Dailyhunt Logo
  • Light mode
    Follow system
    Dark mode
    • Play Story
    • App Story
ಹಾರ್ಮುಝ್‌ಗೆ `ಟ್ರಂಪ್ ಜಲಸಂಧಿ'ಯೆಂದು ಮರುನಾಮಕರಣ ಮಾಡಿದ ಟ್ರಂಪ್ !

ಹಾರ್ಮುಝ್‌ಗೆ `ಟ್ರಂಪ್ ಜಲಸಂಧಿ'ಯೆಂದು ಮರುನಾಮಕರಣ ಮಾಡಿದ ಟ್ರಂಪ್ !

ವಾಶಿಂಗ್ಟನ್, ಎ.30: ಆಯಕಟ್ಟಿನ ಹಾರ್ಮುಝ್‌ ಜಲಸಂಧಿಯನ್ನು `ಟ್ರಂಪ್ ಜಲಸಂಧಿ' ಎಂದು ಮರುನಾಮಕರಣ ಮಾಡಿರುವ ಮಾರ್ಪಡಿಸಿದ ನಕ್ಷೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್' ಗುರುವಾರ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

`ಹಾರ್ಮುಝ್‌' ಹೆಸರಿನ ಬದಲಿಗೆ ಟ್ರಂಪ್ ಎಂಬ ಹೆಸರನ್ನು ಹೊಂದಿರುವ ನಕ್ಷೆಯನ್ನು ಟ್ರಂಪ್ ತಮ್ಮ ಟ್ರುಥ್ ಸೋಶಿಯಲ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಇದಕ್ಕೂ ಮುನ್ನ ಮಾರ್ಚ್ 27ರಂದು ಮಿಯಾಮಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಟ್ರಂಪ್ ` ಟ್ರಂಪ್ ಜಲಸಂಧಿ, ಕ್ಷಮಿಸಿ, ಹಾರ್ಮುಝ್ ಜಲಸಂಧಿಯನ್ನು ತೆರೆಯುವಂತೆ ಇರಾನ್ ಅನ್ನು ಅಮೆರಿಕ ಆಗ್ರಹಿಸುತ್ತದೆ' ಎಂದು ಹೇಳಿಕೆ ನೀಡಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Varthabharathi