Dailyhunt

​ಬೈಕಂಪಾಡಿ ಎಪಿಎಂಸಿ ವರ್ತಕರಿಗೆ ಪಾಸ್ ವ್ಯವಸ್ಥೆ

ಮಂಗಳೂರು, ಮೇ 5: ಬೈಕಂಪಾಡಿಯಲ್ಲಿರುವ ಮಂಗಳೂರು ಎಪಿಎಂಸಿ ಪ್ರಾಂಗಣದಲ್ಲಿ ವ್ಯಾಪಾರ ಮಾಡುವ ವರ್ತಕರಿಗೆ ಪಾಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಎಪಿಎಂಸಿ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಬೈಕಂಪಾಡಿ ಮುಖ್ಯಮಾರುಕಟ್ಟೆ ಪ್ರಾಂಗಣ ಸಹಿತ ಲೈಸನ್ಸ್ ಪಡೆದು ವ್ಯಾಪಾರ ವಹಿವಾಟು ನಡೆಸುತ್ತಿರುವವರು ಕೋವಿಡ್-19ನ ಲಾಕ್‌ಡೌನ್ ಅವಧಿಯಲ್ಲಿ ಘೋಷಿತ ಕೃಷಿ ಹುಟ್ಟುವಳಿಗಳ ವ್ಯಾಪಾರ ವಹಿವಾಟು ನಡೆಸುವ ವ್ಯಾಪಾರ ಕೇಂದ್ರಗಳಿಗೆ ನಿಗದಿತ ಸಮಯದಲ್ಲಿ ಓಡಾಡಲು ಪಾಸ್ ವ್ಯವಸ್ಥೆಯನ್ನು ಇಲಾಖೆಯ ನಿರ್ದೇಶನದ ಅನ್ವಯ ಒದಗಿಸಲಾಗುವುದು. ಹಾಗಾಗಿ ಲೈಸನ್ಸ್ ಹೊಂದಿದ ವರ್ತಕರು ಮತ್ತು ಸಂಸ್ಥೆಯ ಇಬ್ಬರು ಸಹಾಯಕರಿಗೂ ಉಚಿತ ಪಾಸ್ ಪಡೆಯುವ ವ್ಯವಸ್ಥೆಯನ್ನು ಎಪಿಎಂಸಿ ಕಚೇರಿಯಲ್ಲಿ ಮಾಡಲಾಗಿದೆ. ಲೈಸನ್ಸ್ ಹೊಂದಿದ ವರ್ತಕರು ಆಧಾರ್ ಕಾರ್ಡ್, ಭಾವಚಿತ್ರ ಹಾಗೂ ಲೈಸನ್ಸ್ ಪ್ರತಿಯೊಂದಿಗೆ ಎಪಿಎಂಸಿ ಕಚೇರಿಯನ್ನು ಕೆಲಸದ ಅವಧಿಯಲ್ಲಿ ಸಂಪರ್ಕಿಸಿ ಪಾಸನ್ನು ಉಚಿತವಾಗಿ ಪಡೆದುಕೊಳ್ಳಲು ಮನವಿ ಮಾಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi