Dailyhunt Logo
  • Light mode
    Follow system
    Dark mode
    • Play Story
    • App Story
ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಕಿವೀಸ್ ಬೌಲರ್ ಟಿಕ್ನರ್ ಅಲಭ್ಯ

ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಕಿವೀಸ್ ಬೌಲರ್ ಟಿಕ್ನರ್ ಅಲಭ್ಯ

ವೆಲ್ಲಿಂಗ್ಟನ್, ನ.24: ಮಂಡಿರಜ್ಜು ನೋವಿನಿಂದ ಬಳಲುತ್ತಿರುವ ವೇಗದ ಬೌಲರ್ ಬ್ಲೇರ್ ಟಿಕ್ನರ್ ಕ್ರೈಸ್ಟ್ಚರ್ಚ್ನಲ್ಲಿ ಶುಕ್ರವಾರದಿಂದ ಆರಂಭವಾಗಲಿರುವ ಭಾರತ ಕ್ರಿಕೆಟ್ ತಂಡದ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ ಎಂದು ನ್ಯೂಝಿಲೆಂಡ್ ಕ್ರಿಕೆಟ್ ಮಂಡಳಿ ಮಂಗಳವಾರ ತಿಳಿಸಿದೆ.

ಈ ವಾರ ವೆಲ್ಲಿಂಗ್ಟನ್‌ ನಲ್ಲಿ ತರಬೇತಿಯ ವೇಳೆ 33ರ ಹರೆಯದ ವೇಗದ ಬೌಲರ್ ಟಿಕ್ನರ್ ಬಲ ಮಂಡಿರಜ್ಜಿನ ಗಾಯಕ್ಕೆ ಒಳಗಾಗಿದ್ದಾರೆ. ಟಿಕ್ನರ್ ಬದಲಿಗೆ ಮ್ಯಾಟ್ ಫಿಶರ್ ತಂಡ ಸೇರಲಿದ್ದಾರೆ. ಕಳೆದ ವರ್ಷ ಝಿಂಬಾಬ್ವೆ ವಿರುದ್ಧ ಫಿಶರ್ ತಮ್ಮ ಏಕೈಕ ಟೆಸ್ಟ್ ಪಂದ್ಯವನ್ನಾಡಿದ್ದರು.

ಡ್ರಾನಲ್ಲಿ ಕೊನೆಗೊಂಡ ಮೊದಲ ಟೆಸ್ಟ್ ಪಂದ್ಯದ ಆಡುವ ಬಳಗದಲ್ಲಿ ಟಿಕ್ನರ್ ಆಯ್ಕೆಯಾಗಿರಲಿಲ್ಲ. ಆದರೆ, ಬಾಸಿನ್ ರಿಸರ್ವ್ ಪಿಚ್ನಲ್ಲಿ ಭಾರತ ತಂಡವು 9 ವಿಕೆಟ್ಗಳ ನಷ್ಟಕ್ಕೆ 720 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿದ ಹಿನ್ನೆಲೆಯಲ್ಲಿ ನ್ಯೂಝಿಲೆಂಡ್ ತಂಡವು ತನ್ನ ವೇಗದ ಬೌಲಿಂಗ್ ವಿಭಾಗದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲು ಚಿಂತಿಸುತ್ತಿದೆ.

ನ್ಯೂಝಿಲೆಂಡ್ ತಂಡವು ಈಗಾಗಲೇ ತನ್ನ ಪ್ರಮುಖ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ಸೇವೆಯಿಂದ ವಂಚಿತವಾಗಿದೆ. ಸ್ಯಾಂಟ್ನರ್ ಭಾರತ ತಂಡದ ವಿರುದ್ಧದ ಏಕದಿನ ಸರಣಿಯ ವೇಳೆ ಬಲಗೈ ಮುರಿತಕ್ಕೆ ಒಳಗಾಗಿದ್ದರು.

►ಎರಡನೇ ಟೆಸ್ಟ್ ಪಂದ್ಯಕ್ಕೆ ನ್ಯೂಝಿಲೆಂಡ್ ತಂಡ:

ಟಾಮ್ ಲ್ಯಾಥಮ್ (ನಾಯಕ), ಟಾಮ್ ಬ್ಲಂಡೆಲ್, ಡೆವೊನ್ ಕಾನ್ವೆ, ಜೇಕಬ್ ಡಫಿ, ಮ್ಯಾಟ್ ಫಿಶರ್, ಡೀನ್ ಫಾಕ್ಸ್ಕ್ರಾಫ್ಟ್, ಮ್ಯಾಟ್ ಹೆನ್ರಿ, ಕೈಲ್ ಜಮೀಸನ್, ಡ್ಯಾರಿಲ್ ಮಿಚೆಲ್, ಹೆನ್ರಿ ನಿಕೊಲ್ಸ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ನಾಥನ್ ಸ್ಮಿತ್, ವಿಲ್ ಯಂಗ್.

Dailyhunt
Disclaimer: This content has not been generated, created or edited by Dailyhunt. Publisher: Varthabharathi