Dailyhunt
ಹಾರ್ಮುಝ್‌ ಜಲಸಂಧಿಯಲ್ಲಿ ವಿಶ್ವಸಂಸ್ಥೆ ಮಿಲಿಟರಿ ಕ್ರಮಕ್ಕೆ ರಷ್ಯ, ಚೀನಾ, ಫ್ರಾನ್ಸ್ ವಿರೋಧ

ಹಾರ್ಮುಝ್‌ ಜಲಸಂಧಿಯಲ್ಲಿ ವಿಶ್ವಸಂಸ್ಥೆ ಮಿಲಿಟರಿ ಕ್ರಮಕ್ಕೆ ರಷ್ಯ, ಚೀನಾ, ಫ್ರಾನ್ಸ್ ವಿರೋಧ

ವಿಶ್ವಸಂಸ್ಥೆ, ಎ.3: ಹಾರ್ಮುಝ್‌ ಜಲಸಂಧಿಯನ್ನು ಪುನಃ ತೆರೆಯಲು ಮಿಲಿಟರಿ ಕ್ರಮಕ್ಕಾಗಿ ಅಂತರರಾಷ್ಟ್ರೀಯ ಬೆಂಬಲವನ್ನು ಪಡೆಯುವ ಗುರಿಯನ್ನು ಹೊಂದಿರುವ ಅರಬ್ ಉಪಕ್ರಮವನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ರಷ್ಯ, ಚೀನಾ ಮತ್ತು ಫ್ರಾನ್ಸ್ ತಡೆಯಿವೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಹಾರ್ಮುಝ್‌ ಜಲಸಂಧಿಯಲ್ಲಿ ಭದ್ರತೆ ಖಾತರಿಪಡಿಸುವ ಪ್ರಸ್ತಾಪವನ್ನು ಒಳಗೊಂಡಿರುವ ಕರಡು ನಿರ್ಣಯದಲ್ಲಿನ ಕೆಲವು ಅಂಶಗಳ ಬಗ್ಗೆ ರಷ್ಯ ಮತ್ತು ಚೀನಾ ಆಕ್ಷೇಪ ಎತ್ತಿದ ಬಳಿಕ ಪರಿಷ್ಕರಣೆ ಮಾಡಲಾಗಿದೆ ಎಂದು ವರದಿ ಹೇಳಿದೆ.

ಆರಂಭಿಕ ಕರಡು ನಿರ್ಣಯವು ಹಾರ್ಮುಝ್‌ ಜಲಸಂಧಿ, ಗಲ್ಫ್ ಮತ್ತು ಒಮಾನ್ ಕೊಲ್ಲಿಯಲ್ಲಿ ಮಾರ್ಗವನ್ನು ಸುರಕ್ಷಿತಗೊಳಿಸಲು ಮತ್ತು ಸಂಚಾರದಲ್ಲಿ ಹಸ್ತಕ್ಷೇಪದ ಪ್ರಯತ್ನಗಳನ್ನು ತಡೆಯಲು ಎಲ್ಲಾ 'ಅಗತ್ಯ ವಿಧಾನಗಳನ್ನು ಬಳಸಲು' (ಸಂಭಾವ್ಯ ಮಿಲಿಟರಿ ಕ್ರಮಗಳನ್ನು ಒಳಗೊಂಡಂತೆ) ದೇಶಗಳಿಗೆ ಅವಕಾಶ ನೀಡುತ್ತಿತ್ತು.

ಆದರೆ ವೀಟೊ ಅಧಿಕಾರ ಹೊಂದಿರುವ ರಷ್ಯ, ಚೀನಾ ಮತ್ತು ಫ್ರಾನ್ಸ್ 'ಬಲ ಪ್ರಯೋಗ'ದ ಉಲ್ಲೇಖವನ್ನು ವಿರೋಧಿಸಿವೆ. ಪರಿಷ್ಕರಿಸಿದ ಕರಡು ನಿರ್ಣಯದಲ್ಲಿ 'ಆಕ್ರಮಣಕಾರಿ ಮಿಲಿಟರಿ ಕ್ರಮವನ್ನು ಅನುಮತಿಸುವ' ಉಲ್ಲೇಖವನ್ನು ತೆಗೆದುಹಾಕಲಾಗಿದೆ. ಹಾರ್ಮುಝ್‌ ಜಲಸಂಧಿ ಹಾಗೂ ಪಕ್ಕದ ನೀರಿನಲ್ಲಿ ಸಂದರ್ಭಕ್ಕೆ ಅನುಗುಣವಾಗಿ ಎಲ್ಲಾ ರಕ್ಷಣಾತ್ಮಕ ವಿಧಾನಗಳನ್ನು ಬಳಸಲು ಮತ್ತು ಕನಿಷ್ಠ 6 ತಿಂಗಳ ಅವಧಿಗೆ ಅಂತಾರಾಷ್ಟ್ರೀಯ ಸಂಚಾರದಲ್ಲಿ ಹಸ್ತಕ್ಷೇಪಗಳನ್ನು ತಡೆಯಲು ಅವಕಾಶ ನೀಡಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi