Dailyhunt
ಎಐಸಿಸಿ ಅಲ್ಪಸಂಖ್ಯಾತರ ಘಟಕದ ಸಲಹಾ ಪರಿಷತ್‍ನಲ್ಲಿ ರಾಜ್ಯದ ನಾಯಕರಿಗೆ ಅವಕಾಶ

ಎಐಸಿಸಿ ಅಲ್ಪಸಂಖ್ಯಾತರ ಘಟಕದ ಸಲಹಾ ಪರಿಷತ್‍ನಲ್ಲಿ ರಾಜ್ಯದ ನಾಯಕರಿಗೆ ಅವಕಾಶ

ಬೆಂಗಳೂರು : ಎಐಸಿಸಿ ಅಲ್ಪಸಂಖ್ಯಾತರ ಘಟಕದ ಸಲಹಾ ಪರಿಷತ್‍ನಲ್ಲಿ ಸಚಿವರಾದ ಕೆ.ಜೆ.ಜಾರ್ಜ್, ಝಮೀರ್ ಅಹ್ಮದ್ ಖಾನ್, ಶಾಸಕರಾದ ಎನ್.ಎ.ಹಾರಿಸ್, ಕನೀಝ್ ಫಾತಿಮಾ ಸೇರಿದಂತೆ ಇನ್ನಿತರರಿಗೆ ಸ್ಥಾನ ನೀಡಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆದೇಶ ಹೊರಡಿಸಿದ್ದಾರೆ.

ಎಐಸಿಸಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಮ್ರಾನ್ ಪ್ರತಾಪ್‍ಗಡಿ ಸೇರಿದಂತೆ ಒಟ್ಟು 60 ಮಂದಿಗೆ ಈ ಸಲಹಾ ಪರಿಷತ್‍ನ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

'ಎಐಸಿಸಿ ಅಲ್ಪಸಂಖ್ಯಾತ ವಿಭಾಗದ ಸಲಹಾ ಮಂಡಳಿಗೆ ನನ್ನನ್ನು ನೇಮಕ ಮಾಡಿರುವುದಕ್ಕೆ ನಾನು ಆಭಾರಿಯಾಗಿದ್ದೇನೆ. ಕಾಂಗ್ರೆಸ್ ಪಕ್ಷ ನನ್ನ ಮೇಲೆ ಇಟ್ಟಿರುವ ವಿಶ್ವಾಸ ಮತ್ತು ನಂಬಿಕೆಗೆ ಹತ್ಪೂರ್ವಕ ಧನ್ಯವಾದಗಳು. ಸಮಾಜದ ಎಲ್ಲ ವರ್ಗಗಳ ಸಮಾನ ನ್ಯಾಯ ಮತ್ತು ಸಬಲೀಕರಣಕ್ಕೆ ನಾನು ಬದ್ಧನಾಗಿದ್ದೇನೆ'

-ಝಮೀರ್ ಅಹ್ಮದ್ ಖಾನ್, ಸಚಿವ

Dailyhunt
Disclaimer: This content has not been generated, created or edited by Dailyhunt. Publisher: Varthabharathi