Wednesday, 27 Jan, 4.55 pm ವಾರ್ತಾಭಾರತಿ

ಕರಾವಳಿ
ಬುರೂಜ್ ಹೈ ಸ್ಕೂಲ್ ನಲ್ಲಿ ಗಣರಾಜ್ಯೋತ್ಸ

ಬಿ.ಸಿ.ರೋಡ್ : ಮೂಡುಪಡುಕೋಡಿ ಗ್ರಾಮ ರಝಾನಗರದ ಬುರೂಜ್ ಇಂಗ್ಲಿಷ್ ಮೀಡಿಯಂ ಹೈ ಸ್ಕೂಲ್ 72ನೇ ಗಣರಾಜ್ಯೋತ್ಸವನ್ನು ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ಸಹಯೋಗದೊಂದಿಗೆ ಆಚರಿಸಲಾಯಿತು.

ಶಾಲಾ ಸಂಚಾಲಕರಾದ ಶೇಕ್ ರಹ್ಮತುಲ್ಲ ಧ್ವಜಾರೋಹಣಗೈದರು. ಇರ್ವತ್ತೂರು ಗ್ರಾಮ ಪಂಚಾಯತ್ ಸದಸ್ಯ ಸುಧೀಂದ್ರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಇರ್ವತ್ತೂರು ಗ್ರಾಮ ಪಂಚಾಯತ್ ಸದಸ್ಯರಾದ ಅಡ್ವೋಕೇಟ್ ಸುಚಿತ್ರ ಶೆಟ್ಟಿ, ಚಂದ್ರಾವತಿ, ಪ್ರಶಾಂತ್ ಕುಮಾರ್ ಜೈನ್, ವಿಜಯ, ಕರಾಟೆ ಕೋಚ್ ಶಿಹಾನ್ ನದೀಮ್ ಭಾಗವಹಿಸಿದ್ದರು.

ಶಾಲಾ ಮುಖ್ಯ ಶಿಕ್ಷಕಿ ಜಯಶ್ರೀ ಬಿ. ಉಪಸ್ಥಿತರಿದ್ದರು. ಇದೇ ವೇಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಝೈನಬ ಯು ಸ್ವಾಗತಿಸಿ, ಶೇಕ್ ಸಾದಿಯ ವಂದಿಸಿದರು. ಫಾತಿಮಾ ಹುಝೈಫ ಬಾನು ಕಾರ್ಯಕ್ರಮ ನಿರೂಪಿಸಿದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Varthabharathi
Top