Dailyhunt
ದಯವಿಟ್ಟು ನಮ್ಮ ಪೈಲಟ್‍ನನ್ನು ಹುಡುಕಿಕೊಡಬಲ್ಲಿರಾ? ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ ಬೆನ್ನಲ್ಲೆ ಅಮೆರಿಕವನ್ನು ಅಣಕಿಸಿದ ಇರಾನ್

ದಯವಿಟ್ಟು ನಮ್ಮ ಪೈಲಟ್‍ನನ್ನು ಹುಡುಕಿಕೊಡಬಲ್ಲಿರಾ? ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ ಬೆನ್ನಲ್ಲೆ ಅಮೆರಿಕವನ್ನು ಅಣಕಿಸಿದ ಇರಾನ್

ಟೆಹ್ರಾನ್‌: ನೈರುತ್ಯ ಇರಾನ್‌ನಲ್ಲಿ ಅಮೆರಿಕ ಯುದ್ಧ ವಿಮಾನವನ್ನು ಹೊಡೆದುರುಳಿಸಲಾಗಿದೆ ಎಂಬ ವರದಿಗಳ ಬೆನ್ನಿಗೇ ಇರಾನ್ ಸಂಸತ್ತಿನ ಸ್ಪೀಕರ್ ಮುಹಮ್ಮದ್-ಬಾಘರ್ ಘಾಲಿಬಾಫ್ ಅಮೆರಿಕವನ್ನು ಅಣಕಿಸಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಘಾಲಿಬಾಫ್, ಇರಾನ್ ಅನ್ನು 37 ಬಾರಿ ಸೋಲಿಸಿದ್ದೇವೆ ಎಂದು ಹೇಳಿಕೊಳ್ಳುವ ಈ 'ಯೋಜನೆಯೇ ಇಲ್ಲದ ಯುದ್ಧ', ಈಗ ಆಡಳಿತ ಬದಲಾವಣೆಯಿಂದ ಹೇ, ಯಾರಾದರೂ ನಮ್ಮ ಪೈಲಟ್ ನನ್ನು ಹುಡುಕಿಕೊಡಬಲ್ಲಿರಾ?

ಪ್ಲೀಸ್? ಅನ್ನೋ ಮಟ್ಟಕ್ಕೆ ಇಳಿದಿದೆ ಎಂದು ವ್ಯಂಗ್ಯವಾಡಿದ್ದಾರೆ. "ವಾವ್, ಎಂಥ ಅದ್ಭುತ ಪ್ರಗತಿ" ಎಂದು ಅವರು ಕಾಲೆಳೆದಿದ್ದಾರೆ.

ಇರಾನ್ ನಲ್ಲಿ ಎಫ್-15ಇ ಯುದ್ಧ ವಿಮಾನವನ್ನು ನಾವು ಕಳೆದುಕೊಂಡಿದ್ದೇವೆ ಎಂದು ಈ ಮೊದಲು ಅಮೆರಿಕ ದೃಢಪಡಿಸಿತ್ತು. ಇರಾನ್ ನ ವಾಯು ರಕ್ಷಣಾ ವ್ಯವಸ್ಥೆಯನ್ನು ಎಷ್ಟು ದುರ್ಬಲಗೊಳಿಸಲಾಗಿದೆಯೆಂದರೆ, ಇದೀಗ ನಮ್ಮ ಯುದ್ಧ ವಿಮಾನಗಳು ಇರಾನ್ ಮೇಲೆ ಯಾವುದೇ ಅಡೆತಡೆಯಿಲ್ಲದೆ ಹಾರಾಡಬಹುದು ಎಂದು ಅಮೆರಿಕ ಘೋಷಿಸಿತ್ತು. "ಇರಾನ್ ಅನ್ನು ಶಿಲಾಯುಗಕ್ಕೆ ಮರಳಿಸಲಾಗುವುದು" ಎಂದು ಹೇಳಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಮೇಲೆ ಬಾಂಬ್ ದಾಳಿ ನಡೆಸುವ ಬೆದರಿಕೆಯನ್ನು ಕೂಡ ಒಡ್ಡಿದ್ದರು.

ಈ ನಡುವೆ, ಇಬ್ಬರು ಸಿಬ್ಬಂದಿಗಳನ್ನು ಹೊಂದಿದ್ದ ಅಮೆರಿಕ ಯುದ್ಧ ವಿಮಾನದ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಬದುಕುಳಿದಿರುವ ಸಿಬ್ಬಂದಿಯನ್ನು ಇರಾನ್ ಸೇನಾ ಪಡೆ ಸಮೀಪಿಸುವುದಕ್ಕೂ ಮುನ್ನವೇ ಅವರನ್ನು ರಕ್ಷಿಸಲು ಅಮೆರಿಕ ಶೋಧ ಕಾರ್ಯಾಚರಣೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಅಮೆರಿಕದ ಸುದ್ದಿ ಮಾಧ್ಯಮಗಳು ವರದಿ ಮಾಡಿದೆ.

ಆದರೆ, ಈ ಕಾರ್ಯಾಚರಣೆಗಾಗಿ ರವಾನಿಸಲಾಗಿದ್ದ ಅಮೆರಿಕ ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಲಾಗಿದೆ ಎಂದು ಇರಾನ್ ಮಾಧ್ಯಮ ವರದಿ ಮಾಡಿದೆ. ಹೊಡೆದುರುಳಿಸಲಾಗಿರುವ ಜೆಟ್‌ನಲ್ಲಿದ್ದ ಪೈಲಟ್ ಗಳನ್ನು ಪತ್ತೆ ಹಚ್ಚುವ ನಾಗರಿಕರಿಗೆ 60,000 ಡಾಲರ್ ಬಹುಮಾನ ನೀಡಲಾಗುವುದು ಎಂದು ಇರಾನ್ ಘೋಷಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi