ಮಂಗಳೂರು : ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಈಗಾಗಲೇ ಸೌದಿ ಅರೇಬಿಯಾ, ಯುಎಈ, ಬಹ್‍ರೈನ್ ,ಕತರ್ ಹಾಗೂ ಒಮಾನ್ ಮುಂತಾದ ದೇಶಗಳಲ್ಲಿ ಕಾರ್ಯಾಚರಿಸುತ್ತಿದ್ದು ಇದರ ಕತರ್ ನ್ಯಾಷನಲ್ ಸಮಿತಿಯನ್ನು ಇತ್ತೀಚೆಗೆ ಪುನರಚಿಸಲಾಯಿತು.
ಡಿಕೆಯಸ್ಸಿ ಕೇಂದ್ರ ಸಮಿತಿ ಅಧ್ಯಕ್ಷ ಅಸಯ್ಯಿದ್ ಕೆ ಎಸ್ ಆಟಕೋಯ ತಂಙಳ್ ಕುಂಬೋಳ್ ಅಧ್ಯಕ್ಷತೆ ವಹಿಸಿದ್ದರು. ಮರ್ಕಝ್ ತಅ ಲೀಮಿಲ್ ಇಹ್ಸಾನ್ ಮೂಳೂರು ಜನರಲ್ ಮ್ಯಾನೇಜರ್ ಮೌಲಾನಾ ಯು ಕೆ ಮುಸ್ತಫಾ ಸಅದಿ ಉದ್ಘಾಟಿಸಿ, ಅಲ್ ಇಹ್ಸಾನ್ ವುಮೆನ್ಸ್ ಶರೀಅತ್ ಕಾಲೇಜು ಪ್ರಾಂಶುಪಾಲರಾದ ಮುಹಮ್ಮದ್ ಅಲ್ ಕಾಸಿಮಿ ಮುಖ್ಯ ಪ್ರಭಾಷಣ ಮಾಡಿದರು.
ಸಭೆಯಲ್ಲಿ ಕೇಂದ್ರ ಸಮಿತಿ ಕಾರ್ಯಾಧ್ಯಕ್ಷರಾದ ಹಾಜಿ ಹಾತಿಂ ಕಂಚಿ , ಮಾಜಿ ಕಾರ್ಯಾಧ್ಯಕ್ಷರಾದ ಅಬ್ದುಲ್ ಹಮೀದ್ ಅರೆಮಿಕ್ಸ್ ಮುಂತಾದವರು ಹಿತವಚನ ನೀಡಿದರು.
ನಂತರ ನೂತನ ಕತರ್ ನ್ಯಾಷನಲ್ ಕಮಿಟಿಯನ್ನು ರಚಿಸಲಾಯಿತು.
ಇಸ್‍ಹಾಕ್ ನಿಝಾಮಿ ಸ್ವಾಗತಿಸಿ, ದಾವೂದು ಕಜೆಮಾರ್ ಹಾಗೂ ಇಸ್ಮಾಯಿಲ್ ಮುಸ್ಲಿಯಾರ್ ದೊಡ್ಡಣಗುಡ್ಡೆ ಕಾರ್ಯಕ್ರಮ ನಿರೂಪಿಸಿದರು.

