Dailyhunt Logo
  • Light mode
    Follow system
    Dark mode
    • Play Story
    • App Story
IPL 2026 : ಸಮಾಧಾನಕರ ಗೆಲುವಿನೊಂದಿಗೆ 'ಆರಕ್ಕೇರಿದ' ಡೆಲ್ಲಿ

IPL 2026 : ಸಮಾಧಾನಕರ ಗೆಲುವಿನೊಂದಿಗೆ 'ಆರಕ್ಕೇರಿದ' ಡೆಲ್ಲಿ

ಹೊಸದಿಲ್ಲಿ: ಕೆ.ಎಲ್. ರಾಹುಲ್ ಹಾಗೂ ಕುಲದೀಪ್ ಯಾದವ್ ಅವರ ಭರ್ಜರಿ ಪ್ರದರ್ಶನದೊಂದಿಗೆ ಪ್ರಸಕ್ತ ವರ್ಷದ ಐಪಿಎಲ್ ಟೂರ್ನಿಯ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 40 ರನ್‌ಗಳ ಜಯ ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಂಕಪಟ್ಟಿಯಲ್ಲಿ ಆರನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿದೆ.

ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು ಸಾಧಿಸಿದ ರಾಜಸ್ಥಾನ ರಾಯಲ್ಸ್ ಪ್ಲೇಆಫ್‌ಗೆ ಮುನ್ನಡೆದ ಕಾರಣ, ಅಂತಿಮ ಪಂದ್ಯಕ್ಕೆ ಮುನ್ನವೇ ಕೆಕೆಆರ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಟೂರ್ನಿಯಿಂದ ಹೊರಬಿದ್ದಿದ್ದವು. ಶನಿವಾರದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಿಬಿಕೆಎಸ್ ಜಯ ಸಾಧಿಸಿದ ಹಿನ್ನೆಲೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಆಫ್ ಹಂತಕ್ಕೇರುವ ಆಸೆಗೆ ತಣ್ಣೀರೆರಚಿದ್ದು, ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಕೊನೆಯ ಪಂದ್ಯ ಕೇವಲ ಔಪಚಾರಿಕ ಎನಿಸಿತ್ತು.

ಟಾಸ್ ಗೆದ್ದು ಅಜಿಂಕ್ಯ ರಹಾನೆ ನೇತೃತ್ವದ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಕೆ.ಎಲ್. ರಾಹುಲ್ 30 ಎಸೆತಗಳಲ್ಲಿ 60 ರನ್ ಸಿಡಿಸಿ, ಡೆಲ್ಲಿ ಕ್ಯಾಪಿಟಲ್ಸ್ 5 ವಿಕೆಟ್ ನಷ್ಟಕ್ಕೆ 203 ರನ್ ಗಳಿಸಿತು. ರಾಹುಲ್ ಪ್ರಸಕ್ತ ಸೀಸನ್‌ನ ಆರನೇ ಅರ್ಧಶತಕ ಗಳಿಸಿದರು. ಗೆಲ್ಲಲು 204 ರನ್ ಅಗತ್ಯವಿದ್ದ ಕೆಕೆಆರ್ 18.4 ಓವರ್‌ಗಳಲ್ಲಿ 163 ರನ್‌ಗಳಿಗೆ ಆಲೌಟ್ ಆಯಿತು. 29 ರನ್‌ಗಳಿಗೆ 3 ವಿಕೆಟ್ ಕಿತ್ತ ಕುಲದೀಪ್ ಯಾದವ್ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದರು. ಲುಂಗಿ ಗಿಡಿ (27ಕ್ಕೆ 3) ಹಾಗೂ ಮಿಚೆಲ್ ಸ್ಟಾರ್ಚ್ (26ಕ್ಕೆ 2) ಕೂಡಾ ಎದುರಾಳಿ ಬ್ಯಾಟರ್‌ಗಳನ್ನು ಕಟ್ಟಿಹಾಕುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.

ಈ ಗೆಲುವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ 14 ಅಂಕಗಳೊಂದಿಗೆ ಕೊಲ್ಕತ್ತಾವನ್ನು ಹಿಂದಿಕ್ಕಿ ಆರನೇ ಸ್ಥಾನಕ್ಕೇರಿತು. 15 ಅಂಕ ಪಡೆದ ಪಿಬಿಕೆಎಸ್ ಐದನೇ ಸ್ಥಾನಿಯಾಗಿ ಹಾಗೂ 13 ಅಂಕ ಪಡೆದ ಕೆಕೆಆರ್ ಏಳನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿದವು.

Dailyhunt
Disclaimer: This content has not been generated, created or edited by Dailyhunt. Publisher: Varthabharathi