Dailyhunt Logo
  • Light mode
    Follow system
    Dark mode
    • Play Story
    • App Story
ಫಕ್ರುದ್ದೀನ್ ಇರುವೈಲ್ ನಿಧನ

ಫಕ್ರುದ್ದೀನ್ ಇರುವೈಲ್ ನಿಧನ

ಮಂಗಳೂರು, ಆ.1: ಲೇಖಕ, ಕತೆಗಾರ ಫಕ್ರುದ್ದೀನ್ ಇರುವೈಲ್(57) ಶನಿವಾರ ರಾತ್ರಿ ಮೂಡುಬಿದಿರೆ ಸಮೀಪದ ಇರುವೈಲಿನ ಸ್ವಗೃಹದಲ್ಲಿ ನಿಧನರಾದರು.

ಕನ್ನಡ, ಬ್ಯಾರಿ ಕತೆ, ಕಾದಂಬರಿ ಸಹಿತ ಹಲವಾರು ಕೃತಿಗಳನ್ನು ರಚಿಸಿರುವ ಇವರು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಗೌರವ ಪುರಸ್ಕಾರ, ಮುಸ್ಲಿಂ ಲೇಖಕರ ಸಂಘದ ಮುಸ್ಲಿಂ ಸಾಹಿತ್ಯ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ.

ಮೃತರು ಪತ್ನಿ, ಮೂವರು ಪುತ್ರಿಯರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi