Dailyhunt
ಇರಾನ್‌ನಲ್ಲಿ ಸಿಲುಕಿದ್ದ ಭಾರತೀಯ ಮೀನುಗಾರರ ತಂಡ ಭಾರತಕ್ಕೆ ವಾಪಸ್

ಇರಾನ್‌ನಲ್ಲಿ ಸಿಲುಕಿದ್ದ ಭಾರತೀಯ ಮೀನುಗಾರರ ತಂಡ ಭಾರತಕ್ಕೆ ವಾಪಸ್

ಹೊಸದಿಲ್ಲಿ, ಎ. 4: ಯುದ್ಧ ಪೀಡಿತ ಇರಾನ್‌ನಲ್ಲಿ ಸಿಲುಕಿದ್ದ 345 ಮಂದಿ ಭಾರತೀಯ ಮೀನುಗಾರರ ಗುಂಪೊಂದು ಅರ್ಮೇನಿಯಾ ಮೂಲಕ ಭಾರತಕ್ಕೆ ಹಿಂದಿರುಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.

ಮೀನುಗಾರರು ಹಿಂದಿರುಗಲು ನೆರವಾಗಿರುವ ಅರ್ಮೇನಿಯಾದ ವಿದೇಶಾಂಗ ಸಚಿವ ಅರರಾತ್ ಮಿರೆರ್ಯಾನ್ ಅವರಿಗೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.

ಜೈಶಂಕರ್ ಕೃತಜ್ಞತೆ ಸಲ್ಲಿಸಿದ್ದಾರೆ.

ಒಂದು ತಿಂಗಳ ಹಿಂದೆ ಪಶ್ಚಿಮ ಏಶ್ಯಾ ಸಂಘರ್ಷ ಆರಂಭವಾದ ಬಳಿಕ 1,150ಕ್ಕೂ ಅಧಿಕ ಭಾರತೀಯ ಪ್ರಜೆಗಳು ಅರ್ಮೇನಿಯಾ ಹಾಗೂ ಅಝಬೈಜಾನ್ ಭೂ ಗಡಿ ದಾಟುವ ಮೂಲಕ ಇರಾನ್ ತೊರೆದಿದ್ದಾರೆ.

ಇರಾನ್‌ನಲ್ಲಿ ಸಿಲುಕಿದ್ದ ಭಾರತೀಯ ಮೀನುಗಾರರ ತಂಡ ಭಾರತಕ್ಕೆ ಹಿಂದಿರುಗಿದೆ. ತಮಿಳುನಾಡು ಹಾಗೂ ಇತರ ರಾಜ್ಯಗಳ ಕರಾವಳಿಯ ಮೀನುಗಾರರನ್ನು ಒಳಗೊಂಡ ತಂಡವಿದ್ದ ವಿಮಾನ ಇಂದು ಸಂಜೆ ಚೆನ್ನೈ ತಲುಪಿದೆ ಎಂದು ಪ್ರಕಟಣೆ ತಿಳಿಸಿದೆ.

ಆಗಮನದ ಔಪಚಾರಿಕತೆ ಮೇಲ್ವಿಚಾರಣೆಗೆ ಹಾಗೂ ಅವರು ತಮ್ಮ ಊರುಗಳಿಗೆ ತೆರಳಲು ಸಾರಿಗೆ ವ್ಯವಸ್ಥೆ, ವೈದ್ಯಕೀಯ ತಪಾಸಣೆ ಸೇರಿದಂತೆ ಅಗತ್ಯದ ನೆರವು ಒದಗಿಸಲು ವಿಮಾನ ನಿಲ್ದಾಣದಲ್ಲಿ ತಮಿಳುನಾಡು ಮೀನುಗಾರಿಕೆ ಇಲಾಖೆ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಗಳು ಇದ್ದರು.

ಇರಾನ್‌ನಿಂದ ಹಿಂದಿರುಗಿದ ಎಲ್ಲಾ ಮೀನುಗಾರರು ಆರೋಗ್ಯವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi