ಗಾಝಾ, ನ.24: ಪಶ್ಚಿಮ ಗಾಝಾ ನಗರದಲ್ಲಿ ಮಂಗಳವಾರ ನಡೆದ ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಗಾಝಾದಲ್ಲಿನ ಹಮಾಸ್ ನ ಆಂತರಿಕ ಭದ್ರತಾ ವಿಭಾಗದ ನಿರ್ದೇಶಕ ನಯೀಮ್ ಅಬು ನಹೆಲ್ ಸಾವನ್ನಪ್ಪಿರುವುದಾಗಿ ಹಮಾಸ್ ಮೂಲಗಳು ತಿಳಿಸಿವೆ.
ದಾಳಿ ನಡೆಸಿರುವುದನ್ನು ಇಸ್ರೇಲಿ ಸೇನೆ ಮತ್ತು ಆಂತರಿಕ ಭದ್ರತಾ ಏಜೆನ್ಸಿ ದೃಢಪಡಿಸಿವೆ.
ಮಂಗಳವಾರ ಗಾಝಾ ನಗರದ ಸಮೀಪ ನಡೆದ ಪ್ರತ್ಯೇಕ ದಾಳಿಯಲ್ಲಿ 17 ವರ್ಷದ ಬಾಲಕ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ದಕ್ಷಿಣ ಗಾಝಾದ ಅಲ್-ಮವಾಸಿ ಪ್ರದೇಶದ ಪೊಲೀಸ್ ಠಾಣೆಯ ಮೇಲೆ ನಡೆದ ಪ್ರತ್ಯೇಕ ವೈಮಾನಿಕ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಪೊಲೀಸ್ ಠಾಣೆಯ ಪ್ರದೇಶದಲ್ಲಿ 'ಬಂಡುಕೋರರ ಮೇಲೆ ದಾಳಿ ನಡೆಸಲಾಗಿದೆ' ಎಂದು ಇಸ್ರೇಲ್ ಸೇನೆ ತಿಳಿಸಿದೆ.

