Dailyhunt Logo
  • Light mode
    Follow system
    Dark mode
    • Play Story
    • App Story
ಅಡಿಕೆ ಎಲೆ ಚುಕ್ಕೆ ರೋಗ ನಿಯಂತ್ರಣ ಔಷಧಿ ಖರೀದಿಗೆ ಸಹಾಯಧನ

ಅಡಿಕೆ ಎಲೆ ಚುಕ್ಕೆ ರೋಗ ನಿಯಂತ್ರಣ ಔಷಧಿ ಖರೀದಿಗೆ ಸಹಾಯಧನ

ಡುಪಿ, ಸೆ.7: ಪ್ರಸಕ್ತ ಸಾಲಿನಲ್ಲಿ ಉಡುಪಿ, ಕಾಪು ಹಾಗೂ ಬ್ರಹ್ಮಾವರ ತಾಲೂಕುಗಳಿಗೆ ಸಂಬಂಧಿಸಿದಂತೆ ಅಡಿಕೆ ಬೆಳೆಯಲ್ಲಿ ಕಂಡು ಬರುತ್ತಿರುವ ಎಲೆ ಚುಕ್ಕೆ ರೋಗದ ನಿಯಂತ್ರಣಕ್ಕಾಗಿ ತೋಟಗಾರಿಕೆ ಇಲಾಖೆ ವತಿಯಿಂದ ಸಸ್ಯ ಸಂರಕ್ಷಣಾ ಕ್ರಮ ಕೈಗೊಳ್ಳುವ ಸಲುವಾಗಿ ಮೈಲು ತುತ್ತು ಮತ್ತು ಎಲೆಚುಕ್ಕೆ ರೋಗಕ್ಕೆ ಶಿಫಾರಸ್ಸು ಮಾಡಿರುವ ಸಸ್ಯಸಂರಕ್ಷಣಾ ಔಷಧಿ ಖರೀದಿಗೆ ಸಹಾಯಧನವನ್ನು ಘೋಷಿಸಲಾಗಿದೆ.

ಪ್ರತಿ ಹೆಕ್ಟೇರ್‌ಗೆ 3000ರೂ. ಸಹಾಯಧನ (ಕೇಂದ್ರದ ಪಾಲು ರೂ. 1500 ಹಾಗೂ ರಾಜ್ಯದ ಪಾಲು ರೂ. 1500), ಗರಿಷ್ಠ 2 ಹೆಕ್ಟೇರ್‌ಗೆ 6000ರೂ.ಗಳ ಸಹಾಯಧನ ಸವಲತ್ತು ವಿತರಿಸಲು ಅವಕಾಶವಿದೆ. ಆಸಕ್ತ ರೈತರು ತಾವು ಖರೀದಿಸಿರುವ ಅಧಿಕೃತ ಬಿಲ್ಲಿನೊಂದಿಗೆ ಆರ್‌ಟಿಸಿ, ಆಧಾರ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಬುಕ್ ನಕಲು ಪ್ರತಿಗಳೊಂದಿಗೆ ಉಡುಪಿ ತಾಲೂಕಿನ ತೊಟಗಾರಿಕೆ ಇಲಾಖೆಯನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು.

ಇಲಾಖಾ ಮಾರ್ಗಸೂಚಿಯ ಅನುಸಾರ ಅರ್ಜಿಗಳನ್ನು ಜೇಷ್ಠತೆಯ ಆಧಾರದಲ್ಲಿ ಇಲಾಖೆ ನಿಗದಿಪಡಿಸಿದ ಗುರಿಗೆ ಅನುಗುಣವಾಗಿ ಸಹಾಯಧನಕ್ಕೆ ಪರಿಗಣಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆ, ದೊಡ್ಡಣ ಗುಡ್ಡೆ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi