Dailyhunt
ಅರುಣ್ ಉಪಧ್ಯಾಯಗೆ ಪಿ.ಎಚ್.ಡಿ ಪದವಿ

ಅರುಣ್ ಉಪಧ್ಯಾಯಗೆ ಪಿ.ಎಚ್.ಡಿ ಪದವಿ

ಡುಪಿ, ಎ.8: ಬಂಟಕಲ್ಲಿನ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಸಹ ಪ್ರಾಧ್ಯಾಪಕ ಹಾಗೂ ವಿಭಾಗದ ಮುಖ್ಯಸ್ಥ ಅರುಣ್ ಉಪಾಧ್ಯಾಯ ಮಂಗಳೂರು ಎಜೆ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಯಂಡ್ ಟೆಕ್ನಾಲಜಿಯ ಪ್ರಾಂಶುಪಾಲ ಡಾ.ಶಾಂತರಾಮ ರೈ ಸಿ.

ಮಾರ್ಗದರ್ಶನದಲ್ಲಿ ಮಂಡಿಸಿದ 'ಸೆಕ್ಯೂರಿಟಿ ಎನ್‌ಹೆನ್ಸ್ಡ್ ಹೈಬ್ರೀಡ್ ಡಿಜಿಟಲ್ ಇಮೇಜ್ ಎನ್‌ಕ್ರೀಪ್ಶನ್ ಟೆಕ್ನಿಕ್ಸ್' ಎಂಬ ಸಂಶೋಧನಾ ಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi