Saturday, 19 Sep, 12.03 am ವಾರ್ತಾಭಾರತಿ

ಕ್ರೀಡೆ
ಗಾಯಾಳು ಒಸಾಕಾ ಫ್ರೆಂಚ್ ಓಪನ್‌ನಿಂದ ಹೊರಕ್ಕೆ

ಪ್ಯಾರಿಸ್: ಯುಎಸ್ ಮಹಿಳಾ ಚಾಂಪಿಯನ್ ಜಪಾನ್‌ನ ನವೊಮಿ ಒಸಾಕಾ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಿಂದ ಹೊರಗುಳಿಯಲಿದ್ದಾರೆ.

ಎಡಗೈ ಮಂಡಿರಜ್ಜು ಗಾಯದಿಂದಾಗಿ ಫ್ರೆಂಚ್ ಓಪನ್‌ನಲ್ಲಿ ಆಡುವುದಿಲ್ಲ ಎಂದು ಒಸಾಕಾ ಸ್ಪಷ್ಟಪಡಿಸಿದ್ದಾರೆ.

ಸೆ.29ರಂದು ಆರಂಭವಾಗುವ ಫ್ರೆಂಚ್ ಓಪನ್ ಟೂರ್ನಮೆಂಟ್‌ನಲ್ಲಿ ತಾನು ಭಾಗವಹಿಸುವುದಿಲ್ಲ ಎಂದು ಹಾಲಿ ಚಾಂಪಿಯನ್ ಆಯಶ್ ಬಾರ್ಟಿ ಈಗಾಗಲೇ ಹೇಳಿದ್ದಾರೆ. ಇದೀಗ ಒಸಾಕಾ ಹೊಸ ಸೇರ್ಪಡೆಯಾಗಿದ್ದಾರೆ. ನಂ .3 ನೇ ಸ್ಥಾನದಲ್ಲಿರುವ ಒಸಾಕಾ ಕಳೆದ ತಿಂಗಳು ನ್ಯೂಯಾರ್ಕ್‌ನಲ್ಲಿ ವೆಸ್ಟರ್ನ್ ಆಯಂಡ್ ಸದರ್ನ್ ಓಪನ್‌ನಲ್ಲಿ ಮಂಡಿರಜ್ಜು ಗಾಯದ ಸಮಸ್ಯೆ ಎದುರಿಸಿದ್ದರು ಮತ್ತು ಅಂತಿಮವಾಗಿ ಹಿಂದೆ ಸರಿದಿದ್ದರು.

''ದುರದೃಷ್ಟವಶಾತ್ ನನಗೆ ಈ ವರ್ಷ ಫ್ರೆಂಚ್ ಓಪನ್ ಆಡಲು ಸಾಧ್ಯವಾಗುವುದಿಲ್ಲ ''ಎಂದು ಒಸಾಕಾ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Varthabharathi
Top