Sunday, 24 Jan, 9.20 am ವಾರ್ತಾಭಾರತಿ

ಮುಖಪುಟ
ದೇಶದ ಶೇ.47ರಷ್ಟು ಕೋವಿಡ್ ಪ್ರಕರಣ ಈ ರಾಜ್ಯದಲ್ಲಿ...

ಹೊಸದಿಲ್ಲಿ, ಜ.24: ದೇಶದಲ್ಲಿ ಸತತ ಮೂರನೇ ದಿನ ದೈನಿಕ ಕೋವಿಡ್-19 ಪ್ರಕರಣಗಳ ಸಂಖ್ಯೆ 15 ಸಾವಿರದ ಮಿತಿಯಲ್ಲೇ ಉಳಿದಿದೆ. ಆದರೆ ಕೇರಳದಲ್ಲಿ ಮಾತ್ರ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದ್ದು, 73 ದಿನಗಳಲ್ಲೇ ಅತ್ಯಧಿಕ ಪ್ರಕರಣಗಳು ದಾಖಲಾಗಿವೆ.
ದೇಶದಲ್ಲಿ ಶನಿವಾರ ಸೇರ್ಪಡೆಯಾದ ಹೊಸ ಪ್ರಕರಣಗಳ ಪೈಕಿ ಶೇ.47ರಷ್ಟು ಪ್ರಕರಣಗಳು ಈ ರಾಜ್ಯದಿಂದ ವರದಿಯಾಗಿವೆ.

ಈ ಮಧ್ಯೆ ಪಂಜಾಬ್‌ನಲ್ಲಿ ಸೋಂಕಿತರ ಸಾವಿನ ದರವನ್ನು ನಿಯಂತ್ರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ರೂಪಾಂತರಿತ ಕೊರೋನ ವೈರಸ್ ಪ್ರಭೇದ ರಾಜ್ಯವನ್ನು ಪ್ರವೇಶಿಸಿದೆಯೇ ಎಂದು ಪರಿಶೀಲಿಸಲು ಸರಕಾರ ನಿರ್ಧರಿಸಿದೆ. ರಾಜ್ಯದಲ್ಲಿ ಪತ್ತೆಯಾದ ಶೇಕಡ 5ರಷ್ಟು ಪಾಸಿಟಿವ್ ಪ್ರಕರಣಗಳ ಮಾದರಿಯನ್ನು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್‌ಸಿಡಿಸಿ)ಕ್ಕೆ ಮತ್ತು ಇನ್‌ಸ್ಟಿಟ್ಯೂಟ್ ಆಫ್ ಜೆನೋಮಿತ್ಸ್ ಅಂಡ್ ಇಂಟಗ್ರೇಟಿವ್ ಬಯಾಲಜಿ (ಐಜಿಐಬಿ)ಗೆ ಪರೀಕ್ಷೆಗಾಗಿ ಕಳುಹಿಸಲು ನಿರ್ಧರಿಸಿದೆ.

ಕೋವಿಡ್ ನಿಯಂತ್ರಣ ವಿರುದ್ಧದ ಸಮರದ ಅಂಗವಾಗಿ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಕೊವ್ಯಾಕ್ಸಿನ್ ಲಸಿಕೆಯನ್ನು ಪಂಜಾಬ್, ಛತ್ತೀಸ್‌ಗಢ, ಗುಜರಾತ್, ಜಾರ್ಖಂಡ್, ಕೇರಳ, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳಕ್ಕೆ ಕಳುಹಿಸಲು ಕೇಂದ್ರ ಸರಕಾರ ಮುಂದಾಗಿದೆ. ಮುಂದಿನ ವಾರದಿಂದ ಈ ಏಳು ರಾಜ್ಯಗಳಲ್ಲಿ ಲಸಿಕೆ ನೀಡಿಕೆ ಆರಂಭವಾಗಲಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಸದ್ಯ 12 ರಾಜ್ಯಗಳಲ್ಲಿ ಇದನ್ನು ಬಳಸಲಾಗುತ್ತಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Varthabharathi
Top