ಟೆಹ್ರಾನ್, ಎ.3: ಪಶ್ಚಿಮ ಇರಾನ್‌ನಲ್ಲಿ ಶುಕ್ರವಾರ ಇಸ್ಲಾಮಿಕ್ ರೆವೊಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ವಾಯುಪಡೆಯು ಅಮೆರಿಕದ ಎಫ್-35 ಯುದ್ಧವಿಮಾನವನ್ನು ಹೊಡೆದುರುಳಿಸಿದ್ದು, ಅದರ ಪೈಲಟ್ ಐಆರ್‌ಜಿಸಿಯ ವಶದಲ್ಲಿರುವ ಸಾಧ್ಯತೆಯಿದೆ ಎಂದು ಇರಾನ್ ನ ತಸ್ನಿಮ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಇರಾನ್ ಸರ್ಕಾರದ ಮೂಲಗಳು ಸಹ ಪೈಲಟ್ ಸೆರೆಹಿಡಿಯಲ್ಪಟ್ಟಿದ್ದಾನೆ ಎಂದು ಖಚಿತಪಡಿಸಿವೆ. ಈ ಮಧ್ಯೆ, ಅಮೆರಿಕದ ಪೈಲಟ್ ನ್ನು ಜೀವಂತವಾಗಿ ಸೆರೆಹಿಡಿದವರಿಗೆ ಅಮೂಲ್ಯ ಬಹುಮಾನ ನೀಡುವುದಾಗಿ ಇರಾನ್‌ನ ಸ್ಥಳೀಯ ಟಿವಿ ವಾಹಿನಿ ಘೋಷಿಸಿದೆ.

