್ದಾರೆ.

ಯುದ್ಧಕ್ಕೆ ಸಂಬಂಧಿಸಿದ ಪ್ರಮುಖ ಬೆಳವಣಿಗೆಗಳು:

• ಇರಾನ್‌ ನಿಂದ ಪ್ರಯೋಗಿಸಲಾದ 18 ಬ್ಯಾಲಿಸ್ಟಿಕ್ ಕ್ಷಿಪಣಿಗಳು, 4 ಕ್ರೂಸ್ ಕ್ಷಿಪಣಿಗಳು ಮತ್ತು 47 ಡ್ರೋನ್‌ಗಳನ್ನು ನಿರ್ಬಂಧಿಸಿರುವುದಾಗಿ ಯುಎಇ ತಿಳಿಸಿದೆ.

• ಇರಾನ್‌ ನ ಗಲ್ಫ್ ಬಂದರು ಚರಾಕ್ ಮೇಲೆ ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಒಬ್ಬ ಸಾವನ್ನಪ್ಪಿದ್ದು, ಪ್ರಯಾಣಿಕರ ಟರ್ಮಿನಲ್‌ಗೆ ಹಾನಿಯಾಗಿದೆ.

• ಉತ್ತರ ಇರಾನ್‌ ನ ಶಾಹಿದ್ ಬೆಹೆಶ್ತಿ ವಿಶ್ವವಿದ್ಯಾಲಯ ಮತ್ತು ಮೆಹರಾಬಾದ್ ವಿಮಾನ ನಿಲ್ದಾಣ ಪ್ರದೇಶಗಳ ಮೇಲೆ ಅಮೆರಿಕ ದಾಳಿ ನಡೆಸಿದೆ.

• ದಕ್ಷಿಣ ಇರಾನ್‌ನಲ್ಲಿ ನೆರವು ವಿತರಣೆಗಾಗಿ ಬಳಸುತ್ತಿದ್ದ ಕಂಟೈನರ್‌ಗಳು ಮತ್ತು ತುರ್ತು ಸೇವಾ ವಾಹನಗಳಿದ್ದ ಗೋದಾಮಿನ ಮೇಲೆ ಡ್ರೋನ್ ದಾಳಿ ನಡೆದಿದ್ದು, 2 ಕಂಟೈನರ್‌ಗಳು, 2 ಬಸ್ಸುಗಳು ಹಾಗೂ ಹಲವು ಆಂಬ್ಯುಲೆನ್ಸ್‌ಗಳಿಗೆ ಹಾನಿಯಾಗಿದೆ ಎಂದು ರೆಡ್‌ಕ್ರಾಸ್ ತಿಳಿಸಿದೆ.

• ಮಧ್ಯಪ್ರಾಚ್ಯದಾದ್ಯಂತ ಅಮೆರಿಕಕ್ಕೆ ಸಂಬಂಧಿಸಿದ ಸ್ವತ್ತುಗಳು, ಇಂಧನ ಹಾಗೂ ನಾಗರಿಕ ಮೂಲಸೌಕರ್ಯಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ.

• ಗುರುವಾರ ತಡರಾತ್ರಿ ಇಸ್ರೇಲ್‌ನ ಟೆಲ್ ಅವೀವ್ ಮೇಲೆ ಇರಾನ್ ಕ್ಷಿಪಣಿಗಳ ದಾಳಿ ನಡೆದಿದ್ದು, 4 ಮಂದಿ ಗಾಯಗೊಂಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi