Dailyhunt Logo
  • Light mode
    Follow system
    Dark mode
    • Play Story
    • App Story
ಅಲ್ಪ ಏರಿಕೆ ಕಂಡ ಚಿನ್ನದ ಬೆಲೆ; ಇಂದಿನ ದರವೆಷ್ಟು?

ಅಲ್ಪ ಏರಿಕೆ ಕಂಡ ಚಿನ್ನದ ಬೆಲೆ; ಇಂದಿನ ದರವೆಷ್ಟು?

ಮೆರಿಕದ ಕೇಂದ್ರೀಯ ಬ್ಯಾಂಕ್ ಫೆಡರಲ್ ರಿಸರ್ವ್ ಬಡ್ಡಿದರ ಬದಲಾಯಿಸದೆ ಇರುವ ನೀತಿ ಪ್ರಕಟಿಸಿದ ಕಾರಣ ಚಿನ್ನ ಸ್ವಲ್ಪ ಲಾಭದಲ್ಲಿ ವಹಿವಾಟು ನಡೆಸುತ್ತಿದೆ

ಜೂನ್ 23ರ ನಂತರ ಬಹುತೇಕ ಆಭರಣ ಚಿನ್ನದ ಬೆಲೆ ಪ್ರತಿ ಗ್ರಾಂಗೆ 13,000- 13500 ರೂ. ನಡುವೆ ಸ್ಥಿರವಾಗಿದೆ.

ಇದೇ ಬೆಲೆಯ ನಡುವೆ ಏರಿಳಿತ ಕಾಣುತ್ತಿದೆ. ಒಂದೆರಡು ದಿನ ಏರುವ ಚಿನ್ನ ನಂತರ ಕುಸಿಯುತ್ತಿರುವುದು ಗ್ರಾಹಕರಲ್ಲಿ ನಿರಾಳತೆ ಮೂಡಿಸಿದೆ.

ಅಮೆರಿಕನ್ ಡಾಲರ್ ದೃಢವಾಗಿದ್ದರೂ, ಚಿಲ್ಲರೆ ಖರೀದಿಗಳ ಬೆಂಬಲದಿಂದ ದೇಶೀಯ ಮಟ್ಟದಲ್ಲಿ ಚಿನ್ನದ ಬೆಲೆಗಳು ಗರಿಷ್ಠ ಮಟ್ಟದಲ್ಲಿವೆ. ಭೌಗೋಳಿಕ- ರಾಜಕೀಯ ಉದ್ವಿಗ್ನತೆಗಳ ಕಾರಣದಿಂದ ಫೆಬ್ರವರಿಯಿಂದ ಚಿನ್ನದ ಬೆಲೆ ಇಳಿಕೆಯಾಗುತ್ತಲೇ ಬಂದಿದೆ. ಆದರೆ, ಅಮೆರಿಕದ ಕೇಂದ್ರೀಯ ಬ್ಯಾಂಕ್ ಫೆಡರಲ್ ರಿಸರ್ವ್ ಬಡ್ಡಿದರ ಬದಲಾಯಿಸದೆ ಇರುವ ನೀತಿ ಪ್ರಕಟಿಸಿದ ಕಾರಣ ಚಿನ್ನ ಸ್ವಲ್ಪ ಲಾಭದಲ್ಲಿ ವಹಿವಾಟು ನಡೆಸುತ್ತಿದೆ.

ಚಿನ್ನದ ದರದಲ್ಲಿ ಏರಿಕೆ

ಜುಲೈ 31 ರಂದು ಶುಕ್ರವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಗುರುವಾರದ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ 27 ರೂ. ಏರಿಕೆಯಾಗಿ ಹತ್ತು ಗ್ರಾಂ ಬೆಲೆ 1,44,600 ರೂ. ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಪ್ರತಿ ಗ್ರಾಂಗೆ 25 ರೂ. ಹೆಚ್ಚಾಗಿದ್ದು, ಹತ್ತು ಗ್ರಾಂಗೆ 1,32,550 ರೂ. ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 20 ರೂ. ಏರಿದ್ದು, ಹತ್ತು ಗ್ರಾಂಗೆ 1,08,450 ರೂ. ಗೆ ತಲುಪಿದೆ.

ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ?

ಜುಲೈ 31 ರಂದು ಶುಕ್ರವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಸ್ವಲ್ಪ ಮಟ್ಟಿಗೆ ಏರಿಕೆ ದಾಖಲಿಸಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 14,460 (+27) ರೂ. ರಷ್ಟಕ್ಕೆ ತಲುಪಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 13,255 (+25) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 10,845 (+20) ರೂ. ಬೆಲೆಗೆ ಬಂದು ನಿಂತಿದೆ.

ಸ್ಥಿರವಾದ ಬೆಳ್ಳಿಯ ದರ

ಮಂಗಳೂರಿನಲ್ಲಿ ಬೆಳ್ಳಿಯ ಬೆಲೆ ಮೇ 13ರಂದು ಪ್ರತಿ ಕೆಜಿಗೆ 3,30,000ಕ್ಕೆ ಏರಿದ ನಂತರ, ಬಹುತೇಕ ಮೇ ತಿಂಗಳಿಡೀ ಪ್ರತಿ ಕೆಜಿಗೆ 2,80,000 ರೂ.ಗೆ ಬಂದು ಸ್ಥಿರವಾಗಿತ್ತು. ಆದರೆ ಜೂನ್ನಲ್ಲಿ ಸ್ವಲ್ಪ ಏರಿಳಿತ ಕಂಡುಬಂದು ಪ್ರತಿ ಕೆಜಿಗೆ 2,40,000 ರೂ.ಗೆ ಬಂದು ನಿಂತಿತ್ತು. ಜುಲೈ ಆರಂಭದಲ್ಲಿ ಪ್ರತಿ ಕೆಜಿಗೆ 2,50,000 ರೂ.ವರೆಗೂ ಬೆಲೆ ಏರಿದೆ.

ಜುಲೈ 11ರಿಂದ ಬೆಳ್ಳಿಯ ದರ ಬಹುತೇಕ ಪ್ರತಿ ಕೆಜಿಗೆ 2,35,000 ರೂ.ಗೆ ಸ್ಥಿರವಾಗಿತ್ತು. ನಡುವೆ ಒಂದೆರಡು ಬಾರಿ ಪ್ರತಿ ಗ್ರಾಂಗೆ 5 ರೂ. ಏರಿದ ಬೆಳ್ಳಿಯ ದರ ಪ್ರತಿ ಕೆಜಿಗೆ 2,40,000 ರೂ.ಗೆ ತಲುಪಿದ್ದು ಹೊರತುಪಡಿಸಿದರೆ, ಇದೀಗ ಬುಧವಾರ, ಗುರುವಾರ ಮತ್ತು ಶುಕ್ರವಾರವೂ ಪ್ರತಿ ಕೆಜಿಗೆ 2,35,000 ರೂ.ಗೆ ಸ್ಥಿರವಾಗಿ ನಿಂತಿದೆ.

ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ?

ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 14,475 (+27) ರೂ., 22 ಕ್ಯಾರೆಟ್ ಚಿನ್ನದ ದರ 13,270 (+25) ರೂ.

ಮುಂಬೈ: 24 ಕ್ಯಾರೆಟ್ ಚಿನ್ನದ ದರ 14,460 (+27) ರೂ., 22 ಕ್ಯಾರೆಟ್ ಚಿನ್ನದ ದರ 13,255 (+25) ರೂ.

ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 14,465 (+27) ರೂ., 22 ಕ್ಯಾರೆಟ್ ಚಿನ್ನದ ದರ 13,260 (+25) ರೂ.

ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 14,460 (+27) ರೂ., 22 ಕ್ಯಾರೆಟ್ ಚಿನ್ನದ ದರ 13,255 (+25) ರೂ.

ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 14,460 (+27) ರೂ., 22 ಕ್ಯಾರೆಟ್ ಚಿನ್ನದ ದರ 13,255 (+25) ರೂ.

ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 14,460 (+27) ರೂ., 22 ಕ್ಯಾರೆಟ್ ಚಿನ್ನದ ದರ 13,255 (+25) ರೂ.

ಜೈಪುರ: 24 ಕ್ಯಾರೆಟ್ ಚಿನ್ನದ ದರ 14,475 (+27) ರೂ., 22 ಕ್ಯಾರೆಟ್ ಚಿನ್ನದ ದರ 13,270 (+25) ರೂ.

ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 14,475 (+27) ರೂ., 22 ಕ್ಯಾರೆಟ್ ಚಿನ್ನದ ದರ 13,270 (+25) ರೂ.

ಲಕ್ನೋ: 24 ಕ್ಯಾರೆಟ್ ಚಿನ್ನದ ದರ 14,475 (+27) ರೂ., 22 ಕ್ಯಾರೆಟ್ ಚಿನ್ನದ ದರ 13,270 (+25) ರೂ.

ಕೊಚ್ಚಿ: 24 ಕ್ಯಾರೆಟ್ ಚಿನ್ನದ ದರ 14,460 (+27) ರೂ., 22 ಕ್ಯಾರೆಟ್ ಚಿನ್ನದ ದರ 13,255 (+25) ರೂ.

Dailyhunt
Disclaimer: This content has not been generated, created or edited by Dailyhunt. Publisher: Varthabharathi