Dailyhunt Logo
  • Light mode
    Follow system
    Dark mode
    • Play Story
    • App Story
ಬಹರೈನ್ ನಲ್ಲಿ ರಕ್ತದಾನ ಶಿಬಿರ: 120 ಯುನಿಟ್ ರಕ್ತ ಸಂಗ್ರಹ

ಬಹರೈನ್ ನಲ್ಲಿ ರಕ್ತದಾನ ಶಿಬಿರ: 120 ಯುನಿಟ್ ರಕ್ತ ಸಂಗ್ರಹ

ಬಹರೈನ್: ಇಂಡಿಯನ್ ಸೋಶಿಯಲ್ ಫೋರಂ ಬಹರೈನ್, ಝಮಾನ್ ಬಾಯ್ಸ್ ಕಲ್ಲಡ್ಕ, ಬ್ಲಡ್ ಡೋನರ್ಸ್ ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಸಲ್ಮಾನಿಯಾ ರಕ್ತನಿಧಿ ಕೇಂದ್ರ ಮನಮಾ/ ಬಹ್ರೈನ್ ಇವರ ಸಹಯೋಗದೊಂದಿಗೆ ಬಕ್ರೀದ್ ದಿನ ಸಲ್ಮಾನಿಯಾ ರಕ್ತ ನಿಧಿ ಕೇಂದ್ರದಲ್ಲಿ ರಕ್ತದಾನ ಶಿಬಿರ ನಡೆಯಿತು.

ರಕ್ತದಾನ ಶಿಬಿರದಲ್ಲಿ ಒಟ್ಟು 120 ಮಂದಿ ರಕ್ತದಾನ ಮಾಡಿದರು. ಇಂಡಿಯನ್ ಸೋಶಿಯಲ್ ಫೋರಂ ಬಹರೈನ್, ಝಮಾನ್ ಬಾಯ್ಸ್ ಕಲ್ಲಡ್ಕ, ಬ್ಲಡ್ ಡೋನರ್ಸ್ ಮಂಗಳೂರು ಇದರ ಕಾರ್ಯನಿರ್ವಾಹಕರು ಮತ್ತು ಸದಸ್ಯರು ಸಹಕರಿಸಿದರು.

ಕೋವಿಡ್ 19 ಸಂದಿಗ್ಧ ಸಮಯದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಲವು ರೋಗಿಗಳಿಗೆ ರಕ್ತದ ಅವಶ್ಯಕತೆಯಿದ್ದು, ಈ ಶಿಬಿರದ ಮೂಲಕ ರಕ್ತ ಪೂರೈಸುವುದು ಮೂಲ ಉದ್ದೇಶವಾಗಿತ್ತು ಪ್ರಕಟನೆ ತಿಳಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi