Dailyhunt
IPL 2026 | 'ನಾನೇನಾದರೂ ಐಪಿಎಲ್ ಮುಖ್ಯಸ್ಥನಾಗಿದ್ದರೆ ಸಂಜೀವ್ ಗೋಯೆಂಕಾರನ್ನು ನಿಷೇಧಿಸುತ್ತಿದ್ದೆ': ಲಲಿತ್ ಮೋದಿ

IPL 2026 | 'ನಾನೇನಾದರೂ ಐಪಿಎಲ್ ಮುಖ್ಯಸ್ಥನಾಗಿದ್ದರೆ ಸಂಜೀವ್ ಗೋಯೆಂಕಾರನ್ನು ನಿಷೇಧಿಸುತ್ತಿದ್ದೆ': ಲಲಿತ್ ಮೋದಿ

ಹೊಸದಿಲ್ಲಿ: ಲಕ್ನೊದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ದಿಲ್ಲಿ ಕ್ಯಾಪಿಟಲ್ಸ್ ವಿರುದ್ಧ ಲಕ್ನೊ ಸೂಪರ್ ಜೇಂಟ್ಸ್ ತಂಡ ಸೋಲಿನ ಬಳಿಕ, ತಂಡದ ನಾಯಕ ರಿಷಭ್ ಪಂತ್ ಹಾಗೂ ತಂಡದ ಮುಖ್ಯಸ್ಥ ಸಂಜೀವ್ ಗೋಯೆಂಕಾ ನಡುವಿನ ಮಾತುಕತೆ ವಿವಾದಕ್ಕೆ ಕಾರಣವಾಗಿದೆ.

ಪಂದ್ಯ ಮುಕ್ತಾಯದ ನಂತರ ಮೈದಾನದಲ್ಲೇ ನಡೆದ ಮಾತುಕತೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಗೋಯೆಂಕಾ ಅವರು ಪಂತ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದಂತೆ ಕಾಣಿಸಿಕೊಂಡಿದೆ.

ಧ್ವನಿ ಸ್ಪಷ್ಟವಾಗದಿದ್ದರೂ, ಈ ದೃಶ್ಯ ಹಲವು ಊಹಾಪೋಹಗಳಿಗೆ ದಾರಿ ಮಾಡಿಕೊಟ್ಟಿದೆ.

ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಐಪಿಎಲ್‌ ನ ಮಾಜಿ ಮುಖ್ಯಸ್ಥ ಲಲಿತ್ ಮೋದಿ, ಗೋಯೆಂಕಾ ವರ್ತನೆಗೆ ಕಟುವಾಗಿ ಟೀಕಿಸಿದ್ದಾರೆ. "ನಾನು ಇನ್ನೂ ಐಪಿಎಲ್ ಮುಖ್ಯಸ್ಥನಾಗಿದ್ದರೆ, ಸಂಜೀವ್ ಗೋಯೆಂಕಾರನ್ನು ತಕ್ಷಣವೇ ನಿಷೇಧಿಸುತ್ತಿದ್ದೆ. ಆಟಗಾರರು ಮತ್ತು ಅಭಿಮಾನಿಗಳ ಗೌರವ ಕಾಪಾಡುವುದು ಮುಖ್ಯ," ಎಂದು ಅವರು ಎಕ್ಸ್‌ ನಲ್ಲಿ ಹೇಳಿದ್ದಾರೆ.

ಇಂಗ್ಲೆಂಡ್‌ನ ಮಾಜಿ ನಾಯಕ ಮೈಕೇಲ್ ವಾನ್ ಕೂಡ ಪ್ರತಿಕ್ರಿಯಿಸಿ, "ಇದು ಕೇವಲ ಒಂದು ಪಂದ್ಯ. ಇಂತಹ ವರ್ತನೆ ಅಗತ್ಯವಿರಲಿಲ್ಲ," ಎಂದು ಅಭಿಪ್ರಾಯಪಟ್ಟಿದ್ದಾರೆ.

ಇನ್ನೊಂದೆಡೆ, ಲಕ್ನೊ ಸೂಪರ್ ಜೇಂಟ್ಸ್ ತಂಡವು ಘಟನೆಗೆ ಸ್ಪಷ್ಟನೆ ನೀಡಿದೆ. ಪಂತ್ ಹಾಗೂ ಗೋಯೆಂಕಾ ನಡುವಿನ ಮಾತುಕತೆಯ ಮತ್ತೊಂದು ವಿಡಿಯೊ ಬಿಡುಗಡೆ ಮಾಡಿರುವ ತಂಡ, "ಸಂಪೂರ್ಣ ದೃಶ್ಯವನ್ನು ತಪ್ಪಾಗಿ ಅರ್ಥೈಸಲಾಗಿದೆ," ಎಂದು ಹೇಳಿದೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi