Dailyhunt
Basavakalyan| ಬೈಕ್- ಟಿಪ್ಪರ್ ನಡುವೆ ಢಿಕ್ಕಿ: ಸ್ಥಳದಲ್ಲೇ ದಂಪತಿ ಮೃತ್ಯು

Basavakalyan| ಬೈಕ್- ಟಿಪ್ಪರ್ ನಡುವೆ ಢಿಕ್ಕಿ: ಸ್ಥಳದಲ್ಲೇ ದಂಪತಿ ಮೃತ್ಯು

ಸವಕಲ್ಯಾಣ: ನಗರದಲ್ಲಿ ದ್ವಿಚಕ್ರ ವಾಹನ ಮತ್ತು ಟಿಪ್ಪರ್ ನಡುವೆ ಢಿಕ್ಕಿ ಸಂಭವಿಸಿ ಸ್ಥಳದಲ್ಲಿಯೇ ದಂಪತಿ ಸಾವನ್ನಪ್ಪಿದ್ದ ಘಟನೆ ಬುಧವಾರ ನಗರದ ಜಿಜಾಮಾತಾ ಶಾಲೆ ಬಳಿ ನಡೆದಿದೆ.

ದಸ್ತಗಿರ (35) ಹಾಗು ಯಾಸ್ಮಿನ್ (33) ಮೃತಪಟ್ಟ ದಂಪತಿ ಎಂದು ಗುರುತಿಸಲಾಗಿದೆ.

ಬಸವಕಲ್ಯಾಣದ ತ್ರಿಪುರಾಂತ್ ನಿಂದ ಖಡಿ ಝಂಡಾ ಬಳಿ ದ್ವಿಚಕ್ರ ವಾಹನದ ಮೆಲೆ ತೆರಳುತ್ತಿದ್ದ ದಂಪತಿಗೆ ಹಿಂದಿನಿಂದ ಟಿಪ್ಪರ್ ಲಾರಿ ಢಿಕ್ಕಿ ಹೊಡೆದ ಪರಿಣಾಮ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಬಸವಕಲ್ಯಾಣ ನಗರ ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi