Dailyhunt Logo
  • Light mode
    Follow system
    Dark mode
    • Play Story
    • App Story
ಎರಡನೇ ಟಿ-20ಗೆ ಇಶಾನ್ ಕಿಶನ್ ಅಲಭ್ಯ: ಆಡುವ 11ರ ಬಳಗಕ್ಕೆ ವೈಭವ್ ಸೂರ್ಯವಂಶಿ?

ಎರಡನೇ ಟಿ-20ಗೆ ಇಶಾನ್ ಕಿಶನ್ ಅಲಭ್ಯ: ಆಡುವ 11ರ ಬಳಗಕ್ಕೆ ವೈಭವ್ ಸೂರ್ಯವಂಶಿ?

ಹೊಸದಿಲ್ಲಿ: ಗಾಯದ ಸಮಸ್ಯೆಯಿಂದಾಗಿ ವಿಕೆಟ್‌ಕೀಪರ್-ಬ್ಯಾಟರ್ ಇಶಾನ್ ಕಿಶನ್ ನ್ಯೂಝಿಲ್ಯಾಂಡ್ ವಿರುದ್ಧದ ಎರಡನೇ ಟಿ-20 ಪಂದ್ಯದಿಂದ ಹೊರಗುಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತದ ಯುವ ಆಟಗಾರ ವೈಭವ್ ಸೂರ್ಯವಂಶಿ ಆಡುವ 11ರ ಬಳಗದಲ್ಲಿ ಮತ್ತೊಮ್ಮೆ ಅವಕಾಶ ಪಡೆಯುವ ಸಾಧ್ಯತೆಯಿದೆ.

ಕಿಶನ್ ಗಾಯಗೊಂಡಿರುವ ಕಾರಣ ಶನಿವಾರ ಕರ‌್ಸಸ್ಟ್‌ ಚರ್ಚ್ ನಡೆಯಲಿರುವ ಪಂದ್ಯಕ್ಕಿಂತ ಮೊದಲು ಆಯ್ಕೆಯ ಕುರಿತು ಪ್ರಶ್ನೆ ಎದ್ದಿದೆ. ಸರಣಿಯ ಆರಂಭದಲ್ಲಿ ದಾಖಲೆಯ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿರುವ ಭಾರತ ತಂಡದ ಪರ ಟೀಮ್ ಮ್ಯಾನೇಜ್‌ಮೆಂಟ್ ದಿಟ್ಟ ಹೆಜ್ಜೆ ಇಡಬೇಕಾಗಿದೆ.

ಮೊದಲ ಟಿ-20 ಪಂದ್ಯದ ವೇಳೆ ಕಿಶನ್ ಗಾಯಗೊಂಡಿದ್ದಾರೆ ಎಂದು ಬಿಸಿಸಿಐ ದೃಢಪಡಿಸಿದೆ. ವೈದ್ಯಕೀಯ ತಂಡವು ಅವರ ಮೇಲೆ ನಿಗಾವಹಿಸಿದೆ. ಕಿಶನ್ ಎರಡನೇ ಪಂದ್ಯದಿಂದ ಹೊರಗುಳಿಯಲಿದ್ದು, ಐದು ಪಂದ್ಯಗಳ ಸರಣಿಯಲ್ಲಿ ಸದ್ಯ ಭಾರತವು 1-0 ಮುನ್ನಡೆಯಲ್ಲಿದೆ.

ಭಾರತ ತಂಡದ ಭಾಗವಾಗಿರುವ ಸೂರ್ಯವಂಶಿ ಮೊದಲ ಪಂದ್ಯದಲ್ಲಿ ಆಡಿರಲಿಲ್ಲ. ಕಿಶನ್ ಬದಲಿಗೆ ಆಡುವ ಸಾಧ್ಯತೆ ಹೆಚ್ಚಿದೆ. 15ರ ಹರೆಯದ ಸೂರ್ಯವಂಶಿ 2026ರ ಏಶ್ಯನ್ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ ಈಗಾಗಲೇ ಸೀನಿಯರ್ ಮಟ್ಟದಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಾಲಿಟ್ಟಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi