Saturday, 01 Sep, 6.52 am ವಾರ್ತಾಭಾರತಿ

ಮುಖಪುಟ
ದ್ರಾವಿಡ್ ನನ್ನ ವೃತ್ತಿಬದುಕಿಗೆ ತಿರುವು ನೀಡಿದರು: ಖಲೀಲ್ ಅಹ್ಮದ್

ಹೊಸದಿಲ್ಲಿ, ಸೆ.1: ಯುಎಇನಲ್ಲಿ ನಡೆಯಲಿರುವ ಏಶ್ಯಾಕಪ್‌ಗೆ ಇಂದು ಪ್ರಕಟಿಸಲಾದ ಭಾರತದ 16 ಸದಸ್ಯರ ಕ್ರಿಕೆಟ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡು ಅಚ್ಚರಿ ಮೂಡಿಸಿರುವ ಖಲೀಲ್ ಅಹ್ಮದ್ ತನ್ನ ಕೋಚ್ ರಾಹುಲ್ ದ್ರಾವಿಡ್‌ಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಅಂಡರ್-19 ಕ್ರಿಕೆಟ್‌ನಲ್ಲಿ ದ್ರಾವಿಡ್ ಮಾರ್ಗದರ್ಶನದಲ್ಲಿ ಪಳಗಿರುವ ಅಹ್ಮದ್ ಮುಂದೊಂದು ದಿನ ತನ್ನ ರೋಲ್‌ಮಾಡಲ್ ಝಹೀರ್ ಖಾನ್ ದಾಖಲೆಯನ್ನು ಸರಿಗಟ್ಟುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

''ನಾನು ಟೀಮ್ ಇಂಡಿಯಾಕ್ಕೆ ಆಯ್ಕೆಯಾಗಿದ್ದೇನೆಂಬ ವಿಚಾರ ನಂಬಲು ಸಾಧ್ಯವಾಗುತ್ತಿಲ್ಲ. ಇಂದು ನನ್ನ ಕನಸು ಈಡೇರಿದೆ. ಉತ್ತಮ ಪ್ರದರ್ಶನ ನೀಡುವತ್ತ ಮತ್ತಷ್ಟು ಗಮನ ನೀಡುವೆ. ಕ್ರಿಕೆಟ್ ಆಡಲು ಆರಂಭಿಸಿದಾಗ ಪ್ರತಿಯೊಬ್ಬ ಆಟಗಾರನು ದೇಶವನ್ನು ಪ್ರತಿನಿಧಿಸಲು ಬಯಸುತ್ತಾನೆ. ನಾನು ಅದಕ್ಕಿಂತ ಭಿನ್ನವಲ್ಲ. ನಾನು ದ್ರಾವಿಡ್ ಸರ್‌ಗೆ ಋಣಿಯಾಗಿರುವೆ. ಅವರು ನನಗೆ ಧೈರ್ಯ ತುಂಬಿ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದಾರೆ. ದ್ರಾವಿಡ್ ಆಟಗಾರರಿಗೆ ಸ್ವತಂತ್ರವಾಗಿ ಮಾತನಾಡಲು ಅವಕಾಶ ನೀಡುತ್ತಾರೆ.

ನನ್ನ ವೃತ್ತಿಜೀವನ ರೂಪುಗೊಳ್ಳಲು ದ್ರಾವಿಡ್ ಭಾರೀ ಪ್ರಭಾವಬೀರಿದ್ದಾರೆ'' ಎಂದು ಖಲೀಲ್ ಹೇಳಿದ್ದಾರೆ.

Dailyhunt
Top