Dailyhunt
ಗಲ್ಫ್ ನಲ್ಲಿರುವ ಅಮೆರಿಕದ ಕೈಗಾರಿಕೆಗಳ ಮೇಲೆ ದಾಳಿ | 'ಈ ದಾಳಿ ಕೇವಲ ಎಚ್ಚರಿಕೆ ಮಾತ್ರ' ಎಂದ ಇರಾನ್

ಗಲ್ಫ್ ನಲ್ಲಿರುವ ಅಮೆರಿಕದ ಕೈಗಾರಿಕೆಗಳ ಮೇಲೆ ದಾಳಿ | 'ಈ ದಾಳಿ ಕೇವಲ ಎಚ್ಚರಿಕೆ ಮಾತ್ರ' ಎಂದ ಇರಾನ್

ಟೆಹ್ರಾನ್ /ಅಬುಧಾಬಿ: ಗಲ್ಫ್ ಪ್ರದೇಶದಲ್ಲಿನ ಯುಎಸ್‌ ಗೆ ಸಂಬಂಧಿಸಿದ ಕೈಗಾರಿಕಾ ಸೌಲಭ್ಯಗಳ ಮೇಲೆ ನಡೆಸಿದ ಇತ್ತೀಚಿನ ದಾಳಿಗಳು 'ಒಂದು ಎಚ್ಚರಿಕೆ' ಎಂದು ಇರಾನ್‌ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹೇಳಿದೆ ಎಂದು aljazeera.com ವರದಿ ಮಾಡಿದೆ.

ಇರಾನ್ ಮಾಧ್ಯಮಗಳು ಪ್ರಸಾರ ಮಾಡಿದ ಹೇಳಿಕೆಯ ಪ್ರಕಾರ, ವಾರಾಂತ್ಯದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ ನ ಅಬುಧಾಬಿಯಲ್ಲಿರುವ ಉಕ್ಕಿನ ಘಟಕಗಳು ಹಾಗೂ ಬಹ್ರೇನ್‌ ನ ಅಲ್ಯೂಮಿನಿಯಂ ಸೌಲಭ್ಯಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು IRGC ತಿಳಿಸಿದೆ.

"ಈ ದಾಳಿಗಳು ಕೇವಲ ಎಚ್ಚರಿಕೆ ಮಾತ್ರ. ಇರಾನ್‌ ನ ಕೈಗಾರಿಕೆಗಳ ಮೇಲೆ ದಾಳಿ ಮರುಕಳಿಸಿದರೆ, ಮುಂದಿನ ಪ್ರತಿಕ್ರಿಯೆ ಇನ್ನಷ್ಟು ಕಠಿಣವಾಗಿರುತ್ತದೆ," ಎಂದು IRGC ಎಚ್ಚರಿಸಿದೆ.

"ಆಕ್ರಮಣಕಾರಿ ಆಡಳಿತದ ಪ್ರಮುಖ ಮೂಲಸೌಕರ್ಯಗಳು ಹಾಗೂ ಈ ಪ್ರದೇಶದಲ್ಲಿನ ಅಮೇರಿಕನ್ ಆರ್ಥಿಕ ಹಿತಾಸಕ್ತಿಗಳನ್ನೇ ಗುರಿಯಾಗಿಸಲಾಗುವುದು," ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಯುದ್ಧ ಆರಂಭವಾದ ಬಳಿಕ ಗಲ್ಫ್ ಪ್ರದೇಶದಲ್ಲಿನ ಅಮೆರಿಕಕ್ಕೆ ಸಂಬಂಧಿಸಿದ ಅಥವಾ ಅದರ ಮಾಲೀಕತ್ವದ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸುವುದಾಗಿ IRGC ಹಲವು ಬಾರಿ ಎಚ್ಚರಿಕೆ ನೀಡಿದ್ದು, ಇತ್ತೀಚಿನ ದಾಳಿಗಳು ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸುವ ಸೂಚನೆ ನೀಡಿವೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi