ಮುಂಬೈ,ಜು.5: ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ರವಿವಾರ ಅಯೋಧ್ಯೆಯ ರಾಮ ಮಂದಿರದ ದೇಣಿಗೆ ದುರುಪಯೋಗದ ವಿರುದ್ಧ ತನ್ನ 'ರಾಮ ರಕ್ಷಾ' ಆಂದೋಲನಕ್ಕೆ ಚಾಲನೆ ನೀಡಿದರು. ಇದೇ ವೇಳೆ ಆಡಳಿತಾರೂಢ ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದ ಅವರು, 'ಹಿಂದೂಗಳನ್ನು ಲೂಟಿ ಮಾಡುವವರೇ ಅಧಿಕಾರದಲ್ಲಿದ್ದಾರೆ' ಎಂದು ಹೇಳಿದರು.
ದಾದರ್‌ನ ಹನುಮಾನ್ ದೇವಾಲಯದ ಹೊರಗೆ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಪ್ರಕರಣದ ಬಗ್ಗೆ ನಿಷ್ಪಕ್ಷ ತನಿಖೆಯಾಗಬೇಕು ಎಂದು ಒತ್ತಾಯಿಸಿದರು. ಹಿಂದುತ್ವವನ್ನು ದುರುಪಯೋಗಪಡಿಸಿಕೊಂಡು ದೇವಸ್ಥಾನವನ್ನು ಲೂಟಿ ಮಾಡುವವರನ್ನು ಹಿಂದೂಗಳು ಸುಮ್ಮನೆ ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
'ಅಯೋಧ್ಯೆ ಕೇವಲ ಒಂದು ಟ್ರೈಲರ್, ಕಾಶಿ ಮತ್ತು ಮಥುರಾ ಇನ್ನೂ ಬಾಕಿ ಇವೆ' ಎಂಬ ಘೋಷಣೆಯನ್ನು ಪ್ರಸ್ತಾವಿಸಿದ ಠಾಕ್ರೆ, ಕಾಶಿ ಮತ್ತು ಮಥುರಾದಲ್ಲಿ ಏನಾಗಬಹುದು ಎಂಬ ಆತಂಕ ತನಗಿದೆ ಎಂದು ಹೇಳಿದರು.
'ನಾವು ತೀವ್ರವಾದಿಗಳಾಗಿದ್ದೇವೆ. ರಾಷ್ಟ್ರಪ್ರೇಮಿ ಹಿಂದೂಗಳೂ ಆಗಿದ್ದೇವೆ. ಆದರೆ ನಾವು ಮೂರ್ಖರಲ್ಲ' ಎಂದು ಅವರು ಹೇಳಿದರು.

