Dailyhunt
ಎ.4ರಂದು ಯಲಬುರ್ಗಾ ನೂತನ ನ್ಯಾಯಾಲಯದ ಸಂಕೀರ್ಣ ಉದ್ಘಾಟನೆ

ಎ.4ರಂದು ಯಲಬುರ್ಗಾ ನೂತನ ನ್ಯಾಯಾಲಯದ ಸಂಕೀರ್ಣ ಉದ್ಘಾಟನೆ

ಲಬುರ್ಗಾ : ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ನ್ಯಾಯಾಲಯ ಸಂಕೀರ್ಣವನ್ನು ಏಪ್ರಿಲ್ 4, 2026ರಂದು ಶನಿವಾರ ಉದ್ಘಾಟಿಸಲಾಗುವುದು ಎಂದು ನ್ಯಾಯಾಧೀಶರಾದ ಜೆ. ರಂಗಸ್ವಾಮಿ ತಿಳಿಸಿದ್ದಾರೆ.

ಸುಮಾರು 18 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಆಧುನಿಕ ನ್ಯಾಯಾಲಯ ಕಟ್ಟಡವನ್ನು ಕಾನೂನು ಸಚಿವ ಎಚ್. ಕೆ.

ಪಾಟೀಲ್, ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ನ್ಯಾಯಾಧೀಶರು ಹಾಗೂ ಇತರ ಗಣ್ಯರು ಭಾಗವಹಿಸಲಿದ್ದಾರೆ.

ನಂತರ ಯಲಬುರ್ಗಾ ತಾಲೂಕು ವಕೀಲ ಸಂಘದ ಅಧ್ಯಕ್ಷ ಸುಭಾಷ್ ಹೊಂಬಳ ಮಾತನಾಡಿ, "ನೂತನ ನ್ಯಾಯಾಲಯ ಸಂಕೀರ್ಣ ಉದ್ಘಾಟನೆ ನಮ್ಮೆಲ್ಲರಿಗೂ ಸಂತಸದ ವಿಷಯವಾಗಿದೆ. ಸುಮಾರು 18 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಕಟ್ಟಡಕ್ಕೆ ಶ್ರಮಿಸಿದ ಶಾಸಕ ಬಸವರಾಜ್ ರಾಯರೆಡ್ಡಿ ಅವರಿಗೆ ಧನ್ಯವಾದಗಳು" ಎಂದು ಹೇಳಿದರು.

ಈ ನ್ಯಾಯಾಲಯ ಸಂಕೀರ್ಣದಲ್ಲಿ ವಕೀಲರಿಗಾಗಿ ಪ್ರತ್ಯೇಕ ಕಟ್ಟಡವಿಲ್ಲದಿದ್ದರೂ, ಮುಂದಿನ ದಿನಗಳಲ್ಲಿ ಅದನ್ನು ನಿರ್ಮಿಸಲಾಗುವುದು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ವಕೀಲ ಸಂಘದ ಉಪಾಧ್ಯಕ್ಷ ಎಂ.ಎಸ್. ನಾಯ್ಕರ್, ಪ್ರಧಾನ ಕಾರ್ಯದರ್ಶಿ ಮಹಾಂತೇಶ್ ಈಟಿ, ಹಸನ್ ಸಾಬ್ ನದಾಫ್, ಬಸವರಾಜ್ ಆರ್ ತುರಕಾಣಿ, ಶ್ರೀಮತಿ ಅಕ್ಕಮಹಾದೇವಿ ಎಂ. ಪಾಟೀಲ್, ಶರಣಯ್ಯ ಶಶಿಮಠ, ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ ಸೇರಿದಂತೆ ಅನೇಕ ವಕೀಲರು ಹಾಗೂ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ವಕೀಲ ಸಂಘದ ಉಪಾಧ್ಯಕ್ಷರಾದ ಎಂ ಎಸ್ ನಾಯ್ಕರ್ ಪ್ರಧಾನ ಕಾರ್ಯದರ್ಶಿ ಮಹಾಂತೇಶ್ ಈಟಿ, ಹಸನ್ ಸಾಬ್ ನದಾಫ್, ಬಸವರಾಜ್ ಆರ್ ತುರಕಾಣಿ, ಶ್ರೀಮತಿ ಅಕ್ಕಮಹಾದೇವಿ ಎಂ ಪಾಟೀಲ್ ಶರಣಯ್ಯ ಶಶಿ ಮಠ. ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ, ವಕೀಲರ ಸಂಘದ ಪದಾಧಿಕಾರಿಗಳಾದ, ಹಿರಿಯ ವಕೀಲರಾದ ಬಿ.ಎಂ. ಶಿರೂರ, ಉಮೇಶ ಮೆಣಸಗೇರಿ, ಪಿ.ಎಸ್. ಬೇಲೇರಿ, ಸಿ.ಪಿ.ಪಾಟೀಲ, ಪಿ.ಎಸ್. ಹಿರೇಮಠ,, ಇಂದ್ರಾ ಉಳ್ಳಾಗಡ್ಡಿ, ಉಮಾ ಕಲ್ಲೂರ, ಸಾವಿತ್ರಿ ಗೊಲ್ಲರ, ಲಕ್ಷ್ಮಿ, ಜೆ.ರಂಗಸ್ವಾಮಿ, ನಾಯಕ, ಜ್ಯೋತಿ ಹಾಲಕೇರಿ, ಎಂ.ಎಸ್.ಪಾಟೀಲ ಸೇರಿದಂತೆ ಇತರರು ಇದ್ದರು.

Dailyhunt
Disclaimer: This content has not been generated, created or edited by Dailyhunt. Publisher: Varthabharathi