Dailyhunt
ICC ನೀತಿ ಸಂಹಿತೆ ಉಲ್ಲಂಘನೆ: ಅಭಿಷೇಕ್ ಶರ್ಮಾಗೆ ದಂಡ

ICC ನೀತಿ ಸಂಹಿತೆ ಉಲ್ಲಂಘನೆ: ಅಭಿಷೇಕ್ ಶರ್ಮಾಗೆ ದಂಡ

ಹೊಸದಿಲ್ಲಿ, ಎ.3: ಸನ್‌ರೈಸರ್ಸ್ ಹೈದರಾಬಾದ್ ತಂಡದ ಆಲ್‌ರೌಂಡರ್ ಅಭಿಷೇಕ್ ಶರ್ಮಾಗೆ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಗುರುವಾರ ನಡೆದ ಪಂದ್ಯದ ವೇಳೆ IPL ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ದಂಡ ವಿಧಿಸಲಾಗಿದೆ.

ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ತೋರಿದ ಅನುಚಿತ ವರ್ತನೆಗೆ ಅಭಿಷೇಕ್‌ಗೆ ಪಂದ್ಯ ಶುಲ್ಕದಲ್ಲಿ ಶೇ.25ರಷ್ಟು ದಂಡ ಹಾಗೂ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ.

ಅಭಿಷೇಕ್ ಅವರು ಅಸಭ್ಯ ಭಾಷೆ ಬಳಸಿ IPL ನೀತಿ ಸಂಹಿತೆಯ ಆರ್ಟಿಕಲ್ 2.3 ಅನ್ನು ಉಲ್ಲಂಘಿಸಿರುವುದು ಕಂಡುಬಂದಿದೆ.

ಅಭಿಷೇಕ್ ಅವರು ಆರ್ಟಿಕಲ್ 2.3ರ ಅಡಿಯಲ್ಲಿ ಲೆವೆಲ್ 1ರ ತಪ್ಪನ್ನು ಒಪ್ಪಿಕೊಂಡಿದ್ದು, ಮ್ಯಾಚ್ ರೆಫರಿಯ ಶಿಕ್ಷೆಯನ್ನು ಸ್ವೀಕರಿಸಿದ್ದಾರೆ. ಮ್ಯಾಚ್ ರೆಫರಿಯ ತೀರ್ಮಾನವೇ ಅಂತಿಮ ಎಂದು ಲೀಗ್ ಹೇಳಿಕೆಯಲ್ಲಿ ತಿಳಿಸಿದೆ.

ಅಭಿಷೇಕ್ ಅವರು ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಕೇವಲ 21 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳ ಸಹಿತ 48 ರನ್ ಗಳಿಸಿದ್ದರು. ನಂತರ ಝಿಂಬಾಬ್ವೆಯ ವೇಗದ ಬೌಲರ್ ಬ್ಲೆಸ್ಸಿಂಗ್ ಮುಝರ್ಬನಿಗೆ ವಿಕೆಟ್ ಒಪ್ಪಿಸಿದರು. ಔಟಾಗಿ ಪೆವಿಲಿಯನ್‌ಗೆ ವಾಪಸಾಗುವ ವೇಳೆ ತಮ್ಮ ಹತಾಶೆಯನ್ನು ವ್ಯಕ್ತಪಡಿಸಿದ್ದರು.

ಅಭಿಷೇಕ್ ಶಿಕ್ಷೆಗೆ ಕಾರಣವಾದ ಘಟನೆ ಏನು ಎಂಬುದನ್ನು ಲೀಗ್ ಸ್ಪಷ್ಟಪಡಿಸಿಲ್ಲ.

Dailyhunt
Disclaimer: This content has not been generated, created or edited by Dailyhunt. Publisher: Varthabharathi