ಈ ನೇಮಕಾತಿಯ ಮೂಲಕ ಒಟ್ಟು 83 ಇಂಜಿನಿಯರ್ ಗಳನ್ನು ಸಹಾಯಕ ವ್ಯವಸ್ಥಾಪಕ, ವ್ಯವಸ್ಥಾಪಕ, ಹಿರಿಯ ವ್ಯವಸ್ಥಾಪಕ ಹಾಗೂ ಜನರಲ್ ಮ್ಯಾನೇಜರ್ ಸೇರಿದಂತೆ ವಿವಿಧ ಕಾರ್ಯನಿರ್ವಾಹಕ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ.
ಇಂಜಿನಿಯರಿಂಗ್ ಪದವೀಧರರು ಹಾಗೂ ಅನುಭವ ಹೊಂದಿರುವ ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶವಿದೆ.
ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BEML) ಸಂಸ್ಥೆಯು 2026ನೇ ಸಾಲಿನ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿಯ ಮೂಲಕ ಒಟ್ಟು 83 ಇಂಜಿನಿಯರ್ ಗಳನ್ನು ಸಹಾಯಕ ವ್ಯವಸ್ಥಾಪಕ, ವ್ಯವಸ್ಥಾಪಕ, ಹಿರಿಯ ವ್ಯವಸ್ಥಾಪಕ ಹಾಗೂ ಜನರಲ್ ಮ್ಯಾನೇಜರ್ ಸೇರಿದಂತೆ ವಿವಿಧ ಕಾರ್ಯನಿರ್ವಾಹಕ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ.
ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಲಿಂಕ್ ಬಳಸಿ ಅರ್ಜಿ ಸಲ್ಲಿಸಬಹುದು: https://beml.registrationform.in/
► ಪ್ರಮುಖ ದಿನಾಂಕಗಳು
• ಅಧಿಸೂಚನೆ ಪ್ರಕಟವಾದ ದಿನಾಂಕ: 16 ಅಕ್ಟೋಬರ್ 2026
• ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03 ಡಿಸೆಂಬರ್ 2026
►ಪ್ರಮುಖ ಮಾಹಿತಿ
• ಸಂಸ್ಥೆಯ ಹೆಸರು: ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್
• ಒಟ್ಟು ಹುದ್ದೆಗಳು: 83
• ಹುದ್ದೆಗಳ ಹೆಸರು: ಇಂಜಿನಿಯರ್, ಮ್ಯಾನೇಜರ್ ಹಾಗೂ ಇತರ ಹುದ್ದೆಗಳು
• ಉದ್ಯೋಗ ಸ್ಥಳ: ಬೆಂಗಳೂರು, ಕರ್ನಾಟಕ
• ವೇತನ: 40,000 ರಿಂದ 2,60,000 ರೂ.
►ಹುದ್ದೆಗಳ ವಿವರ
• ಇಂಜಿನಿಯರ್ (ದರ್ಜೆ-II): 56 ಹುದ್ದೆಗಳು
• ಸಹಾಯಕ ವ್ಯವಸ್ಥಾಪಕರು (ದರ್ಜೆ-III): 10 ಹುದ್ದೆಗಳು
• ವ್ಯವಸ್ಥಾಪಕರು (ದರ್ಜೆ-IV): 7 ಹುದ್ದೆಗಳು
• ಹಿರಿಯ ವ್ಯವಸ್ಥಾಪಕರು (ದರ್ಜೆ-V): 1 ಹುದ್ದೆ
• ಸಹಾಯಕ ಪ್ರಧಾನ ವ್ಯವಸ್ಥಾಪಕರು (ದರ್ಜೆ-VI): 5 ಹುದ್ದೆಗಳು
• ಉಪ ಪ್ರಧಾನ ವ್ಯವಸ್ಥಾಪಕರು (ದರ್ಜೆ-VII): 3 ಹುದ್ದೆಗಳು
• ಪ್ರಧಾನ ವ್ಯವಸ್ಥಾಪಕರು (ದರ್ಜೆ-VIII): 1 ಹುದ್ದೆ
►ವಯೋಮಿತಿ
ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ವಿವಿಧ ಹುದ್ದೆಗಳಿಗೆ ಗರಿಷ್ಠ ವಯೋಮಿತಿ ಬೇರೆಬೇರೆಯಾಗಿದೆ. SC/ST ಅಭ್ಯರ್ಥಿಗಳಿಗೆ 5 ವರ್ಷ ಹಾಗೂ OBC (NCL) ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ಇದೆ. PwBD ಅಭ್ಯರ್ಥಿಗಳಿಗೆ ಹೆಚ್ಚುವರಿ ಸಡಿಲಿಕೆ ಅನ್ವಯಿಸುತ್ತದೆ.
• ಇಂಜಿನಿಯರ್ (ದರ್ಜೆ-II): 29 ವರ್ಷ
• ಸಹಾಯಕ ವ್ಯವಸ್ಥಾಪಕರು (ದರ್ಜೆ-III): 30 ವರ್ಷ
• ಸಹಾಯಕ ವ್ಯವಸ್ಥಾಪಕರು (ವೈದ್ಯಕೀಯ): 38 ವರ್ಷ
• ವ್ಯವಸ್ಥಾಪಕರು (ದರ್ಜೆ-IV): 34 ವರ್ಷ
• ಹಿರಿಯ ವ್ಯವಸ್ಥಾಪಕರು (ದರ್ಜೆ-V): 39 ವರ್ಷ
• ಸಹಾಯಕ ಪ್ರಧಾನ ವ್ಯವಸ್ಥಾಪಕರು (ದರ್ಜೆ-VI): 42 ವರ್ಷ
• ಉಪ ಪ್ರಧಾನ ವ್ಯವಸ್ಥಾಪಕರು (ದರ್ಜೆ-VII): 45 ವರ್ಷ
• ಪ್ರಧಾನ ವ್ಯವಸ್ಥಾಪಕರು (ದರ್ಜೆ-VIII): 48 ವರ್ಷ
► ಹೆಚ್ಚು ಹುದ್ದೆಗಳಿರುವ ವಿಭಾಗಗಳು
• ಇಂಜಿನಿಯರ್ (ಕ್ವಾಲಿಟಿ ಮೆಕ್ಯಾನಿಕಲ್): 19 ಹುದ್ದೆಗಳು
• ಇಂಜಿನಿಯರ್ ಮೆಕ್ಯಾನಿಕಲ್ ಸಸ್ಟೆನೆನ್ಸ್ (ರಕ್ಷಣೆ ಮತ್ತು ವಾಯುಯಾನ): 11 ಹುದ್ದೆಗಳು
• ಇಂಜಿನಿಯರ್ (ಕ್ವಾಲಿಟಿ ಎಲೆಕ್ಟ್ರಿಕಲ್): 10 ಹುದ್ದೆಗಳು
►ಅರ್ಹತೆ
ಬಹುತೇಕ ಹುದ್ದೆಗಳಿಗೆ ಈ ಕೆಳಗಿನ ವಿಭಾಗಗಳಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿರಬೇಕು:
• ಮೆಕ್ಯಾನಿಕಲ್ ಇಂಜಿನಿಯರಿಂಗ್
• ಎಲೆಕ್ಟ್ರಿಕಲ್ / EEE
• ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್
• ಆಟೋಮೊಬೈಲ್
• ಮೆಟಲರ್ಜಿ
• ಕಂಪ್ಯೂಟರ್ ಸೈನ್ಸ್
ಸಂಬಂಧಿತ ಕ್ಷೇತ್ರದಲ್ಲಿ 2ರಿಂದ 19 ವರ್ಷಗಳವರೆಗೆ ಕೆಲಸದ ಅನುಭವ ಅಗತ್ಯವಿದೆ.
► ಅರ್ಜಿ ಶುಲ್ಕ
• GEN / OBC / EWS: 500 ರೂ.
• SC / ST / PwBD ಅಭ್ಯರ್ಥಿಗಳಿಗೆ ಶುಲ್ಕವಿಲ್ಲ.
►ಅರ್ಜಿ ಸಲ್ಲಿಸುವುದು ಹೇಗೆ?
• ಮೊದಲಿಗೆ BEML ಸಂಸ್ಥೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
• ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಲಿಂಕ್ ಮೂಲಕವೂ ಅರ್ಜಿ ಸಲ್ಲಿಸಬಹುದು: https://beml.registrationform.in/
• ನೇಮಕಾತಿ ಅಧಿಸೂಚನೆಯನ್ನು ಹುಡುಕಿ.
• ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಿ.
• ವಿದ್ಯಾರ್ಹತೆ ಮತ್ತು ಅನುಭವಕ್ಕೆ ಹೊಂದುವ ಹುದ್ದೆಯನ್ನು ಆಯ್ಕೆಮಾಡಿ.
• ಆನ್ಲೈನ್ ಅರ್ಜಿ ನಮೂನೆಯಲ್ಲಿ ಕೇಳಿರುವ ವೈಯಕ್ತಿಕ ಹಾಗೂ ಶೈಕ್ಷಣಿಕ ಮಾಹಿತಿಯನ್ನು ಭರ್ತಿ ಮಾಡಿ.
• ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
• ಅನ್ವಯವಾಗುವ ಅರ್ಜಿ ಶುಲ್ಕವನ್ನು ಪಾವತಿಸಿ.
• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
• ಭವಿಷ್ಯದ ಬಳಕೆಗಾಗಿ ಅರ್ಜಿಯ ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಇಟ್ಟುಕೊಳ್ಳಿ.

