ಡೆಹ್ರಾಡೂನ್, ಆ. 28: ನೆರೆಯ ನೇಪಾಳದಲ್ಲಿ ಸಂಭವಿಸಿದ ಭೀಕರ ದಿಢೀರ್ ಪ್ರವಾಹದ ಹಿನ್ನೆಲೆಯಲ್ಲಿ, ಹಿಮ ಸರೋವರಗಳು, ಹಿಮನದಿಗಳು ಮತ್ತು ಇತರ ಅಪಾಯಕಾರಿ ಸ್ಥಳಗಳ ಮೇಲಿನ ನಿಗಾವನ್ನು ಹೆಚ್ಚಿಸಲು ಉತ್ತರಾಖಂಡ ನಿರ್ಧರಿಸಿದೆ ಎಂದು ರಾಜ್ಯದ ವಿಪತ್ತು ನಿರ್ವಹಣೆ ಮತ್ತು ಪುನರ್ವಸತಿ ಸಚಿವ ಮದನ್ ಕೌಶಿಕ್ ಶುಕ್ರವಾರ ತಿಳಿಸಿದ್ದಾರೆ.
ರಾಜ್ಯದಲ್ಲಿ ಪ್ರಾಕೃತಿಕ ವಿಪತ್ತುಗಳು ವ್ಯಾಪಕವಾಗಿ ಸಂಭವಿಸುತ್ತವೆ ಎಂದು ಹೇಳಿದ ಸಚಿವರು, ವಿಪತ್ತುಗಳನ್ನು ಎದುರಿಸುವ ಸಿದ್ಧತೆಗಳನ್ನು ಬಲಪಡಿಸಲು ಹಾಗೂ ಪ್ರಾಣ ಮತ್ತು ಸೊತ್ತುಗಳಿಗೆ ಎದುರಾಗುವ ಅಪಾಯವನ್ನು ಕಡಿಮೆಗೊಳಿಸಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದರು.
''ನೇಪಾಳದಲ್ಲಿ ಇತ್ತೀಚೆಗೆ ಸಂಭವಿಸಿದ ವಿಪತ್ತಿನಿಂದ ನಾವು ಪಾಠಗಳನ್ನು ಕಲಿಯುತ್ತಿದ್ದೇವೆ. ಹಿಮ ಸರೋವರಗಳು, ಹಿಮನದಿಗಳು ಮತ್ತು ಇತರ ಅಪಾಯಕಾರಿ ಸ್ಥಳಗಳ ಮೇಲಿನ ನಿಗಾವನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ'' ಎಂದು ಕೌಶಿಕ್ ನುಡಿದರು.

