Dailyhunt Logo
  • Light mode
    Follow system
    Dark mode
    • Play Story
    • App Story
Germany | ಪ್ರಾದೇಶಿಕ ಚುನಾವಣೆಯಲ್ಲಿ ಕಟ್ಟಾ ಬಲಪಂಥೀಯ AFD ಪಕ್ಷಕ್ಕೆ ಭಾರಿ ಜಯ

Germany | ಪ್ರಾದೇಶಿಕ ಚುನಾವಣೆಯಲ್ಲಿ ಕಟ್ಟಾ ಬಲಪಂಥೀಯ AFD ಪಕ್ಷಕ್ಕೆ ಭಾರಿ ಜಯ

ರ್ಲಿನ್, ಸೆ. 7: ಪೂರ್ವ ಜರ್ಮನಿಯ ಸ್ಯಾಕ್ಸೋನಿ-ಅನ್ಹಾಲ್ಟ್ ರಾಜ್ಯದಲ್ಲಿ ನಡೆದ ಚುನಾವಣೆಯಲ್ಲಿ ಜರ್ಮನಿಯ ತೀವ್ರ ಬಲಪಂಥೀಯ AFD ಪಕ್ಷವು ಭಾರಿ ಜಯಗಳಿಸಿದ್ದು, ಈ ಫಲಿತಾಂಶವು ಚಾನ್ಸಲರ್ ಫ್ರೆಡ್ರಿಕ್ ಮೆರ್ಜ್ ಅವರಿಗೆ ತೀವ್ರ ಹಿನ್ನಡೆ ಎಂದು ವಿಶ್ಲೇಷಿಸಲಾಗಿದೆ.

AFD ಪಕ್ಷವು ಶೇಕಡಾ 44ರಷ್ಟು ಮತಗಳನ್ನು ಪಡೆದು ತನ್ನ ಬೆಂಬಲವನ್ನು ದ್ವಿಗುಣಗೊಳಿಸಿದೆ. ಮೆರ್ಜ್ ಅವರ ಮಧ್ಯ-ಬಲಪಂಥೀಯ CDU ಪಕ್ಷ ಸುಮಾರು ಶೇಕಡಾ 18ರಷ್ಟು ಮತಗಳನ್ನು ಗಳಿಸಿದೆ. ಆದರೆ ಸ್ವತಂತ್ರವಾಗಿ ಆಡಳಿತ ನಡೆಸಲು ಅಗತ್ಯವಿರುವ ಸಂಪೂರ್ಣ ಬಹುಮತದಿಂದ AFD ವಂಚಿತವಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ತಮ್ಮ ಪಕ್ಷದ ಈ ಹಿನ್ನಡೆಯ ಹಿನ್ನೆಲೆಯಲ್ಲಿ ಚಾನ್ಸಲರ್ ಫ್ರೆಡ್ರಿಕ್ ಮೆರ್ಜ್ ಅವರು ಫಲಿತಾಂಶದ ಕುರಿತು ಸೋಮವಾರ ಪ್ರತಿಕ್ರಿಯಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi